ಕರ್ನಾಟಕ

karnataka

ETV Bharat / videos

ಮುಸುಕುಧಾರಿ ಗ್ಯಾಂಗ್​ನಿಂದ ಕಳ್ಳತನ ಯತ್ನ: ಸಿಸಿಟಿವಿ ದೃಶ್ಯ - ROBBERY ATTEMPT

By ETV Bharat Karnataka Team

Published : Nov 8, 2024, 2:26 PM IST

ರಾಯಚೂರು: ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮುಸುಕುಧಾರಿ ಗ್ಯಾಂಗ್‌ವೊಂದು ಕಳ್ಳತನಕ್ಕೆ ಯತ್ನಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ. 

ಲಿಂಗಸೂಗೂರಿನ ಗುಡದಾಳ ರಸ್ತೆಯಲ್ಲಿನ ಎಕ್ಸ್‌ಪರ್ಟ್ ಸ್ಕೂಲ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿನ ಕಳ್ಳತನ ಮಾಡುವುದಕ್ಕೆ ನಾಲ್ಕು ಜನರ ಗ್ಯಾಂಗ್ ಮುಸುಕು ಧರಿಸಿ ಬಂದಿದ್ದರು. ಜೊತೆಗೆ ಕಳ್ಳತನಕ್ಕೆ ಬೇಕಾದ ಅಸ್ತ್ರಗಳು ಹಿಡಿದುಕೊಂಡು ಓಡಾಡಿದ್ದಾರೆ. ಆದರೆ ಅವರ ಯತ್ನ ವಿಫಲವಾಗಿದೆ. ಕಳ್ಳರ ಚಲನವಲನಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. 

"ನಿನ್ನೆ ರಾತ್ರಿ ವೇಳೆ ಕಳ್ಳರ ತಂಡ ಓಡಾಟ ಮಾಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸ್ಥಳೀಯ ಕಳ್ಳರ ತಂಡವಲ್ಲ, ಉತ್ತರ ಭಾರತದ ಮೂಲದ ಕಳ್ಳರು ಆಗಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಜಿಲ್ಲೆಯಾದ್ಯಂತ ಸಹ ಅಲರ್ಟ್ ಮಾಡಲಾಗಿದೆ. ಕಳ್ಳರನ್ನು ಶೀಘ್ರದಲ್ಲಿ ಪತ್ತೆ ಹಚ್ಚುತ್ತೇವೆ" ಎಂದು ಲಿಂಗಸೂಗೂರು ಪೊಲೀಸರು ದೂರವಾಣಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಸಿನಿಮಾ ನಿರ್ದೇಶಕನಾಗಬೇಕಿದ್ದವ ಪತ್ನಿಯ ಗೆಳೆಯನ ಕೊಂದು ಜೈಲು ಸೇರಿದ್ದ: ಈಗ 42 ಕಳ್ಳತನ ಕೇಸ್​ನಲ್ಲಿ ಮತ್ತೆ ಅರೆಸ್ಟ್

ABOUT THE AUTHOR

...view details