ಹಾವೇರಿ: ಬಚ್ಚಲ ಮನೆಯಲ್ಲಿ ಇಟ್ಟಿದ್ದ ನೀರಿನ ಬ್ಯಾರಲ್ನೊಳಗೆ ಬಿದ್ದು ಮೂರು ವರ್ಷದ ಮಗು ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಚಂದಾಪುರ ಗ್ರಾಮದಲ್ಲಿ ನಡೆದಿದೆ. ಅದಿತ್ಯ ಲಮಾಣಿ ಮೃತಪಟ್ಟ ಬಾಲಕ.
ಬಚ್ಚಲ ಮನೆಯಲ್ಲಿದ್ದ ನೀರಿನ ಬ್ಯಾರಲ್ಗೆ ಬಿದ್ದು 3 ವರ್ಷದ ಮಗು ಸಾವು
ಸಾಂದರ್ಭಿಕ ಚಿತ್ರ (ETV Bharat)
Published : 12 hours ago
ಮೃತ ಬಾಲಕ ಯಲ್ಲಮ್ಮ-ಶಂಕರ್ ಎಂಬ ದಂಪತಿಯ ಮಗ. ತಂದೆ-ತಾಯಿ ಅಕ್ಕನ ಜೊತೆ ಆಟವಾಡಲು ಮಗುವನ್ನು ಬಿಟ್ಟು ಗದ್ದೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಅವಘಡ ನಡೆದಿದೆ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಶಿವಮೊಗ್ಗ: ಆಟವಾಡುವಾಗ ಜ್ಯೂಸ್ ಬಾಟಲ್ನ ಮುಚ್ಚಳ ನುಂಗಿ ಮಗು ಸಾವು