ETV Bharat / assembly-elections

ಕಾಂಗ್ರೆಸ್​ನಿಂದ​ 42​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ.. ಯಾವ ಕ್ಷೇತ್ರಕ್ಕೆ ಯಾರು ನೋಡಿ - congress tickets announce

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ. ಯಾರಿಗೆಲ್ಲಾ ಟಿಕೆಟ್ ಸಿಕ್ಕಿದೆ ಅನ್ನೋ ಮಾಹಿತಿ ಇಲ್ಲಿದೆ. ಅಂದ ಹಾಗೆ ತೀವ್ರ ಕುತೂಹಲ ಕೆರಳಿಸಿರುವ ಕೋಲಾರ್​​ ಕ್ಷೇತ್ರಕ್ಕೆ ಎರಡನೇ ಲಿಸ್ಟ್​​ನಲ್ಲೂ ಹೆಸರು ಘೋಷಣೆ ಮಾಡಿಲ್ಲ. ಇದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

congress candidayes list
ಕಾಂಗ್ರೆಸ್​​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ
author img

By

Published : Apr 6, 2023, 11:03 AM IST

Updated : Apr 6, 2023, 1:56 PM IST

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ತೀವ್ರ ಕಸರತ್ತು ನಡೆಸಿ 42 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ. ಬಸವಕಲ್ಯಾಣದಿಂದ ಮಾಜಿ ಸಿಎಂ ಧರ್ಮಸಿಂಗ್ ಪುತ್ರ ವಿಜಯ್ ಧರ್ಮ ಸಿಂಗ್, ಧಾರವಾಡ ಗ್ರಾಮೀಣ ಕ್ಷೇತ್ರದಿಂದ ವಿನಯ್ ಕುಲಕರ್ಣಿ, ಬದಾಮಿಯಿಂದ ಬಿ ಬಿ ಚಿಮ್ಮನಕಟ್ಟಿ ಸೇರಿ 42 ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ. ಮೇಲುಕೋಟೆಯಲ್ಲಿ ದಿವಂಗತ ರೈತ ನಾಯಕ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರು ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿದ್ದರಿಂದ ಈ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿಯನ್ನು ಕಾಂಗ್ರೆಸ್ ಘೋಷಣೆ ಮಾಡದಿರಲು ನಿರ್ಧರಿಸಿದೆ.

ಕಾಂಗ್ರೆಸ್​ನಿಂದ​ 42​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

ವಲಸಿಗರಿಗೆ ಟಿಕೆಟ್: ಇತ್ತೀಚೆಗಷ್ಟೇ ಕಾಂಗ್ರೆಸ್​ ಸೇರ್ಪಡೆಯಾಗಿದ್ದ ಎನ್​ ವೈ ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮೂರು ಮತ್ತು ಬಾಬೂರಾವ್ ಚಿಂಚನಸೂರು ಅವರಿಗೆ ಗುರುಮಿಠಕಲ್​, ಎಸ್​ ಆರ್​ ಶ್ರೀನಿವಾಸ್ ಅವರಿಗೆ ಗುಬ್ಬಿ ಕ್ಷೇತ್ರದಿಂದ, ವಿ ಎಸ್ ಪಾಟೀಲ್ ಅವರಿಗೆ ಯಲ್ಲಾಪುರ, ಕೆ ಆರ್ ಪೇಟೆಯಿಂದ ಬಿ ಎಲ್ ದೇವರಾಜ್​ ಅವರಿಗೆ ಟಿಕೆಟ್​ ಘೋಷಿಸಲಾಗಿದೆ. ಜೆಡಿಎಸ್​ನಿಂದ ಕಾಂಗ್ರೆಸ್​​ಗೆ ಬಂದ ವೈ ಎಸ್​ ದತ್ತಾ ಅವರಿಗೆ ಟಿಕೆಟ್ ತಪ್ಪಿದ್ದು, ಕಡೂರು ಕ್ಷೇತ್ರದಿಂದ ಆನಂದ್ ಕೆ ಎಸ್ ಅವರಿಗೆ ಅವಕಾಶ ನೀಡಲಾಗಿದೆ.

