ಸಿದ್ಧಾರೂಢ ಮಠದ ಮಾದರಿಯಲ್ಲಿ ಬೆಳಗಾವಿಯಲ್ಲಿ ಜಲರಥೋತ್ಸವ - Siddharudha Jala Rathotsava - SIDDHARUDHA JALA RATHOTSAVA
Published : Sep 6, 2024, 5:51 PM IST
ಬೆಳಗಾವಿ: ಹುಬ್ಬಳ್ಳಿಯ ಸಿದ್ಧಾರೂಢ ಮಠದ ಮಾದರಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ನಡೆದ ಸಿದ್ಧಾರೂಢರ ಜಲರಥೋತ್ಸವ ವಿಶೇಷ ಗಮನ ಸೆಳೆಯಿತು.
ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಆರೂಢ ಮಠದಲ್ಲಿ ಗುರುವಾರ ತೆಪ್ಪೋತ್ಸವ ಆಯೋಜಿಸಲಾಗಿತ್ತು. ಗ್ರಾಮದ ಕೆರೆಯಲ್ಲಿ ಸಿದ್ಧಾರೂಢರ ತೆಪ್ಪೋತ್ಸವವು ಆರೂಢ ಮಠದ ಪೀಠಾಧಿಪತಿ ಶಿವಪುತ್ರ ಶ್ರೀಗಳ ಸಾನ್ನಿಧ್ಯದಲ್ಲಿ ಜರುಗಿತು.
ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿ ಪ್ರತಿ ವರ್ಷ ಜಲ ರಥೋತ್ಸವ ಹಮ್ಮಿಕೊಳ್ಳಲಾಗುತ್ತದೆ. ಸಿದ್ಧಾರೂಢರ ಸಂಪ್ರದಾಯದಲ್ಲಿಯೇ ನಡೆಯುವ ಚಿಕ್ಕಮುನವಳ್ಳಿಯ ಆರೂಢ ಮಠದಲ್ಲೂ ಇದೇ ಮೊದಲ ಬಾರಿ ಹಮ್ಮಿಕೊಂಡಿದ್ದ ಜಲರಥೋತ್ಸವ ಎಲ್ಲರ ಗಮನ ಸೆಳೆಯಿತು. ಕೆರೆಯ ಸುತ್ತಲೂ ಆರೂಢ ಮಠದ ಭಕ್ತರು ನಿಂತು ಜಲರಥೋತ್ಸವ ವೀಕ್ಷಿಸಿ ಪುನೀತರಾದರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಪರಾಕಾಷ್ಠೆ ಮೆರೆದರು.
ಇದನ್ನೂ ಓದಿ: ಶಿವಮೊಗ್ಗ: ಬಾಗಿನ ನೀಡಿ ಸಂಭ್ರಮದಿಂದ ಗೌರಿ ಗಣೇಶ ಹಬ್ಬ ಆಚರಿಸಿದ ಮುತ್ತೈದೆಯರು - Gowri Ganesha festival
ಇದನ್ನೂ ಓದಿ: ನಾಳೆ ಗಣೇಶ ಚತುರ್ಥಿ: ವಿನಾಯಕನ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದರು - Ganesh Chaturthi