ETV Bharat / assembly-elections

ಹೀಗಿದೆ ಬೆಂಗಳೂರು ನಗರದ 28 ಕ್ಷೇತ್ರಗಳ ಚಿತ್ರಣ: ಪಕ್ಷಗಳ ಬಲಾಬಲ ಎಷ್ಟಿದೆ ಗೊತ್ತಾ? - Calculation Of Assembly Constituency

28 ವಿಧಾನಸಭಾ ಮತ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ನಗರದಲ್ಲಿ ಚುನಾವಣಾ ಅಖಾಡ ಸಿದ್ಧಗೊಂಡಿದೆ. ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಭರದ ಪ್ರಚಾರದಲ್ಲಿ ತೊಡಗಿವೆ. ಕಳೆದ ಮೂರು ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಬಲಾಬಲ ಹೇಗಿತ್ತು? ಸದ್ಯ ಕ್ಷೇತ್ರದ ಲೆಕ್ಕಾಚಾರ ಹೇಗಿದೆ ಎಂಬುದರ ಕುರಿತು ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ಬೆಂಗಳೂರು ನಗರದ 28 ಕ್ಷೇತ್ರಗಳ ಚಿತ್ರಣ
ಬೆಂಗಳೂರು ನಗರದ 28 ಕ್ಷೇತ್ರಗಳ ಚಿತ್ರಣ
author img

By

Published : Apr 6, 2023, 4:46 PM IST

Updated : Apr 17, 2023, 12:19 PM IST

ಬೆಂಗಳೂರು: ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಚುನಾವಣೆ ಕಾವು ಏರಿದೆ. ಇನ್ನು ರಾಜಧಾನಿ ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಚುನಾವಣಾ ಅಖಾಡ ರೆಡಿಯಾಗಿದೆ. ನಗರದ 28 ಕ್ಷೇತ್ರಗಳ ಪೈಕಿ ಆನೇಕಲ್, ಬೆಂಗಳೂರು ದಕ್ಷಿಣ, ಮಹದೇವಪುರ, ಕೆ.ಆರ್.ಪುರ, ಹೆಬ್ಬಾಳ, ಸರ್ವಜ್ಱನಗರ, ಸಿ.ವಿ. ರಾಮನ್ ನಗರ, ಶಾಂತಿನಗರ, ಶಿವಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಪದ್ಮನಾಭನಗರ, ಜಯನಗರ, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಯಶವಂತಪುರ, ಮಲ್ಲೇಶ್ವರ, ದಾಸರಹಳ್ಳಿ, ರಾಜರಾಜೇಶ್ವರಿನಗರ ಕ್ಷೇತ್ರಗಳು ಸೇರಿ 19 ಕ್ಷೇತ್ರಗಳು ಸೂಕ್ಷ್ಮ ವಿಧಾನಸಭಾ ಕ್ಷೇತ್ರಗಳೆಂದು ಚುನಾವಣಾ ಆಯೋಗ ಗುರುತಿಸಿದೆ.

ಕಳೆದ ಬಾರಿಗಿಂತ ಈ ಬಾರಿಯ ವಿಧಾನಸಭೆ ಚುನಾವಣಾ ಅಖಾಡ ರಾಜಧಾನಿಯಲ್ಲಿ ಭಾರಿ ಜಿದ್ದಾಜಿದ್ದಿಯಿಂದ ಕೂಡಿರಲಿದೆ. ಎಲ್ಲ ಪಕ್ಷಗಳು ಈಗಾಗಲೇ ಪ್ರಚಾರ ಮಾಡುತ್ತಿದ್ದು, ಬೆಂಗಳೂರಿನ ಮತದಾರರ ಒಲವು ಯಾರ ಮೇಲಿದೆ ಎಂಬುದು ಚುನಾವಣೆ ಫಲಿತಾಂಶದ ದಿನವೇ ಗೊತ್ತಾಗಲಿದೆ. ಐಟಿಬಿಟಿ ಸಿಟಿಯಾಗಿರುವ ಬೆಂಗಳೂರಿನಲ್ಲಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಕೆಲಸ ಅರಿಸಿ ಬಂದಿರುವವರ ಸಂಖ್ಯೆಯೂ ದೊಡ್ಡದಿದೆ. ಹಾಗಾಗಿ, ಬೆಂಗಳೂರಿನಲ್ಲಿ ಹಲವು ಭಾಷಿಕರು ನೆಲೆಸಿದ್ದಾರೆ.

