ಕರ್ನಾಟಕ

karnataka

ETV Bharat / videos

ಶಾರ್ಟ್ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ: 5 ಲಕ್ಷ ನಗದು ಸೇರಿ ಲಕ್ಷಾಂತರ ಮೌಲ್ಯದ ವಸ್ತು ಬೆಂಕಿಗಾಹುತಿ - Fire Accident

By ETV Bharat Karnataka Team

Published : Jan 20, 2024, 1:14 PM IST

ಶಿವಮೊಗ್ಗ: ಶಾರ್ಟ್ ಸರ್ಕ್ಯೂಟ್​ನಿಂದ‌ ಮನೆಗೆ ಬೆಂಕಿ ಬಿದ್ದು, 5 ಲಕ್ಷ ರೂ. ನಗದು ಹಾಗೂ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಭದ್ರಾವತಿ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಭದ್ರಾವತಿ ಪಟ್ಟಣದ ಹಳದಮ್ಮ ಬೀದಿಯ ವಾಸು ಎಂಬವರ ಮನೆಯಲ್ಲಿ ನಿನ್ನೆ ರಾತ್ರಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಇದರಿಂದ ಮನೆಗೆ ಏಕಾಏಕಿ ಬೆಂಕಿ ಬಿದ್ದಿದೆ.

ಬೆಂಕಿ ಬಿದ್ದ ವೇಳೆ‌ ಮನೆಯಲ್ಲಿ ಯಾರು‌ ಇರಲಿಲ್ಲ. ವಾಸು ಅವರಿಗೆ ಅಕ್ಕ ಪಕ್ಕದ ಮನೆಯವರು ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಆಗ ವಾಸು ಅವರು ಮನೆ ಬಳಿ ಬಂದಿದ್ದಾರೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. 

5 ಲಕ್ಷ ನಗದು, ಬಂಗಾರ, ಪೀಠೋಪಕರಣಗಳು ಭಸ್ಮ: ಮನೆ ಮಾಲೀಕ ವಾಸು ಅವರು ಮಾತನಾಡಿ, "ಇತ್ತಿಚೇಗೆ ಜಮೀನು ಮಾರಾಟ ಮಾಡಿದ್ದರಿಂದ ಬಂದ 5 ಲಕ್ಷ ರೂ‌. ಹಣವನ್ನು ಮನೆಯಲ್ಲಿ ಇಟ್ಟಿದ್ದೆವು. ಅಲ್ಲದೆ ಬಂಗಾರದ ಒಡವೆಯನ್ನು ಸಹ ಮನೆಯಲ್ಲಿಟ್ಟಿದ್ದೆವು. ಬೆಂಕಿಗೆ ಹಣ, ಒಡವೆ ಸುಟ್ಟು ಭಸ್ಮವಾಗಿದೆ. ಜೊತೆಗೆ ಮನೆಯಲ್ಲಿನ ಪೀಠೋಪಕರಣಗಳು ಸಹ ಸುಟ್ಟು ಹೋಗಿವೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ಪ್ರತ್ಯೇಕ ಬೆಂಕಿ ಅವಘಡ, ಮಕ್ಕಳು ಸೇರಿ ನಾಲ್ವರು ಸಾವು

ABOUT THE AUTHOR

...view details