ಸುತ್ತೂರು ಜಾತ್ರೆಯಲ್ಲಿ ಗಮನ ಸೆಳೆದ ಗ್ರಾಮೀಣ ಸೊಗಡಿನ ಕ್ರೀಡೆಗಳು: ನೋಡಿ - ಮೈಸೂರು
Published : Feb 9, 2024, 5:54 PM IST
ಮೈಸೂರು: ನಂಜನಗೂಡು ತಾಲೂಕಿನ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮೀಣ ಆಟಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಸುತ್ತೂರಿನ ಸಮೀಪದ ಗದ್ದೆಯಲ್ಲಿ ಕೆಸರು ಗದ್ದೆ ಓಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು. ಕೆಸರು ಗದ್ದೆ ಓಟದಲ್ಲಿ ಸ್ಪರ್ಧಾಳುಗಳು ನಾ ಮುಂದು, ತಾ ಮುಂದೆಂದು ಎದ್ದೂಬಿದ್ದು ಓಡಿ ಗುರಿ ತಲುಪಿದರು. ಸ್ಪರ್ಧಾಳುಗಳನ್ನು ನೆರೆದಿದ್ದ ಪ್ರೇಕ್ಷಕರು ಹುರಿದುಂಬಿಸಿದರು. ಮತ್ತೊಂದೆಡೆ, ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಯುವಕರು ತಮ್ಮ ಬಲ ಪ್ರದರ್ಶಿಸಿ ಪ್ರೇಕ್ಷಕರ ಖುಷಿ ಹೆಚ್ಚಿಸಿದರು.
ಹೆಣ್ಣು ಮಕ್ಕಳಿಗೆ ಮಡಿಕೆ ಒಡೆಯುವ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ, ಗಾಳಿಪಟ ಹಾರಿಸುವ ಸ್ಪರ್ಧೆ, ಅಳಿಮನೆಗೂಳಿ ಮತ್ತು ಪಗಡೆ ಆಟಗಳನ್ನು ಆಯೋಜಿಸಲಾಗಿತ್ತು. ಅಪರೂಪದ ಗ್ರಾಮೀಣ ಆಟಗಳನ್ನು ಆಡಿದ ಈ ಭಾಗದ ಜನರು ಜಾತ್ರೆಗೆ ಮತ್ತಷ್ಟು ಮೆರುಗು ತಂದರು.
ದೇಸಿಯ ಆಟಗಳ ಸ್ಪರ್ಧೆ ಉದ್ಘಾಟಿಸಿದ್ದ ಸಿಎಂ: ಬುಧವಾರ ಸುತ್ತೂರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ದೇಸಿಯ ಆಟಗಳು ಮತ್ತು ರಂಗೋಲಿ ಸ್ಪರ್ಧೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದರು.
ಇದನ್ನೂ ಓದಿ: ಸುತ್ತೂರು ಜಾತ್ರೆ; ಅದ್ಧೂರಿಯಾಗಿ ನೆರವೇರಿದ ರಥೋತ್ಸವ - ವಿಡಿಯೋ