ETV Bharat / assembly-elections

ರಾಜ್ಯ ರಚನೆಯಾದ ಬಳಿಕ ಪೂರ್ಣಾವಧಿ ಆಡಳಿತ ಕೊಟ್ಟವರು ಕೇವಲ ಮೂವರು ಮುಖ್ಯಮಂತ್ರಿಗಳು ಮಾತ್ರ!

author img

By

Published : Apr 8, 2023, 9:03 PM IST

ಸ್ವಾತಂತ್ರ್ಯ ಭಾರತದ ನಂತರ ಕರ್ನಾಟಕದಲ್ಲಿ 1956 ರಿಂದ ಈವರೆಗೆ ಎಷ್ಟು ಮುಖ್ಯಮಂತ್ರಿಗಳು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಗೊತ್ತಾ? ಅವರು ಯಾರು? ಯಾವ ಪಕ್ಷದಿಂದ ಆಯ್ಕೆ ಆಗಿದ್ದರು ಅನ್ನೋದು ಬಗ್ಗೆ ಒಂದು ಸಂಕ್ಷಿಪ್ತ ವಿವರಣೆ ಇಲ್ಲಿದೆ

Chief Ministers of Karnataka
Chief Ministers of Karnataka

ಬೆಂಗಳೂರು: ಪ್ರಾಂತ್ಯಗಳ ರಚನೆಗೊಂಡ ನಂತರ ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸವು ಹಲವು ಏಳು ಬೀಳುಗಳನ್ನು ಕಂಡಿದೆ. 1956ರಲ್ಲಿ ರಾಜ್ಯವಾಗಿ ರೂಪುಗೊಂಡ ಕರ್ನಾಟಕ ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರತು ಪಡಿಸಿ ಇನ್ನಿಬ್ಬರು ಮಾತ್ರ ಪೂರ್ಣಾವಧಿ ಅಧಿಕಾರವನ್ನು ನಡೆಸಿದ್ದಾರೆ. ಇನ್ನುಳಿದಂತೆ ಎಲ್ಲ ಮುಖ್ಯಮಂತ್ರಿಗಳು ಅವಧಿ ಮುಗಿಯುವುದಕ್ಕೂ ಮುನ್ನ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಪ್ರಸ್ತುತ ಕಾಂಗ್ರೆಸ್​ ಪಕ್ಷದ ನಾಯಕರು ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರತುಪಡಿಸಿದರೆ 5 ವರ್ಷ ಪೂರ್ಣಾವಧಿ ಪೂರೈಕೆ ಮಾಡಿರುವವರಲ್ಲಿ ಕೇವಲ ಇಬ್ಬರು ಮುಖ್ಯಮಂತ್ರಿಗಳು ಮಾತ್ರ. ಅವರುಗಳಲ್ಲಿ 1962 ರಿಂದ 1968ರ ವರೆಗೂ ಸುಮಾರು 5 ವರ್ಷಕ್ಕೂ ಹೆಚ್ಚು ದಿನಗಳ ಕಾಲ ಎಸ್. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವರ ನಂತರ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಎಂಬುದಾಗಿ ಹೆಸರನ್ನು ಪಡೆದಿದ್ದ ಡಿ.ದೇವರಾಜ ಅರಸು 1972ರಿಂದ 1977ರ ವರೆಗೂ ಮುಖ್ಯಮಂತ್ರಿ ಸ್ಥಾನದಲ್ಲಿದ್ದರು. ಜನತಾ ಪಕ್ಷದಿಂದ ಕನಕಪುರ (ಉಪಚುನಾವಣೆ) ಮತ್ತು ಬಸವನಗುಡಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದಿದ್ದ ರಾಮಕೃಷ್ಣ ಹೆಗಡೆ ಅವರ (10 ಜನವರಿ 1983 ರಿಂದ 8 ಮಾರ್ಚ್ 1985 ಹಾಗೂ 7 ಮಾರ್ಚ್ 1985 ರಿಂದ 13 ಆಗಸ್ಟ್ 1988) ಎರಡೂ ಅವಧಿಯನ್ನು ಪರಿಗಣಿಸಿದರೆ ಪಟ್ಟಿಯಲ್ಲಿ ಅವರನ್ನು ಸೇರಿಕೊಳ್ಳಬಹುದು. ಇನ್ನುಳಿದಂತೆ ಯಾವುದೇ ಮುಖ್ಯಮಂತ್ರಿಗಳು ತಮ್ಮ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿರಲಿಲ್ಲ.

