ETV Bharat / assembly-elections

ಅಭ್ಯರ್ಥಿ ಆಯ್ಕೆ ಕುರಿತು ಮುಂದುವರೆದ ಬಿಜೆಪಿ ಸಭೆ; ಕನಕಪುರ ಬಂಡೆ ವಿರುದ್ಧ ಅಪ್ಪಾಜಿಗೌಡಗೆ ಬಿಜೆಪಿ ಟಿಕೆಟ್? - Appaji Gowda

ಬಿಜೆಪಿ ಕೋರ್​ ಸಮಿಟಿ ಸಭೆಯ 2ನೇ ದಿನವಾದ ಇಂದು 110 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯಲಿದೆ.

core meeting
ಬಿಜೆಪಿ ಸಭೆ
author img

By

Published : Apr 2, 2023, 3:42 PM IST

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ನಡೆದ ಮತದಾನ ಮತ್ತು ಅಭಿಪ್ರಾಯ ಸಂಗ್ರಹದ ಅವಲೋಕನ ಎರಡನೇ ದಿನವೂ ಮುಂದುವರೆದಿದೆ. ಕಳೆದ ದಿನ 16 ಜಿಲ್ಲೆಗಳ ಅವಲೋಕನ ಪೂರ್ಣಗೊಂಡಿದ್ದು, ಉಳಿದ ಜಿಲ್ಲೆಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಮಹತ್ವದ ಚರ್ಚೆ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಒಕ್ಕಲಿಗರ ಸಂಘದ ಮಾಜಿ ಅಧಕ್ಷ ಅಪ್ಪಾಜಿಗೌಡರನ್ನು ನಿಲ್ಲಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಸಿಕ್ಕಿದೆ.

ನಗರದ ಹೊರವಲಯದಲ್ಲಿರುವ ಗೋಲ್ಡನ್ ಪಾಮ್ ರೆಸಾರ್ಟ್​ನಲ್ಲಿ ಬಿಜೆಪಿ ಜಿಲ್ಲಾ ಕೋರ್ ಕಮಿಟಿಗಳ ಸಭೆ ಆರಂಭಗೊಂಡಿದೆ. ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ ಸೇರಿದಂತೆ ಹಿರಿಯ ನಾಯಕರು ಕೋರ್ ಕಮಿಟಿ ಸದಸ್ಯರು ಇಂದಿನ ಸಭೆಯಲ್ಲಿ ಉಪಸ್ಥಿತರಿದ್ದರು.

ಎರಡನೇ ದಿನದ ಮೊದಲ ಸಭೆ ರಾಮನಗರದ್ದಾಗಿದ್ದು, ರಾಮನಗರ, ಚನ್ನಪಟ್ಟಣ, ಮಾಗಡಿ ಮತ್ತು ಕನಕಪುರ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಲಾಯಿತು. ನಾಲ್ಕು ಕ್ಷೇತ್ರಗಳಿಗೆ ಒಂದೊಂದು ಅಭ್ಯರ್ಥಿಗಳ ಹೆಸರಿನ ಬಗ್ಗೆ ಚರ್ಚೆ ನಡೆಸಲಾಯಿತು. ಚನ್ನಪಟ್ಟಣ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ್, ರಾಮನಗರ ಕ್ಷೇತ್ರಕ್ಕೆ ಗೌತಮ್ ಗೌಡ, ಮಾಗಡಿ ಕ್ಷೇತ್ರಕ್ಕೆ ಪ್ರಸಾದ್ ಗೌಡ ಮತ್ತು ಕನಕಪುರ ಕ್ಷೇತ್ರಕ್ಕೆ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿಗೌಡ ಹೆಸರಿನ ಬಗ್ಗೆ ಚರ್ಚೆ ನಡೆಯಿತು. ಅಪ್ಪಾಜಿಗೌಡ ಬಿಜೆಪಿ ಸೇರ್ಪಡೆಗೆ ಕೋರ್ ಕಮಿಟಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಬಿಜೆಪಿ ಸೇರ್ಪಡೆ ಬಳಿಕ ಕನಕಪುರ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಕಟಿಸಲಾಗುತ್ತದೆ ಎನ್ನಲಾಗ್ತಿದೆ.

ರಾಮನಗರದ ನಂತರ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಬೀದರ್, ಕಲಬುರಗಿ, ಯಾದಗಿರಿ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ಮೈಸೂರು, ಹಾಸನ, ಮಂಡ್ಯ ಹಾಗು ಕಡೆಯದಾಗಿ ಬೆಂಗಳೂರು ಮಹಾನಗರದ ಕುರಿತು ಚರ್ಚೆಯಾಗಲಿದೆ. ಒಟ್ಟು ಇಂದು 110 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯಲಿದೆ.

