ಕೊನೆಗೂ ಬೋನಿಗೆ ಬಿದ್ದ ಚಿರತೆ: ಕುಮಟಾದ ಚಿತ್ರಗಿ ನಿವಾಸಿಗಳು ನಿರಾಳ - Leopard captured - LEOPARD CAPTURED
Published : Mar 23, 2024, 4:09 PM IST
ಕಾರವಾರ: ಕುಮಟಾದ ಚಿತ್ರಗಿ ಬಳಿ ಕಳೆದ ಕೆಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕುಮಟಾ ಪಟ್ಟಣದ ಚಿತ್ರಗಿಯ ಮಾದರಿ ಕನ್ನಡ ಶಾಲೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಅದರಂತೆ ಕಾರ್ಯಾಚರಣೆ ಕೈಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಎರಡು ದಿನಗಳ ಹಿಂದೆ ಬೋನ್ ಇಟ್ಟಿದ್ದರು. ಶನಿವಾರ ಬೆಳಗ್ಗೆ ಶಾಲೆಯ ಸಮೀಪದ ಗುಡ್ಡದಿಂದ ಇಳಿದು ಬಂದಿದ್ದ ಒಂದೂವರೆ ವರ್ಷದ ಗಂಡು ಚಿರತೆ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನ್ಗೆ ಬಿದ್ದಿದೆ. ಚಿರತೆ ಸೆರೆ ಬಳಿಕ ಚಿತ್ರಗಿ ನಿವಾಸಿಗಳು ನಿರಾಳರಾಗಿದ್ದಾರೆ.
ಚಾಮರಾಜನಗರದಲ್ಲಿ ಚಿರತೆ ಸೆರೆ: ಕೆಲವು ದಿನಗಳ ಹಿಂದೆ ಚಾಮರಾಜಗರದಲ್ಲಿ ತಿಂಗಳಿನಿಂದ ಜನರಿಗೆ ಉಪಟಳ ಕೊಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದರು. ವಾರಗಳಿಂದ ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದಲ್ಲಿ ಬೋನ್ ಇಟ್ಟು ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಬೋನ್ ಇಟ್ಟ ವಾರಗಳ ನಂತರ ಚಿರತೆ ಬೋನ್ ಒಳಗೆ ಸೆರೆಯಾಗಿತ್ತು. ನಾಲ್ಕು ಕುರಿಗಳನ್ನು ತಿಂದು ಆ ಭಾಗದ ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದೆ.
ಇದನ್ನೂ ಓದಿ: ಗೇಮ್ ಆಡುತ್ತಿದ್ದ ವೇಳೆ ಮನೆಗೆ ನುಗ್ಗಿದ ಚಿರತೆ; ಹೆದರದೇ ಕಾಡುಪ್ರಾಣಿಯನ್ನು ಕೂಡಿಹಾಕಿದ ಹುಡುಗ! ವಿಡಿಯೋ