ಕರ್ನಾಟಕ

karnataka

ಬೆಂಗಳೂರು: ಆನ್‌ಲೈನ್‌ ಡೆಲಿವರಿ ಸಿಬ್ಬಂದಿಯ ಬ್ಯಾಗ್ ಕಳ್ಳತನ!

By ETV Bharat Karnataka Team

Published : Aug 4, 2024, 2:28 PM IST

Delivery executives bag theft  thieves gang active  Bengaluru
ಡೆಲಿವರಿ ಎಕ್ಸಿಕ್ಯುಟಿವ್‌ಗಳ ಯಾಮಾರಿಸಿ ಬ್ಯಾಗ್ ಕಳ್ಳತನ: ನಗರದಲ್ಲಿ ಖದೀಮರ ಗುಂಪು ಆ್ಯಕ್ಟಿವ್ (ETV Bharat)

ಬೆಂಗಳೂರು:ಆನ್‌ಲೈನ್ ಡೆಲಿವರಿ ಎಕ್ಸಿಕ್ಯುಟಿವ್‌ಗಳನ್ನು ಗುರಿಯಾಗಿಸಿಕೊಂಡು ಅವರ ಬ್ಯಾಗ್‌ನಲ್ಲಿರುವ ವಸ್ತುಗಳನ್ನು ಕಳ್ಳತನ ಮಾಡುವ ಗುಂಪೊಂದು ಬೆಂಗಳೂರಿನಲ್ಲಿ ಸಕ್ರಿಯವಾಗಿದೆ. ಅಮೆಜಾನ್, ಫ್ಲಿಫ್ ಕಾರ್ಟ್ ಸೇರಿದಂತೆ ವಿವಿಧ ಕಂಪನಿಗಳ ಡೆಲಿವರಿ ಎಕ್ಸಿಕ್ಯುಟಿವ್‌ಗಳನ್ನು ಟಾರ್ಗೆಟ್ ಮಾಡಿಕೊಂಡು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬರುತ್ತಿರುವ ಖದೀಮರು, ಅವರು ಆರ್ಡರ್ ಕೊಟ್ಟು ಬರುತ್ತಿರುವಂತೆ ಕ್ಷಣಮಾತ್ರದಲ್ಲಿ ಬ್ಯಾಗ್‌ನಲ್ಲಿರುವ ವಸ್ತುಗಳನ್ನು ಎಗರಿಸುತ್ತಿದ್ದಾರೆ.

ಕಳೆದ ಒಂದು ವಾರದಿಂದ ನಗರದ ವೈಟ್ ಫೀಲ್ಡ್, ಮಹದೇವಪುರ ಸೇರಿದಂತೆ ಮೂರು ಕಡೆಗಳಲ್ಲಿ ಆರೋಪಿಗಳು ಕೈಚಳಕ ತೋರಿದ್ದಾರೆ. ಆಗಸ್ಟ್ 1ರಂದು ವೈಟ್ ಫೀಲ್ಡ್ ಬಳಿ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ಸರಯೂ ನದಿಯಲ್ಲಿ ಮುಳುಗಿದ 9 ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ: ಓರ್ವ ಕಾಣೆ, 8 ಮಂದಿಯ ರಕ್ಷಣೆ

ABOUT THE AUTHOR

...view details