ಪ್ರತಿದಿನ ಬೆಳಗ್ಗೆ ಜಿಮ್ಗೆ ನುಗ್ಗುವ ಮುಸಿಯಾ - ಯುವಕರಿಗೆ ಆತಂಕ: ದೃಶ್ಯ ಸಿಸಿಟಿವಿಯಲ್ಲಿ ಸೆರೆ - LANGUR IN GYM
Published : Dec 22, 2024, 7:17 PM IST
ಧಾರವಾಡ: ಪ್ರತಿದಿನ ಬೆಳ್ಳಂಬೆಳಗ್ಗೆ ಜಿಮ್ಗೆ ಬಂದು ವರ್ಕೌಟ್ ಮಾಡುವ ಯುವಕರಿಗೆ ಮುಸಿಯಾವೊಂದು ಉಪಟಳ ನೀಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಧಾರವಾಡದ ಸೈದಾಪುರದ ಕಿಂಗ್‌ಡಂ ಜಿಮ್ನಲ್ಲಿ ಮುಸಿಯಾ ಕಾಟಕ್ಕೆ ಯುವಕರು ಹೈರಾಣಾಗಿದ್ದಾರೆ.
ಪ್ರತಿನಿತ್ಯ ಬೆಳಗ್ಗೆ ಬರುವ ಜಿಮ್ ಒಳಗೆ ಬರುವ ಮುಸಿಯಾ ತನ್ನ ಚೇಷ್ಟೆಯಿಂದ ವರ್ಕೌಟ್ ಮಾಡುವವರಿಗೆ ತೊಂದರೆ ಕೊಡುತ್ತಿದೆ. ಸಿಸಿಟಿವಿ ವಿಡಿಯೋದಲ್ಲಿ, ಮುಸಿಯಾ ಜಿಮ್ನ ಬಾಗಿಲನ್ನು ಸರಿಸಿ ಒಳ ಬಂದು, ಜಿಮ್ನ ಸಲಕರಣೆಗಳ ಮೇಲೆ ತನ್ನ ಚೇಷ್ಟೆಗಳನ್ನು ತೋರಿಸುತ್ತದೆ. ಮುಸಿಯಾನನ್ನು ನೋಡಿದ ಕೂಡಲೇ ಯುವಕರು ಹೆದರಿ ಹೊರಗೆ ಓಡುತ್ತಾರೆ. ತನ್ನನ್ನು ಮುಟ್ಟಲು ಹಾಗೂ ಓಡಿಸಲು ಬರುವವರ ಮೇಲೆ ಮುಸಿಯಾ ಎರಗುತ್ತಿದೆ. ಯುವಕರು ಜಿಮ್ ಮಾಡುವಾಗ ಏಕಾಏಕಿ ಒಳಗಡೆ ಬಂದು ಜಿಮ್ನ ಎಲ್ಲ ಕಡೆ ತಿರುಗಾಡುತ್ತಿದೆ.
ತನ್ನನ್ನು ಅಟ್ಟಾಡಿಸಿಕೊಂಡು ಬರುವ ಜಿಮ್ ಯುವಕರನ್ನು ಸಹ ಮುಸಿಯಾ ಅಟ್ಟಾಡಿಸಿಕೊಂಡು ಹೋಗುತ್ತದೆ. ಪ್ರತಿದಿನ ಮುಸಿಯಾನನ್ನು ಓಡಿಸಿ, ಯುವಕರು ವರ್ಕೌಟ್ ಮಾಡಬೇಕಾಗಿದೆ. ಇದರಿಂದ ಜಿಮ್ ಮಾಲೀಕರು ಹಾಗೂ ತರಬೇತಿ ಪಡೆಯುವ ಯುವಕರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಹಾವೇರಿ ಆಂಜನೇಯ ದೇವಸ್ಥಾನದ ಗರ್ಭಗುಡಿಯೊಳಗೆ ಮುಸಿಯಾ ಬಳಗ: ವಿಡಿಯೋ ವೈರಲ್