core meeting
ಬಿಜೆಪಿ ಸಭೆ

ಬಿಜೆಪಿಯ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ..?: ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಕೆಲ ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದು ಎನ್ನುವ ಬಗ್ಗೆ ಮಹತ್ವ ಚರ್ಚೆ ನಡೆದಿದೆ. ನಿನ್ನೆ ಗೋಲ್ಡನ್ ಪಾಮ್ಸ್ ರೆಸಾರ್ಟ್​ನಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕೋರ್ ಕಮಿಟಿಯ ಸದಸ್ಯರಿಂದ ಅಭಿಪ್ರಾಯ ಸಂಗ್ರಹ ವೇಳೆ ಕೆಲವು ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ನೀಡುವ ಕುರಿತು ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿದೆ. 16 ಜಿಲ್ಲಾ ಕೋರ್ ಕಮಿಟಿ ಸಭೆ ನಡೆದ ವೇಳೆ 10 ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ಕೊಡಬೇಕಾ ಎನ್ನುವ ಕುರಿತು ಗಂಭೀರ ಚರ್ಚೆ ನಡೆದಿದೆ.

ಮಾಡಾಳ್ ವಿರೂಪಾಕ್ಷಪ್ಪ, ನೆಹರು ಓಲೇಕಾರ್ ಗೆ ಟಿಕೆಟ್ ನೀಡದಂತೆ ಅಭಿಪ್ರಾಯ ವ್ಯಕ್ತವಾಗಿದೆ. ಮಾಡಾಳ್ ಗೆ ಲೋಕಾಯುಕ್ತ ಕಂಟಕವಾದರೆ , ಓಲೇಕಾರ್ ನಕಲಿ ಬಿಲ್ ಕೇಸ್ ನಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ಇವರಿಬ್ಬರ ಬದಲಾಗಿ ಬೇರೆ ಸಮರ್ಥ ಅಭ್ಯರ್ಥಿಗೆ ಟಿಕೆಟ್ ಕೊಡುವಂತೆ ಹಾವೇರಿ ಜಿಲ್ಲಾ ಕೋರ್ ಕಮಿಟಿ ಸದಸ್ಯರು ಅಭಿಪ್ರಾಯ ನೀಡಿದ್ದಾರೆ. ರಾಣಿಬೆನ್ನೂರು ಕ್ಷೇತ್ರದಲ್ಲಿ ಅರುಣ್ ಕುಮಾರ್ ಟಿಕೆಟ್ ನೀಡುವ ಬಗ್ಗೆ ಪರ - ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ಅಥಣಿಯಲ್ಲಿ ಕುಮ್ಮಟಹಳ್ಳಿ ಟಿಕೆಟ್​ಗಾಗಿ ಸಾಹುಕಾರ್ ಪಟ್ಟಿ ಹಿಡಿದರೆ, ಈ ಕಡೆ ಲಕ್ಷ್ಮಣ ಸವದಿ ಕೂಡ ಟಿಕೆಟ್ ನನಗೆ ಬೇಕು ಎಂದಿದ್ದಾರೆ. ಶ್ರೀಮಂತ ಪಾಟೀಲ್ ಮತ್ತು ಮಹೇಶ್​ ಕುಮಟಳ್ಳಿ ಟಿಕೆಟ್ ವಿಚಾರವನ್ನು ಹೈಕಮಾಂಡ್ ನಿರ್ಧಾರಕ್ಕೆ ಬಿಡಲಾಗಿದೆ. ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಚರ್ಚಿಸಲಾಯಿತು.

ಶಿವಮೊಗ್ಗ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ವಿಚಾರದಲ್ಲೂ ಸಾಕಷ್ಟು ಚರ್ಚೆ ನಡೆದಿದ್ದು, ಮುಖ್ಯವಾಗಿ ಶಿವಮೊಗ್ಗ ನಗರದಲ್ಲಿ ಈಶ್ವರಪ್ಪ ಮತ್ತು ಆಯಾನೂರು ಮಂಜುನಾಥ್ ಅವರ ಸ್ಪರ್ಧೆಯ ಒಲವು ಬಗ್ಗೆ ಚರ್ಚೆ ನಡೆಯಿತು. ಸಾಗರದಲ್ಲಿ ಹರತಾಳು ಹಾಲಪ್ಪಗೆ ಕಾರ್ಯಕರ್ತರ ವಿರೋಧವಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಎಲ್ಲೆಲ್ಲಿ ಹಾಲಿ ಶಾಸಕರಿಗೆ ವಿರೋಧ ವ್ಯಕ್ತವಾಗಿದೆಯೋ ಅಲ್ಲೆಲ್ಲಾ ಮತ್ತೊಂದು ಹೆಸರನ್ನು ಸೇರಿಸಿ ಹೈಕಮಾಂಡ್​ಗೆ ಕಳಿಹಿಸಬೇಕು ಎನ್ನುವ ನಿರ್ಧಾರಕ್ಕೆ ಪಕ್ಷದ ನಾಯಕರು ಬಂದಿದ್ದಾರೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಕ್ರಿಮಿನಲ್​ ಕೇಸಲ್ಲಿ ಜೈಲು ಶಿಕ್ಷೆ: ನಾಳೆ ಸೂರತ್​ ಕೋರ್ಟ್​ಗೆ ರಾಹುಲ್​ ಗಾಂಧಿ ಮೇಲ್ಮನವಿ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.