ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಯಾರೆಲ್ಲಾ ವೋಟ್ ಮಾಡಿದ್ರು?: ವಿಡಿಯೋ ನೋಡಿ - Sandalwood Stars Voting - SANDALWOOD STARS VOTING
Published : Apr 26, 2024, 3:23 PM IST
ಬೆಂಗಳೂರು: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ ಇದು ಮೊದಲ ಹಂತದ ಚುನಾವಣೆಯಾಗಿದ್ದು, ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಕೂಡಾ ಮತಗಟ್ಟೆಗಳಿಗೆ ಆಗಮಿಸಿ ವೋಟ್ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಎಲ್ಲರೂ ತಪ್ಪದೆ ಮತ ಚಲಾಯಿಸುವಂತೆ ಅಭಿಮಾನಿಗಳಿಗೂ ಕರೆ ಕೊಟ್ಟಿದ್ದಾರೆ.
ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿನಯ ಚಕ್ರವರ್ತಿ ಸುದೀಪ್, ಡಾ.ರಾಜ್ ಕುಟುಂಬಸ್ಥರಾದ ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ಯುವ ರಾಜ್ಕುಮಾರ್, ವಿನಯ್ ರಾಜ್ಕುಮಾರ್, ಖ್ಯಾತ ನಟರಾದ ವಿಜಯ್ ರಾಘವೇಂದ್ರ, ಶ್ರೀಮುರುಳಿ, ಕ್ರೇಜಿ ಸ್ಟಾರ್ ರವಿಚಂದ್ರನ್, ಉಪೇಂದ್ರ, ಶರಣ್, ನಟರಾಕ್ಷಸ ಡಾಲಿ ಧನಂಜಯ್, ರಾಗಿಣಿ ದ್ವಿವೇದಿ, ಅಮೂಲ್ಯ, ಸಪ್ತಮಿ ಗೌಡ, ರಕ್ಷಿತಾ, ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ, ಭಾರತಿ ವಿಷ್ಣುವರ್ಧನ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಸಿನಿಮಾ ಕ್ಷೇತ್ರದ ಗಣ್ಯರು ತಮ್ಮ ಮತ ಚಲಾಯಿಸಿದ್ದಾರೆ.
ರವಿಚಂದ್ರನ್, ಉಪ್ಪಿ, ಡಾಲಿ, ರಕ್ಷಿತಾ ಸೇರಿ ಸೆಲೆಬ್ರಿಟಿಗಳಿಂದ ಮತದಾನ: ವಿಡಿಯೋ ನೋಡಿ - kannada Stars Voting