ಕೆಮಿಕಲ್ ಮಿಶ್ರಿತ ಬಣ್ಣಕ್ಕೆ ಬ್ರೇಕ್: ಮಣ್ಣಿನಲ್ಲಿಯೇ ಹೋಳಿ ಆಡಿ ಮಾದರಿಯಾದ ನೂಲ್ವಿ ಗ್ರಾಮದ ಯುವಕರು - Youths celebrated holi festival - YOUTHS CELEBRATED HOLI FESTIVAL
Published : Mar 26, 2024, 5:30 PM IST
ಹುಬ್ಬಳ್ಳಿ : ಹೋಳಿ ಹಬ್ಬ ಎಂದರೆ ತರ - ತರಹದ ಬಣ್ಣಗಳನ್ನು ಹಚ್ಚಿಕೊಂಡು ಆಚರಣೆ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ವಿಶೇಷವಾಗಿ ಹೋಳಿ ಹಬ್ಬ ಆಚರಣೆ ಮಾಡಿ, ಪರಿಸರ ಸ್ನೇಹಿ ಸಂದೇಶ ಸಾರಿದ್ದಾರೆ.
ಕಲರ್ ಕಲರ್ ಬಣ್ಣಗಳ ಬದಲಿಗೆ ಮಣ್ಣು ಹಚ್ಚಿಕೊಂಡು ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ. ವಿಶೇಷ ಹೋಳಿ ಹಬ್ಬದ ಆಚರಣೆಗೆ ನೂಲ್ವಿ ಗ್ರಾಮ ಸಾಕ್ಷಿಯಾಯಿತು. ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದ ಗ್ರಾಮದ ಯುವಕರು, ಸಾಮೂಹಿಕವಾಗಿ ಕಾಮ ದಹನ ಮಾಡಿ, ಹೋಳಿ ಹಬ್ಬ ಆಚರಣೆ ಮಾಡಿದ್ದು, ಕಲರ್ ಕಲರ್ ಬಣ್ಣಗಳ ಬಳಕೆಗೆ ಬ್ರೇಕ್ ಹಾಕಿದ್ದಾರೆ. ಬಣ್ಣಗಳ ಬದಲಿಗೆ ಮಣ್ಣಿನೊಂದಿಗೆ ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ.
ರಾಸಾಯನಿಕ ಬಣ್ಣಗಳಿಂದ ಆರೋಗ್ಯದ ಮೇಲೆ ಸಮಸ್ಯೆಗಳಾಗುತ್ತವೆ ಎಂಬ ಕಾರಣಕ್ಕೆ ಗ್ರಾಮದ ಯುವಕರು, ಬಣ್ಣಗಳ ಬದಲಿಗೆ ಮಣ್ಣು ಬಳಕೆ ಮಾಡಿಕೊಂಡು ಹೋಳಿ ಹಬ್ಬದ ಆಚರಣೆ ಮಾಡಿದರು. ಸಂಪೂರ್ಣವಾಗಿ ಮಣ್ಣಿನಲ್ಲಿ ಮಿಂದೆದ್ದು, ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಣ್ಣಿನೊಂದಿಗೆ ಹೋಳಿ ಹಬ್ಬದ ಆಚರಣೆ ಮಾಡುವ ಮೂಲಕ, ನೂಲ್ವಿ ಗ್ರಾಮದ ಯುವಕರು ಹೊಸ ಇತಿಹಾಸ ಬರೆದಿದ್ದಾರೆ.
ಇದನ್ನೂ ಓದಿ : ಬಣ್ಣದೋಕುಳಿಯಲ್ಲಿ ಮಿಂದೆದ್ದ ಕುಂದಾನಗರಿ ಜನ; ಕುಣಿದು ಕುಪ್ಪಳಿಸಿದ ಯುವಜನತೆ - Holi Celebration