ಕಾನ್ಸ್ಟೇಬಲ್ಗೆ ಡಿಕ್ಕಿ ಹೊಡೆದ ರಕ್ತಚಂದನ ಕಳ್ಳಸಾಗಣೆದಾರರ ವಾಹನ: ಪೊಲೀಸ್ ಸಾವು - ರಕ್ತಚಂದನ ಕಳ್ಳಸಾಗಣೆದಾರರು
Published : Feb 6, 2024, 1:01 PM IST
ಅಣ್ಣಮೈಯಾ (ಆಂಧ್ರಪ್ರದೇಶ): ರಕ್ಷಣಾ ಕಾರ್ಯಾಚರಣೆಯಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ವೋರ್ವರು ಮೃತಪಟ್ಟ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಅಣ್ಣಮೈಯಾ ಜಿಲ್ಲೆಯಲ್ಲಿ ರಕ್ತಚಂದನ ಸಾಗಣೆದಾರರು ಪೊಲೀಸ್ ಕಾನ್ಸ್ಟೇಬಲ್ ಸಾವಿಗೆ ಕಾರಣರಾಗಿದ್ದಾರೆ. ವಾಹನ ಡಿಕ್ಕಿ ಹೊಡೆದ ಪರಿಣಾಮ ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್ ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ ತಪಾಸಣೆ ವೇಳೆ ಈ ಘಟನೆ ನಡೆದಿದೆ.
ಕೆ.ವಿ ಪಲ್ಲಿ ಮಂಡಲದ ಚಿನಪಲ್ಲಿಯಲ್ಲಿ ಕೆಂಪು ಚಂದನದ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಕೂಡಲೇ ಫೀಲ್ಡಿಗಿಳಿದ ಪೊಲೀಸರು ಸುಂಡುಪಲ್ಲಿ ಗಡಿಭಾಗದ ಗೊಲ್ಲಪಲ್ಲಿ ಬಳಿ ಕಾರ್ಯಾಚರಣೆಗಿಳಿದಿದ್ದಾರೆ.
ಕಾನ್ಸ್ಟೇಬಲ್ ಗಣೇಶ್ ಅವರು ರಕ್ತ ಚಂದನ ಸಾಗಿಸುತ್ತಿದ್ದ ವಾಹನವನ್ನು ತಡೆಯಲು ಯತ್ನಿಸಿದ್ದಾರೆ. ಆದ್ರೆ ಕಿಡಿಗೇಡಿಗಳು ಕಾನ್ಸ್ಟೇಬಲ್ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಪಿಲೇರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಪೊಲೀಸರು ತಪಾಸಣೆ ಮುಂದುವರಿಸಿ, ರಕ್ತಚಂದನ ಕಳ್ಳಸಾಗಣೆದಾರರ ವಾಹನ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: 'ನಿತ್ಯ 290 ದಶಲಕ್ಷ ಲೀಟರ್ ನೀರಿಗೆ ಬೇಡಿಕೆ, ಕೈಗಾರಿಕಾ ಪ್ರದೇಶಗಳಿಗೆ ನೀರು ಪೂರೈಸಲು ತ್ವರಿತ ಕ್ರಮಕ್ಕೆ ಸೂಚನೆ'
ಇದನ್ನೂ ಓದಿ: ಚಿಲಿ ಕಾಳ್ಗಿಚ್ಚು: ಸಾವಿನ ಸಂಖ್ಯೆ 123ಕ್ಕೆ ಏರಿಕೆ; ಹೃದಯವಿದ್ರಾವಕ ಘಟನೆಯ ಫೋಟೋಗಳಿವು