ETV Bharat / assembly-elections

ಈಶ್ವರಪ್ಪ ನಿರ್ಣಯ ಮಾದರಿ, ಶೆಟ್ಟರ್ ಇದೊಂದು ಸಲ ಅಂದಿದ್ದಾರೆ, ಸವದಿಗೆ ದುಡುಕಬೇಡಿ ಎಂದಿದ್ದೇನೆ- ಸಿಎಂ

ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿಯ 150 ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಬಿಡುಗಡೆಯಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

author img

By

Published : Apr 11, 2023, 6:05 PM IST

Updated : Apr 11, 2023, 7:12 PM IST

CM Basavraj Bommai Reaction on Bjp candidate first list in Delhi
ಇಂದು 150 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ... ಈಶ್ವರಪ್ಪಗೆ ಸ್ಪರ್ಧಿಸಲು ಹೇಳಿದ್ದೇವು ಎಂದ ಸಿಎಂ
ದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.

ನವದೆಹಲಿ: ಇಂದು ಸಂಜೆಯೊಳಗೆ ಬಿಜೆಪಿಯ 150 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ಹಲವು ಸುತ್ತಿನ ಮಾತುಕತೆಗಳ ಮೂಲಕ ಪ್ರತಿ ಕ್ಷೇತ್ರದ ಅಭ್ಯರ್ಥಿಯನ್ನು ನಿರ್ಧರಿಸಲಾಗಿದ್ದು, ಯಾವುದೇ ಗೊಂದಲವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ತಿಳಿಸಿದರು. ಇದೇ ವೇಳೆ ಕೆ.ಎಸ್‌.ಈಶ್ವರಪ್ಪನವರ ನಿರ್ಧಾರದ ಬಗ್ಗೆಯೂ ಮಾತನಾಡಿದರು.

ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಕುರಿತು ಪಕ್ಷದ ಅಧ್ಯಕ್ಷರಿಗೆ ಹಿರಿಯ ನಾಯಕರಾದ ಕೆ.ಎಸ್.ಈಶ್ವರಪ್ಪ ಪತ್ರ ಬರೆದಿದ್ದಾರೆ. ಈ ಹಿಂದೆಯೇ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಹೇಳಿದ್ದರು. ಆದರೆ, ಅವರ ಅನುಭವದ ಅಗತ್ಯ ಇರುವುದರಿಂದ ನಾವು ಸ್ಪರ್ಧಿಸುವಂತೆ ಕೇಳಿದ್ದೆವು. ಚುನಾವಣಾ ರಾಜಕೀಯದಿಂದ ದೂರ ಸರಿದರೂ ರಾಜಕಾರಣದಲ್ಲಿ ಮುಂದುವರೆಯುವಂತೆ ಕೇಳಿಕೊಂಡಿದ್ದಾಗಿ ಸಿಎಂ ಹೇಳಿದರು.

ಹಲವು ತಿಂಗಳ ಹಿಂದೆ ನಮಗೆ ಖಾಸಗಿಯಾಗಿ ಹೇಳುತ್ತಿದ್ದರು. ಆದರೆ, ಚುನಾವಣಾ ರಾಜಕೀಯ ನಿರ್ಧಾರ ಅವರಿಗೆ ಬಿಟ್ಟಿದ್ದು. ಆದರೂ, ರಾಜಕಾರಣದಲ್ಲಿರುವ ಬಗ್ಗೆ ನಾವು ಹೇಳಿದ್ದು, ಮುಂದಿನದ್ದು ಕೂಡಲೇ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಆದರೆ, ಈಶ್ವರಪ್ಪನವರ ನಿರ್ಧಾರವು ಒಂದು ನಿರ್ದಿಷ್ಟ ವಯಸ್ಸಿನ ನಂತರ ನಾವು ಯುವಕರಿಗೆ ಜಾಗ ಬಿಡಬೇಕು ಎಂಬ ಸಂದೇಶ ನೀಡುತ್ತದೆ. ಇದು ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯ ಸಂಸ್ಕೃತಿ ಎಂದು ತಿಳಿಸಿದರು.

