ಕರ್ನಾಟಕ

karnataka

ETV Bharat / videos

ಬಜೆಟ್ ಅಧಿವೇಶನ: ವಿಧಾನಪರಿಷತ್ ಕಲಾಪದ ನೇರ ಪ್ರಸಾರ - ಬಜೆಟ್ ಅಧಿವೇಶನ

By ETV Bharat Karnataka Team

Published : Feb 15, 2024, 10:51 AM IST

Updated : Feb 15, 2024, 6:11 PM IST

ಬೆಂಗಳೂರು: ಫೆ.23ರವರೆಗೆ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಪರಿಷತ್​ ಕಲಾಪ ನಡೆಯುತ್ತಿದೆ. ವಿಧಾನಪರಿಷತ್​ ಕಲಾಪದ ನೇರಪ್ರಸಾರ ಇಲ್ಲಿದೆ. ಬುಧವಾದರ ಕಲಾಪದ ವೇಳೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ನಿಲುವಳಿ ಸೂಚನೆ ಮಂಡಿಸಿತ್ತು, ನಿಯಮ‌ 59 ರ ಅಡಿ ಚರ್ಚೆಗೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ನಿಯಮ 72 ರ ಅಡಿ ಚರ್ಚೆಗೆ ಅವಕಾಶ ನೀಡಿ ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು.

ಮಂಗಳವಾರದ ಪರಿಷತ್​​ ಕಲಾಪದ ವೇಳೆ ಮಾತನಾಡಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಡ್ತಿ ಪಡೆದು ಉಪನ್ಯಾಸಕರಾಗಿರುವ ಹಿರಿಯ ಮತ್ತು ಕಿರಿಯ ಸರ್ಕಾರಿ ನೌಕರರ ವೇತನದಲ್ಲಿನ ತಾರತಮ್ಯ ನಿವಾರಿಸಲು ಪ್ರಸ್ತುತ ಚಾಲ್ತಿಯಲ್ಲಿರುವ ವೇತನ ಹೆಚ್ಚಳ ನಿಯಮಗಳು/ಆದೇಶಗಳಿಗೆ ಆದಷ್ಟು ಬೇಗ ತಿದ್ದುಪಡಿ ತರಲಾಗುತ್ತದೆ ಎಂದು ತಿಳಿಸಿದ್ದರು. ನಿಯಮ 330ರ ಅಡಿ ಸದಸ್ಯರಾದ ಮರಿತಿಬ್ಬೇಗೌಡ, ಬೋಜೇಗೌಡ ಹಾಗೂ ಎಸ್.ವಿ.ಸಂಕನೂರ್ ಅವರು ಪ್ರಸ್ತಾಪಿಸಿದ ಚರ್ಚೆಗೆ ಸಚಿವರು ಉತ್ತರಿಸಿದ್ದರು.

Last Updated : Feb 15, 2024, 6:11 PM IST

ABOUT THE AUTHOR

...view details