ಕರ್ನಾಟಕ

karnataka

ETV Bharat / videos

ಮೈದುಂಬಿ ಹರಿಯುತ್ತಿದೆ ತುಂಗಭದ್ರಾ: ನದಿ ಪಾತ್ರದಲ್ಲಿ ಪ್ರವಾಹದ ಭೀತಿ - Tungabhadra is overflowing - TUNGABHADRA IS OVERFLOWING

By ETV Bharat Karnataka Team

Published : Jul 17, 2024, 4:21 PM IST

ದಾವಣಗೆರೆ: ಹನಿ ನೀರಿಲ್ಲದೆ ಬಣಗುಡುತ್ತಿದ್ದ ತುಂಗಭದ್ರಾ ನದಿ ಇದೀಗ ಉಕ್ಕಿ ಹರಿಯುತ್ತಿದೆ. ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ತುಂಗಾ ಡ್ಯಾಂ ಭರ್ತಿಯಾಗಿದೆ. ತುಂಗಾ ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದ್ದು, ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಹರಿಹರ ತಾಲೂಕಿನ ವಾಸನ-ಬಾನುಹಳ್ಳಿಯ ಬಳಿ ತುಂಗಭದ್ರಾ ನದಿಗೆ ಕಟ್ಟಿರುವ ಮೇಲು ಸೇತುವೆ ಬಳಿ ನದಿ ಪ್ರವಾಹ ಸೃಷ್ಟಿಸುವ ಆತಂಕ ಜನರಲ್ಲಿ ಮನೆ ಮಾಡಿದೆ. 

ತುಂಗಾ ಮತ್ತು ಭದ್ರಾ ಆಣೆಕಟ್ಟುಗಳಿಗೆ ಅಪಾರ ಪ್ರಮಾಣದಲ್ಲಿ ಒಳಹರಿವು ಹೆಚ್ಚಾಗಿದೆ. ತುಂಗಾ ಆಣೆಕಟ್ಟಿನಿಂದ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿರುವ ಹಿನ್ನೆಲೆ ತುಂಗಭದ್ರ ನದಿ ಮೈದುಂಬಿದೆ. ಜಿಲ್ಲೆಯ ನ್ಯಾಮತಿ, ಹೊನ್ನಾಳಿ ಹಾಗೂ ಹರಿಹರ ತಾಲೂಕು ವ್ಯಾಪ್ತಿಯಲ್ಲಿ ತುಂಗಾ ಭದ್ರ ನದಿ ಉಕ್ಕಿ ಹರಿಯುತ್ತಿದ್ದು, ಸಾವಿರಾರು ಹೆಕ್ಟೇರ್ ಜಮೀನು ಸೇರಿದಂತೆ ಸುಮಾರು 38 ಕ್ಕೂ ಅಧಿಕ ಹಳ್ಳಿಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ಅಪಾರ ಪ್ರಮಾಣದ ನೀರು ನದಿಯಲ್ಲಿ ಹರಿಯುತ್ತಿರುವುದರಿಂದ ನದಿಯಲ್ಲಿ ರೈತರ ಪಂಪ್ ಸೆಟ್​ಗಳು ಮುಳುಗಿ ಹೋಗಿವೆ. ಕೆಲಕಡೆ ರಸ್ತೆ ಸಂಚಾರ ಸ್ಥಗಿತವಾಗಿದ್ದು, ತುಂಗಾಭದ್ರ ನದಿ ಪಾತ್ರದ ಜನರು ನದಿಗೆ ಇಳಿಯದಂತೆ ಜಿಲ್ಲಾಡಳಿತ ಮನವಿ ಮಾಡಿದೆ. ನದಿಯಲ್ಲಿ ಸದ್ಯ 9 ಮೀಟರ್​ನಷ್ಡು ನೀರಿದ್ದು, ಒಂದು ವೇಳೆ 13 ಮೀಟರ್​ನಷ್ಟು ನೀರು ಹರಿಬಂದರೆ ಸಾಕಷ್ಟು ಅವಾಂತರ ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಮಳೆ ನಿಂತರೂ ನಿಲ್ಲದ ನೆರೆ: ಅಘನಾಶಿನಿ ನದಿ ಹರಿವು, ಪ್ರವಾಹ ಪ್ರದೇಶದ ಡ್ರೋನ್‌ ದೃಶ್ಯ - Uttara Kannada Flood

ABOUT THE AUTHOR

...view details