ಯಾರಿಗೆಲ್ಲ ಟಿಕೆಟ್?: ಗಂಗಾವತಿ-ಇಕ್ಬಾಲ್ ಅನ್ಸಾರಿ, ಕಲಘಟಗಿ- ಸಂತೋಷ್ ಲಾಡ್, ಚನ್ನಗಿರಿ-ಬಸವರಾಜ ವಿ ಶಿವಗಂಗಾ, ನರಗುಂದ- ಬಿ ಆರ್ ಯಾವಗಲ್, ವಿಜಪುರ ಸಿಟಿ - ಅಬ್ದುಲ್ ಮುಶ್ರಿಫ್, ಮುಧೋಳ್-ಆರ್​ ಬಿ ತಿಮ್ಮಾಪುರ, ಗೋಕಾಕ್ - ಮಹಾಂತೇಶ್ ಕಡಾಡಿ, ನಿಪ್ಪಾಣಿ-ಕಾಕಾಸಾಹೇಬ್ ಪಾಟೀಲ್, ಸವದತ್ತಿ - ವಿಶ್ವಾಸ್ ವಸಂತ್ ವೈದ್ಯ, ಬೀಳಗಿ-ಜೆ ಟಿ ಪಾಟೀಲ್, ಬಾಗಲಕೋಟೆ- ಹೆಚ್​ ವೈ ಮೇಟಿ, ಶಿರಸಿ - ಭೀಮಣ್ಣ ನಾಯಕ್, ತೀರ್ಥಹಳ್ಳಿ - ಕಿಮ್ಮನೆ ರತ್ನಾಕರ್.

ಉಡುಪಿ - ಪ್ರಸಾದ್ ರಾಜ್ ಕೆ., ತುಮಕೂರು ಸಿಟಿ - ಇಕ್ಬಾಲ್ ಅಹಮದ್, ಯಲಂಹಕ - ಕೇಶವ್ ರಾಜಣ್ಣ ಬಿ, ಯಶವಂತಪುರ - ಎಸ್ ಬಾಲರಾಜ ಗೌಡ, ಮಹಾಲಕ್ಷ್ಮೀ ಲೇಔಟ್ - ಕೇಶವ್ ಮೂರ್ತಿ, ಪ್ರದ್ಮನಾಭ ನಗರ - ವಿ ರಘುನಾಥ್ ನಾಯ್ಡು, ಮಂಡ್ಯ - ಪಿ ರವಿಕುಮಾರ್, ಕೃಷ್ಣರಾಜಪೇಟೆ- ಬಿ ಎಲ್ ದೇವರಾಜ್, ಬೇಲೂರು - ಬಿ ಶಿವರಾಂ, ಮಡಿಕೇರಿ - ಡಾ.ಎಂ ಗೌಡ, ಚಾಮುಂಡೇಶ್ವರಿ - ಸಿದ್ದೇಗೌಡ, ಕೊಳ್ಳೇಗಾಲ- ಎ ಆರ್ ಕೃಷ್ಣಮೂರ್ತಿ, ನಾಗಠಾಣಾ - ವಿ ಕಟಕದೊಂಡ, ಕಿತ್ತೂರು - ಬಾಬಾಸಾಹೇಬ ಪಾಟೀಲ್, ಚಿತ್ರದುರ್ಗ - ಕೆ ಸಿ ವೀರೇಂದ್ರ, ಹೊಳಲ್ಕೇರೆ - ಆಂಜನೇಯ ಹೆಚ್, ಕುಡ್ಲಗಿ - ಡಾ. ಶ್ರೀನಿವಾಸ ಎನ್​ಟಿ, ಅಫ್ಜಲಪುರ್ - ಎಂ ವೈ ಪಾಟೀಲ್, ಯಾದಗಿರಿ - ಚನ್ನರೆಡ್ಡಿ ಪಾಟೀಲ್ ಅವರಿಗೆ ಟಿಕೆಟ್ ಅನೌನ್ಸ್ ಆಗಿದೆ.

