ಕರ್ನಾಟಕ

karnataka

ETV Bharat / videos

ಮಕ್ಕಳೊಂದಿಗೆ ಬಿಸಿಯೂಟ ಸವಿದ ನಾಟ್ಯ ಮಯೂರಿ : ವಿಡಿಯೋ - Peacock ate lunch - PEACOCK ATE LUNCH

By ETV Bharat Karnataka Team

Published : Aug 28, 2024, 9:14 PM IST

ವಿಜಯಪುರ : ತಾಲೂಕಿನ ಜಂಬಗಿ (ಆ) ಗ್ರಾಮದ ಕೆರೂರವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ವಸ್ತಿ ಶಾಲಾ ಮಕ್ಕಳು ಬಿಸಿಯೂಟ ಸೇವಿಸುತ್ತಿದ್ದಾಗ ರಾಷ್ಟ್ರಪಕ್ಷಿ ನವಿಲು ಹಾರಿಬಂದಿದೆ. ಮಕ್ಕಳು ತಟ್ಟೆಯಲ್ಲಿ ಅನ್ನ ಹಾಕಿಕೊಂಡು ಪ್ರಾರ್ಥನೆ ಮಾಡುತ್ತಿದ್ದಾಗ ಅನ್ನದ ತಟ್ಟೆಗೆ ಕಡೆಗೆ ಸಾಗಿ ಊಟ ಸವಿದಿರುವ ದೃಶ್ಯ ಸೆರೆಯಾಗಿದೆ. 

ಈ ಸಮಯದಲ್ಲಿ ವಿದ್ಯಾರ್ಥಿನಿಯೋರ್ವಳು ತನ್ನ ತಟ್ಟೆಯನ್ನು ನವಿಲಿಗೆ ಕೊಟ್ಟು ಬೇರೊಂದು ತಟ್ಟೆ ತೆಗೆದುಕೊಂಡಿದ್ದಾಳೆ. ತರಗತಿಯ ಹತ್ತಿರವೂ ಬಂದ ನಾಟ್ಯ ಮಯೂರಿ ಧಾನ್ಯಗಳನ್ನು ಸವಿದು ತನ್ನ‌ ಹಸಿವನ್ನು ನೀಗಿಸಿಕೊಂಡಿದೆ. ಶಾಲಾ ಆವರಣವು ಹಚ್ಚ ಹಸಿರಿನ ಗಿಡಗಳ ಮಧ್ಯೆ ಸುಂದರ ಪ್ರಕೃತಿ ಸೌಂದರ್ಯ ಹೊಂದಿದ್ದು, ಪ್ರತಿದಿನ ಈ ಪ್ರಕೃತಿ ಮಡಿಲಲ್ಲಿ ಮಕ್ಕಳು ಊಟ ಸೇವಿಸುತ್ತಾರೆ. 

ಹಸಿರು ತುಂಬಿದ ವಾತಾವರಣದಲ್ಲಿ ರಾಷ್ಟ್ರಪಕ್ಷಿ ಆಗಮಿಸಿದ್ದರಿಂದ ವಿದ್ಯಾರ್ಥಿಗಳು ಫುಲ್ ಖುಷ್ ಆಗಿದ್ದಾರೆ. ಈ ಸಂದರ್ಭದಲ್ಲಿ ಊಟ ಸವಿಯುತ್ತಾ ಮುಖ್ಯೋಪಾಧ್ಯಾಯ ಪಿ. ಪಿ ನಾಯಿಕ, ಸಹಶಿಕ್ಷಕಿ ಎನ್. ವೈ ರಾಠೋಡ್​ ಮಕ್ಕಳಿಗೆ ರಾಷ್ಟ್ರಪಕ್ಷಿಯ ಕುರಿತು ಸಂಪೂರ್ಣ ವಿವರ ನೀಡಿದರು.

ಇದನ್ನೂ ಓದಿ :  ಗಾಯಗೊಂಡ ರಾಷ್ಟ್ರೀಯ ಪಕ್ಷಿ ರಕ್ಷಿಸಿದ ಗಂಗಾವತಿ ಯುವಕರು

ABOUT THE AUTHOR

...view details