ಕಾಂಗ್ರೆಸ್​ಗೆ ಸಿಎಂ ಟಾಂಗ್​: ಕಾಂಗ್ರೆಸ್ 92 ವರ್ಷದ ಶಾಮನೂರು ಶಿವಶಂಕರಪ್ಪನವರಿಗೆ ಟಿಕೆಟ್ ಕೊಟ್ಟಿದೆ. ನಮ್ಮ ನೇತೃತ್ವ ಮತ್ತು ಆದರ್ಶಗಳು ಬೇರೆ ಪಕ್ಷಗಳು ಮತ್ತು ಬಿಜೆಪಿಗೆ ವಿಭಿನ್ನ. ನಮ್ಮ ನಿರ್ಧಾರಗಳು ಹೊಸ ವ್ಯವಸ್ಥೆಯನ್ನು ಹುಟ್ಟು ಹಾಕಲು, ಹೊಸ ಪರಂಪರೆಯನ್ನು ನೀಡುವ ಬದ್ಧತೆಯಿಂದ ಕೂಡಿದೆ. ಇದರಲ್ಲಿ ಈಶ್ವರಪ್ಪನವರು ಮುಂಚೂಣಿಯಲ್ಲಿ ನಿಂತಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್​ಗೆ ಸಿಎಂ ಟಾಂಗ್​ ನೀಡಿದರು.

ಇದೇ ವೇಳೆ ಸ್ಪರ್ಧೆ ಕುರಿತ ಜಗದೀಶ್​ ಶೆಟ್ಟರ್​ ಹೇಳಿಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಈಶ್ವರಪ್ಪ ವಿಚಾರ ಅವರ ವೈಯಕ್ತಿಕ. ಅವರು ತಮ್ಮ ನಿರ್ಣಯ ತೆಗೆದುಕೊಳ್ಳುತ್ತಾರೆ. ನಾನು ಶೆಟ್ಟರ್​ ಅವರೊಂದಿಗೆ ಮಾತನಾಡಿದ್ದೇನೆ. ಅವರ ಸಹ ನಮ್ಮ ಗೌರವಾನ್ವಿತ ಹಿರಿಯ ಸದಸ್ಯ. ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಕೆಲಸಗಳನ್ನು ಮಾಡಬೇಕು. ಕೆಲವು ಕೆಲಸಗಳು ಬಾಕಿ ಇವೆ. ನಾನು ಸಹ ಗೌರವಾನ್ವಿತವಾಗಿ ನಿವೃತ್ತಿ ಹೊಂದಬೇಕೆಂದಿರುವೆ. ಆದರೆ ಮಾಡಬೇಕಿರುವ ಕೆಲಸಗಳಿವೆ. ಹೀಗಾಗಿ ಇದೊಂದು ಸಲ ಎಂದು ಶೆಟ್ಟರ್​ ಹೇಳಿದ್ದಾರೆ. ಇದನ್ನು ಹಿರಿಯ ಮುಂದೆ ನಾನು ಪ್ರಸ್ತಾಪ ಮಾಡಿದ್ದೇನೆ. ಉಳಿದವರ ವಿಚಾರ ನನ್ನ ಗಮನದಲ್ಲಿಲ್ಲ ಎಂದು ತಿಳಿಸಿದರು.