ಕೋಲಾರ್​ ಕ್ಷೇತ್ರಕ್ಕೆ ಇನ್ನೂ ಆಗದ ಟಿಕೆಟ್​ ಘೋಷಣೆ: ಈ ನಡುವೆ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಕೋಲಾರ್​ ಕ್ಷೇತ್ರದ ಟಿಕೆಟ್​ ಘೋಷಣೆಯನ್ನು ಎರಡನೇ ಪಟ್ಟಿಯಲ್ಲೂ ಮಾಡಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ವರುಣಾ ಜತೆಗೆ ಕೋಲಾರ ಕ್ಷೇತ್ರಕ್ಕೂ ತಮಗೆ ಟಿಕೆಟ್​ ನೀಡಬೇಕು ಎಂದು ಹೈಕಮಾಂಡ್​ ನಾಯಕರಿಗೆ ಮನವಿ ಮಾಡಿದ್ದರು. ಆದರೆ ಹೈ ಕಮಾಂಡ್​ ಈ ಬಗ್ಗೆ ಇನ್ನೂ ಅಂತಿಮ ನಿರ್ಣಯ ಕೈಗೊಂಡಂತಿಲ್ಲ. ಹಾಗಾಗಿ ಈ ಕ್ಷೇತ್ರಕ್ಕೆ ಇನ್ನೂ ಹೆಸರು ಅಂತಿಮಗೊಳಿಸಲಾಗಿಲ್ಲ.

ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವುದು ಕಾಂಗ್ರೆಸ್​ಗೆ ಅಷ್ಟು ದೊಡ್ಡ ಸವಾಲಾಗಿರಲಿಲ್ಲ. ಆದರೆ ಎರಡನೇ ಪಟ್ಟಿ ಸಿದ್ಧಪಡಿಸಲು ಕಾಂಗ್ರೆಸ್​ ನಾಯಕರು ಬಹಳಷ್ಟು ಚರ್ಚೆ ನಡೆಸಿದರು. ಬಾಕಿ ಉಳಿದ 100 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡುವುದು ಪಕ್ಷಕ್ಕೆ ಕಗ್ಗಂಟಾಗಿ ಪರಿಣಮಿಸಿತ್ತು.

ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕರು ಹಾಗೂ ಕಳೆದ ಸಾರಿ ಸೋತ ಜನಪ್ರಿಯ ನಾಯಕರಿಗೆ ಟಿಕೆಟ್ ಘೋಷಿಸಲಾಗಿತ್ತು. ಇದರಿಂದಾಗಿ 8-10 ಕ್ಷೇತ್ರಗಳಲ್ಲಿ ಅಪಸ್ವರ ಎದ್ದಿತ್ತು. ಇನ್ನು ಒಂಬತ್ತು ಹಾಲಿ ಶಾಸಕರ ಹೆಸರು ಅಂತಿಮವಾಗದಿರುವುದು ಇನ್ನಷ್ಟು ಒತ್ತಡಕ್ಕೆ ಕಾರಣವಾಗಿತ್ತು. ಆದರೆ ಅಷ್ಟಾಗಿ ಬಂಡಾಯದ ಬಿಸಿ ಪಕ್ಷಕ್ಕೆ ಮುಟ್ಟಿರಲಿಲ್ಲ. ಈಗ ಎರಡನೇ ಪಟ್ಟಿ ಬಿಡುಗಡೆ ಹಿನ್ನೆಲೆಯಲ್ಲಿ ಪಕ್ಷದ ಮೇಲೆ ಭಾರೀ ಒತ್ತಡವಿತ್ತು.

ಇನ್ನು ಮೊದಲ ಪಟ್ಟಿಯಲ್ಲಿ ವರುಣಾದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕನಕಪುರದಿಂದ ಡಿಕೆ ಶಿವಕುಮಾರ್, ಕೊರಟಗೆರೆಯಿಂದ ಡಾ ಜಿ ಪರಮೇಶ್ವರ್ ಸೇರಿ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಘೋಷಿಸಿತ್ತು.

ಇದನ್ನೂ ಓದಿ: ಕರ್ನಾಟಕ ಚುನಾವಣೆ 2023: ಕಾಂಗ್ರೆಸ್​ ಮೊದಲ ಪಟ್ಟಿ ಬಿಡುಗಡೆ, ಸಿದ್ದರಾಮಯ್ಯ ವರುಣ, ಡಿಕೆಶಿಗೆ ಕನಕಪುರ

Last Updated : Apr 6, 2023, 1:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.