ಕರ್ನಾಟಕ

karnataka

ETV Bharat / snippets

ನೆಲಮಂಗಲ: ಮಹಿಳೆ ಮೇಲೆ ದಾಳಿ ಮಾಡಿ ರುಂಡ ಹೊತ್ತೊಯ್ದ ಚಿರತೆ

leopard attack
ಮಹಿಳೆ, ಚಿರತೆ(ಸಂಗ್ರಹ ಚಿತ್ರ) (ETV Bharat and IANS)

By ETV Bharat Karnataka Team

Published : 10 hours ago

ನೆಲಮಂಗಲ:ಮಹಿಳೆ ಮೇಲೆ ಚಿರತೆ ದಾಳಿ ನಡೆಸಿ ಕೊಂದು ರುಂಡ ಹೊತ್ತೊಯ್ದ ಭಯಾನಕ ಘಟನೆ ನೆಲಮಂಗಲ ತಾಲೂಕಿನ ಕಂಬಾಳು ಗೊಲ್ಲರಹಟ್ಟಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಕರಿಯಮ್ಮ (55), ಮೃತಪಟ್ಟ ಮಹಿಳೆ. ತೋಟದಲ್ಲಿ ಮೇವು ಕೊಯ್ಯುತ್ತಿದ್ದ ಸಂದರ್ಭದಲ್ಲಿ ಚಿರತೆ ದಾಳಿ ನಡೆಸಿ ಮಹಿಳೆಯ ತಲೆಯನ್ನು ಹೊತ್ತೊಯ್ದಿದೆ. ಕಳೆದ ವಾರವೂ ಸಹ ವ್ಯಕ್ತಿ ಒಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು. ಇದೀಗ ಮಹಿಳೆಯನ್ನೇ ಚಿರತೆ ಬಲಿ ಪಡೆದಿದ್ದು, ಗ್ರಾಮದ ಜನರು ತೀವ್ರ ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ಮೇಲೆ ನಿರ್ಲಕ್ಷ್ಯ ಆರೋಪ ಮಾಡಿರುವ ಗ್ರಾಮಸ್ಥರು, ಬೋನ್ ಅಳವಡಿಸಿ ಚಿರತೆ ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಮೈಸೂರು: ಒಂದು ತಿಂಗಳು, ಒಂದೇ ಸ್ಥಳದಲ್ಲಿ 5ನೇ ಚಿರತೆ ಸೆರೆ: ವಿಡಿಯೋ

ABOUT THE AUTHOR

...view details