ETV Bharat / assembly-elections

ಚುನಾವಣೆ ಘೋಷಣೆ ಬೆನ್ನಲ್ಲೇ ರಾಜಕೀಯ ಅಖಾಡವಾದ ಹೊನ್ನಾಳಿ ವಿಧಾನಸಭಾ ಕ್ಷೇತ್ರ: ಕೈ-ಕಮಲ ನಡುವೆ ಹಣಾಹಣಿ, ಜೆಡಿಎಸ್​ ಪಾತ್ರ ಹೀಗಿದೆ - ಮುಂಬರುವ ವಿಧಾನಸಭಾ ಚುನಾವಣೆ

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಲೆಕ್ಕಾಚಾರ ಜೋರಾಗಿದೆ. ಬಿಜೆಪಿ, ಕಾಂಗ್ರೆಸ್​ಹಾಗೂ ಜೆಡಿಎಸ್​ ಸೇರಿದಂತೆ ಇತರೆ ಪಕ್ಷಗಳು ತಮ್ಮ ತಮ್ಮ ಬಲವಾದ ನಂಬಿಕೆಯೊಂದಿಗೆ ಪ್ರಚಾರದಲ್ಲಿ ತೊಡಗಿವೆ. ಹೊನ್ನಾಳಿ ವಿಧಾನಸಭಾ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಕ್ಷೇತ್ರದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೋಡುವುದಾದರೆ.

Details of Honnali Assembly Constituency

author img

By

Published : Mar 29, 2023, 7:11 PM IST

Updated : Mar 29, 2023, 7:52 PM IST

ದಾವಣಗೆರೆ: ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಜೋರಾಗಿದೆ. ಹಲವು ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ಕ್ಷೇತ್ರದಲ್ಲಿ ಇದೀಗ ರಾಜಕೀಯ ಲೆಕ್ಕಾಚಾರ ಶುರುವಾಗಿದೆ. ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಹಾಗೂ ಇತರೆ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಗೂ ಮುನ್ನ ಗೆಲವು ತಮ್ಮದೇ ಎಂದು ಹೇಳಿಕೊಂಡು ಓಡಾಡಿಕೊಂಡಿದ್ದಾರೆ. ಆದರೆ, ಮತದಾರ ಯಾರಿಗೆ ಮಣೆ ಹಾಕುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

Details of Honnali Assembly Constituency
ಪಕ್ಷವಾರು ಮತಗಳು (ಶೇಕಡವಾರುಗಳಲ್ಲಿ)

ಹಾಲಿ ಶಾಸಕ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಎಂ ಪಿ ರೇಣುಕಾಚಾರ್ಯ ಬಿಜೆಪಿಯಿಂದ ಮತ್ತೆ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. ಇತ್ತ ಈ ಬಾರಿ ಇವರನ್ನು ಸೋಲಿಸಲು ಕಾಂಗ್ರೆಸ್ ತಂತ್ರ ಪ್ರತಿತಂತ್ರ ರೂಪಿಸುತ್ತಿದ್ದು, ಸೂಕ್ತ ಅಭ್ಯರ್ಥಿಯ ಹುಡುಕಾಟಲ್ಲಿದೆ. ಇದರ ಮಧ್ಯೆ ಜೆಡಿಎಸ್​ ಸೇರಿದಂತೆ ಇತರೆ ಪಕ್ಷಗಳು ತಮ್ಮದೇಯಾದ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿವೆ. ಆದರೆ, ಜೆಡಿಎಸ್​ ಹೊರತು ಉಳಿದ ಯಾವುದೇ ರಾಜಕೀಯ ಪಕ್ಷಗಳು ತಮ್ಮ ಅಧಿಕೃತ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಸದ್ಯಕ್ಕೆ ಕಾದು ನೋಡುವ ತಂತ್ರ ರೂಪಿಸಿವೆ. ಹಾಗಾಗಿ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.

ಪುರುಷ ಮತ್ತು ಸ್ತ್ರೀ ಮತದಾರರ ಪಕ್ಷಿ ನೋಟ

ಶತಾಯಗತಾಯ ಹಾಲಿ ಶಾಸಕರಿಗೆ ಸೋಲಿನ ರುಚಿ ತೋರಿಸಬೇಕು ಎಂದು ಕಾಂಗ್ರೆಸ್ ತಂತ್ರ ಮಾಡಿದರೆ, ಇತ್ತ ರೇಣುಕಾಚಾರ್ಯ ಈಗಾಗಲೇ ಕ್ಷೇತ್ರವಾರು ಪ್ರಚಾರ ನಡೆಸುತ್ತಿದ್ದಾರೆ. ಆದರೆ, ರಾಜಕೀಯದ ಹಾವು-ಏಣಿ ಆಟದಿಂದ ಮತ್ತು ಬದಲಾದ ಕೆಲವು ಸನ್ನಿವೇಶಗಳಿಂದ ಕ್ಷೇತ್ರ ಯಾರ ಕೈ ವಶವಾಗುತ್ತದೆ ಅನ್ನೋದು ಕುತೂಹಲ ತರಿಸಿದೆ.

