ಧಾರವಾಡ: ಸ್ನೂಕರ್ ಆಡುತ್ತಿದ್ದಾಗಲೇ ಹಾರಿಹೋಯ್ತು ಯುವಕನ ಪ್ರಾಣಪಕ್ಷಿ! - Heart Attack - HEART ATTACK
Published : Jun 24, 2024, 10:31 PM IST
ಧಾರವಾಡ: ಸ್ನೂಕರ್ ಆಡುವಾಗಲೇ ಯುವಕನ ಪ್ರಾಣಪಕ್ಷಿ ಹಾರಿಹೋದ ಘಟನೆ ಇಂದು ಧಾರವಾಡ ನಗರದ ರಜತಗಿರಿ ಬಡಾವಣೆಯಲ್ಲಿ ನಡೆಯಿತು. ಸುಶಾಂತ್ ಮಲ್ಲಿಗೇರಿ ಎಂಬವರು ಹೃದಯಾಘಾತದಿಂದ ಅಸುನೀಗಿದ್ದಾರೆ. ಇವರು ಸ್ನೂಕರ್ ಆಡುತ್ತಿದ್ದಾಗ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ನಿವಾಸಿಯಾಗಿರುವ ಸುಶಾಂತ್ ಗೆಳೆಯರ ಜೊತೆ ಸ್ನೂಕರ್ ಆಡುತ್ತಿದ್ದರು.
ಸುಶಾಂಕ್ ಕುಸಿದು ಬಿದ್ದಿರುವುದನ್ನು ನೋಡಿದ ಸ್ಥಳದಲ್ಲಿದ್ದ ಗೆಳೆಯರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರು. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ಸಿನಲ್ಲೇ ಹೃದಯಾಘಾತ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕರೊಬ್ಬರು ಹೃದಯಘಾತದಿಂದ ಮೃತಪಟ್ಟ ಘಟನೆ ಹೊನ್ನಾವರ ತಾಲೂಕಿನ ಹಡಿನಬಾಳ ಬಳಿ (ಜೂನ್-22-24) ನಡೆದಿತ್ತು. ಹಡಿನಬಾಳ ಗ್ರಾಮದ ಕೃಷ್ಣ ಶೆಟ್ಟಿ (70) ಸಾವನ್ನಪ್ಪಿದವರು.
ಹೊನ್ನಾವರದ ಮಾರುಕಟ್ಟೆಗೆ ತೆರಳಿ ಹೊನ್ನಾವರದಿಂದ ಗೇರುಸೊಪ್ಪ ಕಡೆಗೆ ತೆರಳುತ್ತಿದ್ದ ಬಸ್‌ನಲ್ಲಿ ವಾಪಸಾಗುತ್ತಿದ್ದ ಅವರು ಬಸ್ ಮುಂಭಾಗದ ಸೀಟಿನಲ್ಲಿ ಕುಳಿತಲ್ಲಿಯೇ ಸಾವನ್ನಪ್ಪಿದ್ದರು. ಇನ್ನೊಂದೆಡೆ, ಇತ್ತೀಚಿಗೆ ಯುವಜನತೆಯಲ್ಲಿ ಹೃದಯಾಘಾತ ಹೆಚ್ಚುತ್ತಿರುವುದು ಕಳವಳ ಮೂಡಿಸಿದೆ.
ಇದನ್ನೂ ಓದಿ : ಬಸ್ಸಿನಲ್ಲಿಯೇ ಹೃದಯಾಘಾತ: ಆಸ್ಪತ್ರೆಗೆ ಕರೆದೊಯ್ಯುವಾಗ ಪ್ರಾಣಬಿಟ್ಟ ವೃದ್ಧ