ಬೆಳೆದ ಬೆಂಗಳೂರಿನಲ್ಲಿ ಹಲವು ಸಮಸ್ಯೆಗಳು: ಬೆಂಗಳೂರು ಬೆಳೆದಿದೆ. ಹಿಂದೆ ಬೆಂಗಳೂರು ಮಹಾನಗರ ಪಾಲಿಕೆಯಾಗಿತ್ತು. ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿದೆ. ನಗರದ ಗಡಿ ಪ್ರದೇಶಗಳೂ ಈಗ ಮಹಾನಗರ ಪಾಲಿಕೆಗೆ ಸೇರಿದ್ದು, ಜನಸಂಖ್ಯೆ ಹೆಚ್ಚಾಗಿದೆ. ಇದಷ್ಟೇ ಅಲ್ಲ, ಐಟಿಬಿಟಿ ಕಂಪನಿಗಳು, ಹೊಸ ಹೊಸ ಕೈಗಾರಿಕೆಗಳು, ದೊಡ್ಡ ಡೊಡ್ಡ ಆಪಾರ್ಟ್​ಮೆಂಟ್​ಗಳು ತಲೆ ಎತ್ತಿವೆ.

ಇನ್ನು ಅಷ್ಟೇ ಸಮಸ್ಯೆಗಳು ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಇವೆ. ಮೂಲ ಸೌಲಭ್ಯದ ಕೊರತೆ, ರಸ್ತೆ, ಚರಂಡಿ ವ್ಯವಸ್ಥೆ, ರಾಜಕಾಲುವೆ ಒತ್ತುವರಿ, ಸಂಚಾರ ದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳು ಬಹುತೇಕ ಕ್ಷೇತ್ರಗಳಲ್ಲಿ ಕಾಣಬಹುದು. ಪ್ರತಿ ಮಳೆಗಾಲದಲ್ಲಿ ಬೆಂಗಳೂರಿನ ಹೃದಯಭಾಗದ ಕ್ಷೇತ್ರಗಳು ಸೇರಿದಂತೆ ಹೆಬ್ಬಾಳ, ಯಲಹಂಕ, ಕೆ.ಆರ್.ಪುರ, ಮಹದೇವಪುರ, ಬೊಮ್ಮನಹಳ್ಳಿ, ಶಾಂತಿನಗರ, ದಾಸರಹಳ್ಳಿ, ಪದ್ಮನಾಭನಗರ ಕ್ಷೇತ್ರಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ರಾಜಕಾಲುವೆ ಮುಚ್ಚಿರುವುದೇ ಇದಕ್ಕೆ ಮುಖ್ಯಕಾರಣ ಎಂದು ನಗರ ವಾಸಿಗಳ ಅಭಿಪ್ರಾಯ.

ಇನ್ನು ಸಂಚಾರ ಸಮಸ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹಿಂದೆ ಇದ್ದ ರಸ್ತೆಗಳು ಅಗಲ ಮಾಡಿಲ್ಲ. ಆದರೆ, ವಾಹನಗಳ ಸಂಖ್ಯೆ ಮಾತ್ರ ನಿತ್ಯ ಹೆಚ್ಚಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗಿ ನಿತ್ಯ ಟ್ರಾಫಿಕ್ ಕಿರಿಕಿರಿಯನ್ನು ಜನರು ಅನುಭವಿಸುತ್ತಿದ್ದಾರೆ. ಇದಕ್ಕೆ ಮುಂಬರುವ ಸರ್ಕಾರದಿಂದ ಮುಕ್ತಿ ಸಿಗುವುದೇ ಎಂಬ ನಿರೀಕ್ಷೆಯಲ್ಲಿ ರಾಜಧಾನಿಯ ಜನರು ಎದುರು ನೋಡುತ್ತಿದ್ದಾರೆ.

ಬೆಂಗಳೂರಿನಲ್ಲಿರುವ ಮತದಾರರೆಷ್ಟು?: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಟ್ಟು 95,13,830 ಮತದಾರರಿದ್ದಾರೆ. ಅದರಲ್ಲಿ ಪುರುಷ ಮತದಾರರ ಸಂಖ್ಯೆ 49,26,270, ಮಹಿಳಾ ಮತದಾರರು 45,85,824 ರಷ್ಟಿದ್ದಾರೆ. 18 ರಿಂದ 19ರ ವಯಸ್ಸಿನ 1,08,494 ಯುವ ಮತದಾರರಿದ್ದಾರೆ. ಇನ್ನು 80 ವರ್ಷ ವಯಸ್ಸಿನ 2,36,719 ಮಂದಿ ವೋಟರ್ಸ್​​ ಇದ್ದಾರೆ.

