ಕರ್ನಾಟಕ

karnataka

ETV Bharat / snippets

ಜಮೀನಿನ ಬಳಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು

ಹರೀಶ್(45) ಮೃತಪಟ್ಟ ರೈತ.
ಹರೀಶ್ (45) ಮೃತಪಟ್ಟ ರೈತ (ETV Bharat)

By ETV Bharat Karnataka Team

Published : 22 hours ago

ಮಂಡ್ಯ:ತಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕೋಟಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಹರೀಶ್(45) ಮೃತಪಟ್ಟ ರೈತ.

ಜಮೀನಿಗೆ ನೀರು ಹಾಯಿಸಲು ಪಂಪ್‌ಸೆಟ್ ಬಳಿ ಹೋಗಿದ್ದ ರೈತ, ಕಡಿದು ಬಿದ್ದ ವಿದ್ಯುತ್ ತಂತಿ ತುಳಿದಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆಗೆ ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಗ್ರಾಮಸ್ಥರು, ಮೃತನ ಕುಟುಂಬಕ್ಕೆ ಚೆಸ್ಕಾಂನಿಂದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಉಡುಪಿ: ಬೀಜಾಡಿ ಸಮುದ್ರದಲ್ಲಿ ಮುಳುಗಿ ಇಬ್ಬರು ಯುವಕರು ಸಾವು, ಇಬ್ಬರ ರಕ್ಷಣೆ

ABOUT THE AUTHOR

...view details