ಕನಕದಾಸರ ಕರ್ಮಭೂಮಿ ಕಾಗಿನೆಲೆಯಲ್ಲಿ ಕನಕದಾಸ ಜಯಂತಿ ಆಚರಣೆ
Published : 4 hours ago
ಹಾವೇರಿ: ಕನಕದಾಸರ ಕರ್ಮಭೂಮಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ರುದ್ರಾಭಿಷೇಕ, ಮಹಾ ರುದ್ರಾಭಿಷೇಕದ ಪೂಜೆ ಮಾಡುವ ಮೂಲಕ ಕನಕದಾಸರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಳೆದೆರಡು ದಿನಗಳಿಂದ ಕಾಗಿನೆಲೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಕನಕ ಗುರುಪೀಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾ ನಂದಪುರಿ ಸ್ವಾಮೀಜಿ ಕನಕದಾಸರ ಆದರ್ಶಗಳು, ತತ್ವ ಸಿದ್ಧಾಂತಗಳನ್ನು ಜನತೆಗೆ ತಿಳಿಸಿದರು. "ಪ್ರತಿ ವರ್ಷ ಕಾಗಿನೆಲೆಯಲ್ಲಿ ಕನಕದಾಸರ ಜಯಂತಿ ಆಚರಿಸಲಾಗುತ್ತಿದೆ. ಸರಕಾರ ಕೂಡ ಕನಕದಾಸರ ಜಯಂತಿ ದಿನದಂದು ಸರ್ಕಾರಿ ರಜೆ ಘೋಷಿಸಿ, ಕನಕ ದಾಸರ ಹಬ್ಬ ಆಚರಿಸಲು ಅನುಕೂಲ ಮಾಡಿಕೊಟ್ಟಿತ್ತು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕನಕದಾಸರ ಭಾವಚಿತ್ರ ಹಾಕಿ ಜಯಂತಿ ಆಚರಣೆ ಮಾಡುತ್ತಿರುವುದು ಖುಷಿಯ ವಿಚಾರ" ಎಂದು ಹೇಳಿದರು.
ಇದನ್ನೂ ಓದಿ: ಸಂವಿಧಾನ ವಿರೋಧಿಗಳು ಮನುಷ್ಯ ವಿರೋಧಿಗಳು: ಸಿಎಂ ಸಿದ್ದರಾಮಯ್ಯ
ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಕುರುಬ ಸಮಾಜದ ಬಾಂಧವರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಇಂದು ದಾಸಶ್ರೇಷ್ಠ ಕನಕದಾಸ ಜಯಂತಿ: ಹರಿದಾಸನ ಇತಿಹಾಸ, ಕೃತಿಗಳ ಮಾಹಿತಿ ತಿಳಿಯಿರಿ