ತುಮಕೂರು:ಕೆ.ಎಫ್.ಸಿ.ಎಫ್.ಸಿ (ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ)ಯ ಸಗಟು ಮಳಿಗೆ ವ್ಯವಸ್ಥಾಪಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. ರವಿಕುಮಾರ್ (59) ಆತ್ಮಹತ್ಯೆ ಮಾಡಿಕೊಂಡ ಮಳಿಗೆ ವ್ಯವಸ್ಥಾಪಕ.
ತುರುವೇಕೆರೆ ಪಟ್ಟಣದ ಮಾಯಸಂದ್ರ ರಸ್ತೆಯ ಒಂಕಾರ್ ಆಸ್ಪತ್ರೆ ಹಿಂಬಾಗದ ಕಟ್ಟಡಲ್ಲಿ ಬಾಡಿಗೆ ಮನೆಯೊಂದರಲ್ಲಿ ಅನೇಕ ದಿನಗಳಿಂದ ರವಿಕುಮಾರ್ ವಾಸವಾಗಿದ್ದರು. ಬೆಳಗ್ಗೆ ಪೋನ್ ರಿಸೀವ್ ಮಾಡದ ಕಾರಣ ಮನೆಯ ಬಳಿ ಬಂದು ನೋಡಿದಾಗ ಮನೆಯ ಫ್ಯಾನ್ಗೆ ಹಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.