ಪಕ್ಷಗಳ ಬಲಾಬಲ: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಎಲ್ಲಾ 28 ಕ್ಷೇತ್ರಗಳಲ್ಲಿರುವ ಹಾಲಿ ಶಾಸಕರಿಗೆ ಎಲ್ಲ ಪಕ್ಷಗಳೂ ಟಿಕೆಟ್ ನೀಡುವ ಸಾಧ್ಯತೆ ಇದೆ. ಹಾಗಾಗಿ, ಹಾಲಿ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ಬಿರುಸುಗೊಳಿಸಿದ್ದಾರೆ. ಅಲ್ಲದೆ 2018 ರಲ್ಲಿ ಕಳೆದುಕೊಂಡ ಕ್ಷೇತ್ರಗಳ ಕಡೆಯೂ ಮೂರು ಪಕ್ಷಗಳು ಗಮನಹರಿಸಿವೆ. ಪ್ರಸ್ತುತ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಬಿಜೆಪಿ 15 ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್ 12 ಶಾಸಕರನ್ನು ಹೊಂದಿದೆ. ಇನ್ನು ಜೆಡಿಎಸ್ ಒಬ್ಬರು ಶಾಸಕರನ್ನು ಹೊಂದಿದೆ. ಅತಿ ಹೆಚ್ಚು ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಬೆಂಗಳೂರು ನಗರ ಜಿಲ್ಲೆ, ಈ ಪೈಕಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲು ಮೂರು ಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿವೆ.

2018 ರಲ್ಲಿ ಸೋಲು ಅನುಭವಿಸಿದ ಅನೇಕಲ್, ಹೆಬ್ಬಾಳ, ಜಯನಗರ, ಶಾಂತಿನಗರ ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಲೆಕ್ಕಾಚಾರ ಹಾಕುತ್ತಿದೆ. ಕಾಂಗ್ರೆಸ್ ಕೂಡ ಬೆಂಗಳೂರಿನಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಬೇಕೆಂದು ಅಳೆದು ತೂಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. 2018 ರಲ್ಲಿ ಚುನಾವಣೆಯಲ್ಲಿ ಜೆಡಿಎಸ್ ಬೆಂಗಳೂರಿನಲ್ಲಿ ಎರಡು ಕ್ಷೇತ್ರಗಳಲ್ಲಿ ಗೆದ್ದಿತ್ತು. ಮಹಾಲಕ್ಷ್ಮಿ ಲೇಔಟ್ ಹಾಗೂ ದಾಸರಹಳ್ಳಿ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಕಂಡಿತ್ತು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕೆ. ಗೋಪಾಲಯ್ಯ ಅವರು ಬಿಜೆಪಿ ಸೇರ್ಪಡೆಗೊಂಡ ನಂತರ ಜೆಡಿಎಸ್ ಸಂಖ್ಯಾ ಬಲ ಒಂದಕ್ಕೆ ಕುಸಿದಿದೆ. ಇದೀಗ ಐದು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು, ಕನಿಷ್ಠ ಮೂರು ಕ್ಷೇತ್ರಗಳಲ್ಲಾದರೂ ಗೆಲುವು ಸಾಧಿಸಬೇಕೆಂಬ ಲೆಕ್ಕಾಚಾರ ಹಾಕಿಕೊಂಡಿದೆ.

ಬೆಂಗಳೂರು ನಗರದ 28 ಕ್ಷೇತ್ರಗಳ ಚಿತ್ರಣ
ಬೆಂಗಳೂರು ನಗರದ 28 ಕ್ಷೇತ್ರಗಳ ಚಿತ್ರಣ

ಹಿಂದಿನ ಪಕ್ಷಗಳ ಬಲಾಬಲ: ಕಳೆದ ಮೂರು ಚುನಾವಣೆಗಳಲ್ಲಿ ಪಕ್ಷಗಳ ಬಲಾಬಲ ನೋಡುವುದಾದರೆ, 2008ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ 28 ಕ್ಷೇತ್ರಗಳ ಪೈಕಿ ಬಿಜೆಪಿ 17, ಕಾಂಗ್ರೆಸ್ 10 ಹಾಗೂ ಜೆಡಿಎಸ್ 1 ಸ್ಥಾನ ಗಳಿಸಿತ್ತು. ಅಂದು ಬಿಜೆಪಿ ಅಧಿಕಾರ ಹಿಡಿದಿತ್ತು. 2013 ರಲ್ಲಿ ಬೆಂಗಳೂರಿನ ಒಟ್ಟು 28 ಸ್ಥಾನಗಳಲ್ಲಿ ಬಿಜೆಪಿ 12, ಕಾಂಗ್ರೆಸ್ 14 ಹಾಗೂ ಜೆಡಿಎಸ್ 2 ಸ್ಥಾನ ಗಳಿಸಿತ್ತು. 2013 ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು. 2018 ರಲ್ಲಿ ಒಟ್ಟು 28 ಕ್ಷೇತ್ರಗಳಲ್ಲಿ ಬಿಜೆಪಿ 11 ಸ್ಥಾನ, ಕಾಂಗ್ರೆಸ್ 14 ಹಾಗೂ ಜೆಡಿಎಸ್ 3 ಸ್ಥಾನ ಗಳಿಸಿತ್ತು. ಯಾವ ಪಕ್ಷಕ್ಕೂ ಬಹುಮತ ಸಿಗದ ಕಾರಣ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರು. ಹಲವು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ್ದರಿಂದ 14 ತಿಂಗಳಲ್ಲೇ ಮೈತ್ರಿ ಸರ್ಕಾರ ಪತನವಾಯಿತು.

