ಉಡುಪಿ: ಮನೆ ಅಂಗಳಕ್ಕೆ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ - ಸಿಸಿಟಿವಿ ವಿಡಿಯೋ - LEOPARD ATTACK
Published : Dec 6, 2024, 7:57 PM IST
ಉಡುಪಿ: ಚಿರತೆಯೊಂದು ಮನೆ ಅಂಗಳಕ್ಕೆ ನುಗ್ಗಿ ಸಾಕು ನಾಯಿಯ ಮೇಲೆ ದಾಳಿ ನಡೆಸಿ ಹೊತ್ತೊಯ್ದ ಘಟನೆ ಉಡುಪಿ ಜಿಲ್ಲೆಯ ಎಲ್ಲೂರು ಮಾಣಿಯೂರಿನಲ್ಲಿ ನಡೆದಿದೆ.
ಗುರುವಾರ ರಾತ್ರಿ 9:30ರ ಸುಮಾರಿಗೆ ಮುರಳಿ ಶೆಟ್ಟಿ ಎಂಬವರ ಮನೆಯ ಆವರಣಕ್ಕೆ ಚಿರತೆ ಬಂದು, ನಾಯಿಯನ್ನು ಎಳೆದೊಯ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮನೆ ಮಂದಿ ಭಜನೆ ಮಾಡುವಾಗ ಚಿರತೆ ದಾಳಿ: ಮನೆಯಲ್ಲಿದ್ದ ಜನರು ಬಾಗಿಲು ಹಾಕಿ ಮನೆಯೊಳಗೆ ಭಜನೆಯಲ್ಲಿ ನಿರತರಾಗಿದ್ದರು. ಈ ವೇಳೆ ನಾಯಿ ಏಕಾಏಕಿ ಬೊಗಳಲು ಆರಂಭಿಸಿತ್ತು. ಕೆಲ ಹೊತ್ತಿನ ಬಳಿಕ ಬೊಗಳುತ್ತಿದ್ದ ನಾಯಿ ನಾಪತ್ತೆಯಾಗಿತ್ತು. ಇದನ್ನು ಗಮನಿಸಿದ ಅವರು, ಸಿಸಿಟಿವಿ ಪರಿಶೀಲಿಸಿದಾಗ ಚಿರತೆ ದಾಳಿ ಬೆಳಕಿಗೆ ಬಂದಿದೆ.
ಮನೆ ಅಂಗಳದಲ್ಲಿದ್ದ ನಾಯಿ ಮೇಲೆ ಏಕಾಏಕಿ ದಾಳಿ ಕೆಲವೇ ಮಾಡಿದ ಚಿರತೆ, ಕೆಲವೇ ಕ್ಷಣಗಳಲ್ಲಿ ಹೊತ್ತುಕೊಂಡು ಹೋಗಿರುವುದು ಸಿಸಿಟಿವಿಯಲ್ಲಿದೆ.
ಪದೇ ಪದೇ ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡು, ದಾಳಿ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ತಕ್ಷಣವೇ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಂಡು ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಆನೇಕಲ್: ಆಹಾರ ಅರಸಿ ನಾಡಿನತ್ತ ಕಾಡಾನೆಗಳ ಹಿಂಡು, ರೈತರ ಆತಂಕ