ಮಂಡ್ಯ:ಕೌಟುಂಬಿಕ ಕಲಹದಿಂದ ದಂಪತಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದ ಕಿರಂಗೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಪ್ರಭಾವತಿ (45) ಮತ್ತು ದಿಲೀಪ್ (45) ಎಂದು ಗುರುತಿಸಲಾಗಿದೆ.
ಇಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಹಾಗಾಗಿ ಕಳೆದ ರಾತ್ರಿ ಪ್ರಭಾವತಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ ಸಾವಿನಿಂದ ನೊಂದು ಬೆಳಗ್ಗೆ ಪತಿ ದಿಲೀಪ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಬುರಾಯನ ಕೊಪಲು ಬಳಿ ಜಮೀನೊಂದರಲ್ಲಿ ದಿಲೀಪ್ ಆತ್ಮಹತ್ಯೆಗೆ ಶರಣಾಗಿದ್ದಾರೆ.