2019 ರಲ್ಲಿ ಉಪಚುನಾವಣೆ ಎದುರಾಯಿತು. ಈ ಸಂದರ್ಭದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬೆಂಗಳೂರಿನ ಒಟ್ಟು 28 ಸ್ಥಾನಗಳ ಪೈಕಿ ಪಕ್ಷಗಳ ಬಲಾಬಲ ಬದಲಾಯಿತು.
ಇದೀಗ 2023ರ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಮೂರು ಪಕ್ಷಗಳು ಬೆಂಗಳೂರಿನಲ್ಲಿ ಸಂಖ್ಯಾ ಬಲವನ್ನು ಹೆಚ್ಚಿಸಿಕೊಳ್ಳಲು ಕಸರತ್ತು ನಡೆಸುತ್ತಿವೆ. ಈ ಬಾರಿ ಬೆಂಗಳೂರಿನ ಜನ ಯಾರಿಗೆ ಮಣೆಯಾಕುತ್ತಾರೆ ಎಂಬುದು ಕುತೂಹಲದ ಸಂಗತಿ.

ಬೆಂಗಳೂರು ನಗರದ 28 ಕ್ಷೇತ್ರಗಳ ಚಿತ್ರಣ
ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ

ಚುನಾವಣೆಗೆ ಆಯೋಗ ಸಿದ್ಧತೆ: ರಾಜ್ಯದಲ್ಲಿ ಮೇ 10 ರಂದು ಚುನಾವಣೆ ನಡೆಯಲಿದ್ದು, ಮತ ಎಣಿಕೆ ಮೇ 13 ರಂದು ನಡೆಯಲಿದೆ. ಹಾಗಾಗಿ, ಚುನಾವಣಾ ಆಯೋಗ ಚುನಾವಣೆಗೆ ಎಲ್ಲ ರೀತಿ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದ್ದು, ಎಲ್ಲೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಇನ್ನು ಬೆಂಗಳೂರು ನಗರದಲ್ಲಿ ಒಟ್ಟು 8,615 ಮತಗಟ್ಟೆಗಳಿದ್ದು, ಈ ಪೈಕಿ 8,615 ಪೈಕಿ 2,217 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಣೆ ಮಾಡಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಕೇಂದ್ರ ಪ್ಯಾರಾ ಮಿಲಿಟರಿ ಫೋರ್ಸ್ ನಿಯೋಜನೆ ಮಾಡಲಾಗುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 68 ಸಾವಿರ ಚುನಾವಣಾ ಸಿಬ್ಬಂದಿಗಳ ಅಗತ್ಯವಿದೆ. ಆದರೆ, ನಮ್ಮ ಬಳಿ 37 ಸಾವಿರ ಮ್ಯಾನ್ ಪವರ್ ಈಗಾಗಲೇ ಇದೆ. ಉಳಿದಂತೆ ಸುಮಾರು 40 ಸಾವಿರ ಸಿಬ್ಬಂದಿಗಳ ನಿಯೋಜನೆ ಆಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಕೆಂದ್ರ ಸರ್ಕಾರದ ನಿಗಮ, ಪ್ರಾಧಿಕಾರ, ಮಂಡಳಿ, ಇಲಾಖೆಗಳ ನೌಕರರನ್ನು ಬಳಕೆ ಮಾಡುತ್ತೇವೆ. ಈ ಬಾರಿ ಎಲ್ಲಾ ಮತಗಟ್ಟೆಗಳಲ್ಲಿ ಹೊಸ ಇವಿಎಂ ಬಳಕೆ ಮಾಡಲಾಗುತ್ತದೆ. ಒಟ್ಟು ಇವಿಎಂಗಳಲ್ಲಿ ಶೇ. 30 ರಷ್ಟು ಇವಿಎಂ ಬ್ಯಾಕ್ ಅಪ್​ಗೆ ಕಾಯ್ದಿರಿಸಲಾಗುತ್ತದೆ ಎಂದು ಆಯೋಗ ತಿಳಿಸಿದೆ.

ಇದನ್ನೂ ಓದಿ: ಅಳೆದು ತೂಗಿ ಪ್ರಕಟವಾಯ್ತು ಕಾಂಗ್ರೆಸ್ ಎರಡನೇ ಪಟ್ಟಿ..! ಹೀಗಿದೆ ಟಿಕೆಟ್​ ಹಂಚಿಕೆ ಹಿಂದಿನ ಲೆಕ್ಕಾಚಾರ!

Last Updated : Apr 17, 2023, 12:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.