ಲಕ್ಷ್ಮಣ ಸವದಿ ಕಾಂಗ್ರೆಸ್​ ಸೇರುತ್ತಾರೆ ಎಂಬ ವದಂತಿ ಬಗ್ಗೆ ಮಾತನಾಡಿದ ಸಿಎಂ, ನಾನು ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಅಥಣಿ ಕ್ಷೇತ್ರದ ಟಿಕೆಟ್​ ಬೇಕೆಂದು ಕೇಳಿರುವುದು ನಿಜ. ಈ ವಿಷಯವಾಗಿ ಒತ್ತಾಯಿಸಿರುವುದು ಸಹ ನಿಜ. ಆದರೆ, ಅಲ್ಲಿ ಮಹೇಶ್​ ಕುಮಟಳ್ಳಿಯವರು ನಮ್ಮ ಸರ್ಕಾರ ರಚನೆ ಸಂದರ್ಭದಲ್ಲಿ ಬೆಂಬಲಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಹತ್ತಿರ ಮಾತನಾಡುತ್ತೇವೆ. ಹಾಗೆ, ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡ ಎಂದು ಹೇಳಿದ್ದೇವೆ. ಮತ್ತೊಮ್ಮೆ ಸವದಿ ಅವರೊಂದಿಗೆ ನಾನು ಮಾತನಾಡುತ್ತೇನೆ ಎಂದು ವಿವರಿಸಿದರು.

ಹಾಲಿ ಶಾಸಕರಿಗೆ ಟಿಕೆಟ್​ ಕೈ ತಪ್ಪುವ ವಿಚಾರವಾಗಿ ಮಾತನಾಡಿ, ಕೆಲವರು ನಿವೃತ್ತಿ ಘೋಷಣೆ ಮಾಡಿದ್ದಾರೆ. ಯಡಿಯೂರಪ್ಪ, ರವೀಂದ್ರನಾಥ್, ಹಾಲಾಡಿ ಶ್ರೀನಿವಾಸ್ ಈಗಾಗಲೇ ಘೋಷಣೆಯನ್ನು ಮಾಡಿದ್ದಾರೆ. ಅಲ್ಲಿ ಬದಲಾವಣೆ ಆಗಿಯೇ ಆಗುತ್ತದೆ ಎಂದಷ್ಟೇ ಸಿಎಂ ಪ್ರತಿಕ್ರಿಯಿಸಿದರು.

ಮತ್ತೊಂದೆಡೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಾತನಾಡಿ, ಯಡಿಯೂರಪ್ಪನವರು ಚುನಾವಣಾ ಸಮಿತಿ ಮತ್ತು ಸಂಸದೀಯ ಮಂಡಳಿಯಲ್ಲಿ ಪಾಲ್ಗೊಂಡಿದ್ದರು. ಚುನಾವಣಾ ದಿಕ್ಸೂಚಿ​ ಸಭೆಯು ನಿನ್ನೆ ಮತ್ತು ಇಂದು ನಡೆದಿದೆ. ಈ ಸಭೆಯಲ್ಲಿ ಯಡಿಯೂರಪ್ಪನವರು ನಿನ್ನೆ ಪಾಲ್ಗೊಂಡು ಸಲಹೆ ನೀಡಿ ತೆರಳಿದ್ದಾರೆ. ಕಾಂಗ್ರೆಸ್​ಗೆ ಬದಲಾವಣೆ ಮಾಡುವ ಸಾಮರ್ಥ್ಯವೇ ಇಲ್ಲ. ಇದ್ದಿದ್ದರೆ 92 ವರ್ಷದ ಶಾಮನೂರ ಶಿವಶಂಕರಪ್ಪನವರಿಗೆ ಟಿಕೆಟ್​ ಘೋಷಣೆ ಮಾಡುತ್ತಿದ್ದರಾ?. 80 ವರ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಕೂಡಿಸುತ್ತಿದ್ದರಾ?. ಇದು ಕಾಂಗ್ರೆಸ್​ನ ಸ್ಥಿತಿ ಎಂದು ಕುಟುಕಿದರು.

ಇದನ್ನೂ ಓದಿ: ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ..! ನಡ್ಡಾಗೆ ಪತ್ರ

Last Updated : Apr 11, 2023, 7:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.