ಯಾವ ಪಕ್ಷ ಎಷ್ಟು ಬಾರಿ ಗೆಲವು ಸಾಧಿಸಿದೆ ಎಂಬ ಪಕ್ಷಿ ನೋಟ

ಟಿಕೆಟ್ ಆಕಾಂಕ್ಷಿತರು:​ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡುವುದು ಹೆಚ್ಚು. ಆದರೆ, ಬದಲಾದ ರಾಜಕೀಯ ಸ್ಥಿತ್ಯಂತರ ಜೆಡಿಎಸ್​ ಸೇರಿದಂತೆ ಇತರೆ ಪಕ್ಷಕ್ಕೂ ವರದಾನವಾಗಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಪ್ರಮುಖ ಮೂರು ಪಕ್ಷಗಳಿಂದ ಟಿಕೆಟ್​ ಆಕಾಂಕ್ಷಿತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದಾರೆ. ಹಾಲಿ ಶಾಸಕ ಎಂ ಪಿ ರೇಣುಕಾಚಾರ್ಯ, ಮಾಜಿ ಜಿಪಂ ಸದಸ್ಯ ಎಂಆರ್ ಮಹೇಶ್ ಸೇರಿದಂತೆ ಬಿಜೆಪಿಯಿಂದ ಹಲವರು ಟಿಕೆಟ್​ ಸಿಗುವ ವಿಶ್ವಾಸದಲ್ಲಿದ್ದಾರೆ. ಇತ್ತ ಕಾಂಗ್ರೆಸ್​ನಿಂದಲೂ ಕೂಡ ಟಿಕೆಟ್​ಗಾಗಿ ಪೈಪೋಟಿ ಜೋರಾಗಿದೆ. ಮಾಜಿ ಶಾಸಕ ಡಿ ಜಿ ಶಾಂತನಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಬಿ ಮಂಜಪ್ಪಬಿ, ಮುಖಂಡ ಸಿದ್ದಪ್ಪ ಸೇರಿದಂತೆ ಹಲವರು ಕೈ ಪಕ್ಷದ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಜೆಡಿಎಸ್​ನಿಂದ ಘೋಷಿತ ಅಭ್ಯರ್ಥಿ ಶಿವಮೂರ್ತಿಗೌಡ ಕಣಕ್ಕಳಿಯಲಿದ್ದಾರೆ.

ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವಿವರ

ಕ್ಷೇತ್ರದ ಅಂದಾಜು ಮತದಾರರು: ಹೊನ್ನಾಳಿ ಮತಕ್ಷೇತ್ರದಲ್ಲಿ ಒಟ್ಟು 1,93,283 ಮತದಾರರಿದ್ದು, ಪುರುಷ ಮತದಾರರು 97,622 ಮಹಿಳಾ ಮತದಾರರು 95,657, ಇತರೆ 4 ಜನ ಇದ್ದಾರೆ. ಲಿಂಗಾಯತ ಸಮುದಾಯ ಈ ಕ್ಷೇತ್ರದಲ್ಲಿ ನಿರ್ಣಾಯಕವಾಗಿದೆ. ಇವರೊಂದಿಗೆ ಎಸ್ಸಿ-ಎಸ್ಟಿ, ಕುರುಬ, ಮುಸ್ಲಿಂ, ಮರಾಠ ಸಮುದಾಯಗಳು ಸಹ ಅಭ್ಯರ್ಥಿಗಳ ಗೆಲುವನ್ನು ನಿರ್ಧರಿಸಲಿವೆ.

ವಿಜೇತ ಮತ್ತು ಸೋತ ಅಭ್ಯರ್ಥಿಗಳ ನಡುವಿನ ಅಂತರ

ಮೂರು ಚುನಾವಣೆಗಳ ಇತಿಹಾಸ: ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದ್ದು ಹೆಚ್ಚು. 2008ರ ಚುನಾವಣೆಯಲ್ಲಿ ಈ ಕ್ಷೇತ್ರ ಬಿಜೆಪಿ ವಶವಾಗಿತ್ತು. 2008ರಲ್ಲಿ ಬಿಜೆಪಿ ಅಭ್ಯರ್ಥಿ ಎಂ ಪಿ ರೇಣುಕಾಚಾರ್ಯ 62483 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಡಿಜಿ ಶಾಂತನಗೌಡ ವಿರುದ್ಧ ಜಯ ಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಡಿಜಿ ಶಾಂತನಗೌಡ 56083 ಮತಗಳನ್ನು ಪಡೆದು ಸೋಲುಂಡಿದ್ದರು.

ಕ್ಷೇತ್ರದ ಮತದಾರರ ಬೆಳವಣಿಗೆ

2013 ಚುನಾವಣೆಯಲ್ಲಿ ಈ ಕ್ಷೇತ್ರ ಕಾಂಗ್ರೆಸ್ ವಶವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಡಿಜಿ ಶಾಂತನಗೌಡ 78789 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ ಕೆಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದ ಎಂಪಿ ರೇಣುಕಚಾರ್ಯ 60051 ಮತಗಳನ್ನು ಪಡೆದು ಪರಾಭವಗೊಂಡಿದ್ದರು. 2013ರ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಹೀನಾಯ ಸೋಲು ಕಂಡಿತ್ತು. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಪಿ ರೇಣುಕಾಚಾರ್ಯ 80624 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಡಿಜಿ ಶಾಂತನಗೌಡ ವಿರುದ್ಧ ಮತ್ತೆ ಗೆಲುವು ಸಾಧಿಸಿದ್ದರು. 76391 ಮತಗಳನ್ನು ಪಡೆದ ಡಿಜಿ ಶಾಂತನಗೌಡ, 4233 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು.

ಸ್ಥಾನವಾರು ವಿಧಾನಸಭೆ ಚುನಾವಣೆಯ ಪಕ್ಷಿ ನೋಟ

ಇದನ್ನೂ ಓದಿ: ಕರ್ನಾಟಕ ಚುನಾವಣೆಯಲ್ಲಿ ಸಂಪೂರ್ಣವಾಗಿ ಹೊಸ‌ ಮತಯಂತ್ರಗಳ ಬಳಕೆ: ಮನೋಜ್ ಕುಮಾರ್ ಮೀನಾ

Last Updated : Mar 29, 2023, 7:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.