ಛತ್ರಪತಿ ಶಿವಾಜಿ 394ನೇ ಜನ್ಮದಿನ: ಮರಾಠ ನಾಯಕನ ಪ್ರತಿಮೆಗೆ ಸಿಎಂ ಏಕನಾಥ್ ಶಿಂಧೆ ಪುಷ್ಪನಮನ - ಛತ್ರಪತಿ ಶಿವಾಜಿ
By ANI
Published : Feb 19, 2024, 12:18 PM IST
ಮುಂಬೈ (ಮಹಾರಾಷ್ಟ್ರ): ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನದ ನಿಮಿತ್ತ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೋಮವಾರ ಮುಂಬೈನ ಚೆಂಬೂರಿನಲ್ಲಿರುವ ಶಿವಾಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಇಂದು ವೀರ ಮರಾಠ ರಾಜ ಛತ್ರಪತಿ ಶಿವಾಜಿಯ 394ನೇ ಜನ್ಮದಿನವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆ ಸಿಎಂ ಏಕನಾಥ್ ಶಿಂಧೆ ಹಾಗೂ ಡಿಸಿಎಂ ದೇವೇಂದ್ರ ಫಡ್ನವೀಸ್ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಶಿವಾಜಿ ಮಹಾರಾಜ್ ಗೌರವ ಸಲ್ಲಿಸಿದರು. "ಅಖಂಡ ಹಿಂದೂಸ್ಥಾನದ ಆರಾಧ್ಯ ದೈವ, ಹಿಂದವಿ ಸ್ವರಾಜ್ಯದ ಸಂಸ್ಥಾಪಕ, ಮಹಾರಾಜಾಧಿರಾಜ್, ಛತ್ರಪತಿ ಶಿವಾಜಿ ಮಹಾರಾಜ್ ಅವರಿಗೆ ಜನ್ಮ ವಾರ್ಷಿಕೋತ್ಸವಕ್ಕೆ ನಮನಗಳು" ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಸಿಎಂ ಶಿಂಧೆ ಅವರು ಛತ್ರಪತಿ ಶಿವಾಜಿ ಮಹಾರಾಜ ವೃತ್ತ ಹಾಗೂ ಪ್ರತಿಮೆಯ ಸೌಂದರ್ಯೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಈ ವೇಳೆ ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಹಾಲ್, ಸಂಸದ ರಾಹುಲ್ ಶೆವಾಲೆ ಹಾಗೂ ಇತರ ಶಿವಸೇನೆ ಕಾರ್ಯಕರ್ತರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಛತ್ರಪತಿ ಶಿವಾಜಿ ಕುರಿತ ನಾಟಕ ಪ್ರದರ್ಶನ: 17ನೇ ಶತಮಾನದ ಇತಿಹಾಸಕ್ಕೆ ಸಾಕ್ಷಿಯಾದ 10 ಸಾವಿರ ಜನ