ಕರ್ನಾಟಕ ವಿಧಾನಸಭೆ ಅಧಿವೇಶನ - ನೇರ ಪ್ರಸಾರ - ಸಿಎಂ ಸಿದ್ದರಾಮಯ್ಯ
Published : Feb 19, 2024, 10:39 AM IST
|Updated : Feb 19, 2024, 7:29 PM IST
ಬೆಂಗಳೂರು: ರಾಜ್ಯ ವಿಧಾನಮಂಡಲದ ಅಧಿವೇಶನವು ಫೆಬ್ರವರಿ 12 ರಿಂದ ಆರಂಭವಾಗಿದ್ದು, ಫೆ.23ರವರೆಗೆ ನಡೆಯಲಿದೆ. ಫೆಬ್ರವರಿ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ 2024-25ನೇ ಸಾಲಿನ ಆಯವ್ಯಯ ಮಂಡಿಸಿದ್ದಾರೆ. ಇಂದು ಆರನೇ ದಿನದ ಕಲಾಪ ನಡೆಯುತ್ತಿದೆ. ಸಿಎಂ ಮಂಡಿಸಿದ ಬಜೆಟ್ ಮೇಲಿನ ಚರ್ಚೆ ಕೂಡಾ ಇಂದಿನಿಂದ ಆರಂಭವಾಗಲಿದೆ.
ಸಿಎಂ ಸಿದ್ದರಾಮಯ್ಯ ಅವರು 3,71,383 ಕೋಟಿ ರೂ ಗಾತ್ರದ ಆದಾಯ ಕೊರತೆಯ ಬಜೆಟ್ ಮಂಡಿಸಿದ್ದಾರೆ. ಶಿಕ್ಷಣ ಇಲಾಖೆಗೆ 44422 ಕೋಟಿ ರೂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 4406 ಕೋಟಿ ರೂ, ಇಂಧನ ಇಲಾಖೆಗೆ 23159 ಕೋಟಿ, ನಗರಾಭಿವೃದ್ಧಿ ಇಲಾಖೆಗೆ 18155, ಗೃಹ ಇಲಾಖೆಗೆ 19777, ನೀರಾವರಿ ಇಲಾಖೆಗೆ 19179 ಕೋಟಿ, ಸಮಾಜಕಲ್ಯಾಣ ಇಲಾಖೆಗೆ 13334 ಕೋಟಿ ರೂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 15145 ಕೋಟಿ ರೂ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 6688 ಕೋಟಿ ರೂ, ಲೋಕೋಪಯೋಗಿ ಇಲಾಖೆಗೆ 10424 ಕೋಟಿ ರೂ ಅನುದಾನ ಬಜೆಟ್ನಲ್ಲಿ ಮೀಸಲಿಡಲಾಗಿದೆ. ಇನ್ನು ಪಂಚ ಗ್ಯಾರಂಟಿ ಯೋಜನೆಗಳಿಗೆ ಪ್ರಸಕ್ತ ಸಾಲಿನಲ್ಲಿ 52,009 ಕೋಟಿ ರೂ. ಅನುದಾನ ನೀಡಲಾಗಿದೆ.