ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ನಿಂದ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸ್ಟಾರ್ ಕ್ಯಾಂಪೆನರ್ ಆಗಿ ಆಯ್ಕೆಯಾಗಿದ್ದಾರೆ. ನಟಿ ರಮ್ಯಾ, ಉಮಾಶ್ರೀ, ಸಾಧುಕೋಕಿಲ, ಕ್ರಿಕೆಟರ್ ಮೊಹಮ್ಮದ್ ಅಜರುದ್ದೀನ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
40 ಜನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಲಿಂಗಾಯತರ ಮತ ಸೆಳೆಯುವ ಜಗದೀಶ್ ಶೆಟ್ಟರನ್ನು ಪ್ರಚಾರದ ಅಖಾಡದಲ್ಲಿ ಇಳಿಸಿದೆ. ಲಿಂಗಾಯತ ಮತಗಳು ಹೆಚ್ಚಿರುವ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿರುವ ಶೆಟ್ಟರ್, ಕಾಂಗ್ರೆಸ್ ಪಕ್ಷದ ಪರವಾಗಿ ಮತದಾರರ ಒಲವು ಗಳಿಸುವ ಪ್ರಯತ್ನ ಮಾಡಲಿದ್ದಾರೆ.
ಸ್ಟಾರ್ ಕ್ಯಾಂಪೇನರ್‌ಗಳು..: ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಬಿ.ಕೆ.ಹರಿಪ್ರಸಾದ್, ಡಾ.ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ಜೈರಾಂ ರಮೇಶ್, ವೀರಪ್ಪ ಮೊಯ್ಲಿ, ಜಗದೀಶ್ ಶೆಟ್ಟರ್, ರಾಮಲಿಂಗಾ ರೆಡ್ಡಿ ಡಿ.ಕೆ.ಸುರೇಶ್, ನಾಸೀರ್ ಹುಸೇನ್, ಜಮೀರ್ ಅಹ್ಮದ್, ಉಮಾಶ್ರೀ, ಅಶೋಕ್ ಗೆಹ್ಲೋಟ್, ರಾಜಸ್ತಾನ ಸಿಎಂ ಭೂಪೇಶ್ ಬಗೇಲ್, ಛತ್ತೀಸ್‌ಗಢ ಸಿಎಂ ಸುಖ್ವಿಂದರ್ ಸಿಂಗ್, ಹಿಮಾಚಲ ಸಿಎಂ ಪೃಥ್ವಿರಾಜ್ ಚೌವ್ಹಾಣ್, ಮಾಜಿ ಸಿಎಂ ಅಶೋಕ್ ಚವ್ಹಾಣ್, ಪಿ.ಚಿದಂಬರಂ, ಶಶಿ ತರೂರ್, ಮಹಮದ್ ಅಜರುದ್ದೀನ್, ಮಾಜಿ ಸಂಸದೆ ರಮ್ಯಾ, ಕನ್ಹಯ್ಯ ಕುಮಾರ್, ಸಾಧು ಕೊಕಿಲಾ ಅವರು ಹೆಸರು ಕಾಂಗ್ರೆಸ್ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಇದೆ.
ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಹೀಗಿದೆ: ಬಿಜೆಪಿ ಹೈಕಮಾಂಡ್ 40 ನಾಯಕರಿರುವ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಿದೆ. ಪ್ರಧಾನಿ ಮೋದಿ, ಉತ್ತರ ಪ್ರದೇಶದ ಸಿಎಂ ಯೋಗಿ ಪ್ರಮುಖರು. ಮುಖ್ಯಮಂತ್ರಿಗಳ ಪರವಾಗಿ ಪ್ರಚಾರ ಮಾಡಲಿರುವ ನಟ ಸುದೀಪ್ ಹೆಸರು ಮಾತ್ರ ಪಟ್ಟಿಯಲ್ಲಿಲ್ಲ. ಇದರಿಂದ ಸುದೀಪ್ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಅಲ್ಲ ಅನ್ನೋದು ಸ್ಪಷ್ಟವಾಗಿದೆ.
ಇನ್ನುಳಿದಂತೆ, ಜೆ.ಪಿ.ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಶಿ, ಸದಾನಂದ ಗೌಡ, ಕೆ.ಎಸ್ ಈಶ್ವರಪ್ಪ, ಗೋವಿಂದ ಕಾರಜೋಳ, ಆರ್.ಅಶೋಕ್, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಧರ್ಮೇಂದ್ರ ಪ್ರಧಾನ್, ಮನ್ಸೂಕ್ ಮಾಂಡವಿಯ, ಅಣ್ಣಾಮಲೈ, ಅರುಣ್ ಸಿಂಗ್, ಡಿಕೆ ಅರುಣಾ, ಸಿಟಿ ರವಿ, ಶಿವರಾಜ್ ಸಿಂಗ್ ಚೌಹಾಣ್, ಹೇಮಂತ ಬಿಸ್ವ ಶರ್ಮಾ, ದೇವೇಂದ್ರ ಫಡ್ನವೀಸ್, ಪ್ರಭಾಕರ ಕೋರೆ, ಶೋಭಾ ಕರಂದ್ಲಾಜೆ, ಎ ನಾರಾಯಣಸ್ವಾಮಿ, ಭಗವಂತ್ ಖೂಬಾ, ಅರವಿಂದ ಲಿಂಬಾವಳಿ, ಶ್ರೀರಾಮುಲು, ಕೋಟ ಶ್ರೀನಿವಾಸ ಪೂಜಾರಿ, ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಜಾದವ್, ಚಲವಾದಿ ನಾರಾಯಣಸ್ವಾಮಿ, ಎನ್.ರವಿ ಕುಮಾರ್, ಜಿ.ವಿ ರಾಜೇಶ್, ಜಗ್ಗೇಶ್, ಶ್ರುತಿ, ಅನೂರಾಧ ಅವರು ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದಾರೆ.
ಇದನ್ನೂ ಓದಿ: ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಬಿಜೆಪಿಯ ತಿಪ್ಪರಾಜ್ ಹವಾಲ್ದಾರ್ ನಾಮಪತ್ರ ಸಲ್ಲಿಕೆ