ದೇವರಾಜ ಅರಸು ಅಧಿಕಾರ ಹಾಗೂ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡ ಬಳಿಕ ಸುಮಾರು 36 ವರ್ಷಗಳ ಅವಧಿಯಲ್ಲಿ ಕರ್ನಾಟಕ್ಕೆ 14 ಜನ ಮುಖ್ಯಮಂತ್ರಿಗಳು ಹಾಗೂ ಐದು ಬಾರಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಆದರೆ, 2013ರ ವರೆಗೂ ಯಾವುದೇ ಮುಖ್ಯಮಂತ್ರಿ ತಮ್ಮ ಪೂರ್ಣಾವಧಿಯನ್ನು ಮುಗಿಸಿರಲಿಲ್ಲ. 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ತಮ್ಮ ಅಧಿಕಾರವಧಿಯಲ್ಲಿ ಪೂರ್ಣ ಐದು ವರ್ಷಗಳ ಕಾಲ ನಡೆಯಿತು.

1999ರ ಅಕ್ಟೋಬರ್​ನಲ್ಲಿ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿ ಸರ್ಕಾರ ರಚಿಸಿ, ಉತ್ತಮ ಆಡಳಿತ ನೀಡಿತ್ತು. ಆದರೆ, ಇನ್ನೇನು ಪೂರ್ಣಾವಧಿ ಮುಗಿಸಲು ಕೇವಲ 5 ತಿಂಗಳು ಇದೆ ಎನ್ನುವಾಗಲೇ ಲೋಕಸಭಾ ಚುನಾವಣೆ ಎದುರಾಗಿತ್ತು. ಹೀಗಾಗಿ ವಿಧಾನಸಭೆ ಚುನಾವಣೆಯೂ ಒಟ್ಟಿಗೇ ನಡೆಯಲಿ ಎನ್ನುವ ಉದ್ದೇಶದಿಂದ ಮಾಜಿ ಸಿಎಂ ಎಸ್.ಎಂ ಕೃಷ್ಣ ವಿಧಾನಸಭೆಯನ್ನು ವಿಸರ್ಜಿಸಿದ್ದರು. ಹೀಗಾಗಿ ಪೂರ್ಣಾವಧಿ ಸಿಎಂ ಪಟ್ಟಿಗೆ ಎಸ್‌ಎಂಕೆ ಹೆಸರು ಸೇರ್ಪಡೆಯಾಗಲಿಲ್ಲ. ಹೀಗಾಗಿ ಎಸ್.​ನಿಜಲಿಂಗಪ್ಪ, ಡಿ.ದೇವರಾಜ ಅರಸು ಹೊರತುಪಡೆಸಿದರೆ ಸಿದ್ದರಾಮಯ್ಯ ಮಾತ್ರ ತಮ್ಮ ಅಧಿಕಾರವನ್ನು ಐದು ವರ್ಷ ಪೂರೈಸಿದ್ದಾರೆ.

ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷಗಳು ಹಲವು ಭಾರಿ ಅಧಿಕಾರದ ಗದ್ದುಗೆ ಹಿಡಿದಿದ್ದವು. ಆದರೂ, ಪೂರ್ಣಾವಧಿ ಪೂರೈಸಿದ ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷದವರು ಮಾತ್ರ ಎಂಬುದನ್ನು ಸ್ಮರಿಸಬಹುದಾಗಿದೆ.

1956ರಲ್ಲಿ ರಾಜ್ಯವಾಗಿ ರೂಪುಗೊಂಡ ಕರ್ನಾಟಕ ಈವರೆಗೆ 35 ಮುಖ್ಯಮಂತ್ರಿಗಳನ್ನು ಕಂಡಿದೆ. ಹಲವಾರು ಮಂದಿ ಪೂಣಾರ್ವಧಿ ಪೂರೈಸುವುದಕ್ಕೂ ಮುನ್ನ ಅಧಿಕಾರದಿಂದ ಕೆಳಗಿಳಿಯಬೇಕಾದ ಅನಿವಾರ್ಯತೆ ಬಂದೊದಗಿದೆ. ಇನ್ನು ಕೆಲವರು ಪೂರ್ಣಾವಧಿ ಮುಗಿಸುವುದಕ್ಕೂ ಮೊದಲೇ ಚುನಾವಣಾ ದಿನಾಂಕ ಘೋಷಣೆಯಾದ ಕಾರಣ ಈ ಅವಕಾಶದಿಂದ ವಂಚಿತರಾಗಿದ್ದಾರೆ.

ಇದನ್ನೂ ಓದಿ: ರಾಜ್ಯಕ್ಕೆ 4 ಮುಖ್ಯಮಂತ್ರಿಗಳನ್ನು ನೀಡಿದ ರಾಮನಗರ: ಇದೇ ಜಿಲ್ಲೆಯಿಂದ ಮತ್ತಿಬ್ಬರು ಘಟಾನುಘಟಿಗಳು ಸಜ್ಜು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.