ತುಮಕೂರು: ಅದ್ಧೂರಿ ದಸರಾಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ - Tumakuru Dasara Program - TUMAKURU DASARA PROGRAM
Published : Oct 3, 2024, 7:47 PM IST
ತುಮಕೂರು: ತುಮಕೂರು ನಗರದ ಜೂನಿಯರ್ ಕಾಲೇಜಿನ ಆವರಣದಲ್ಲಿ ಇಂದು ಅದ್ಧೂರಿ ದಸರಾ ಆಚರಣೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು. ಸಿದ್ದಗಂಗಾ ಮಠದ ಶ್ರಿ ಸಿದ್ದಲಿಂಗ ಸ್ವಾಮೀಜಿ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಕಾಲೇಜಿನಲ್ಲಿ ನಿರ್ಮಿಸಿರುವ ಭವ್ಯ ಮಂಟಪದಲ್ಲಿ ನಾಡದೇವತೆ ಚಾಮುಂಡಿ ತಾಯಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಚಿವ ಪರಮೇಶ್ವರ್ ಅವರ ಪತ್ನಿ ಕನ್ನಿಕಾ ಭಾಗಿಯಾಗಿದ್ದರು. ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ಮೈಸೂರು ಅರಮನೆ ಹಾಗೂ ಚಾಮುಂಡಿ ದೇವಾಲಯದ ಮಾದರಿಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಮಂಟಪ ನಿರ್ಮಿಸಲಾಗಿದೆ.
ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಜ್ಯೋತಿ ಗಣೇಶ್, ಕೆ.ಷಡಕ್ಷರಿ ಸೇರಿ ಹಲವರು ಭಾಗವಹಿಸಿದ್ದರು.
ಇಂದಿನಿಂದ 9 ದಿನಗಳ ಕಾಲ ದಸರಾ ಕಾರ್ಯಕ್ರಮಗಳು ನಡೆಯಲಿವೆ.
ಇನ್ನು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಬೆಳಗ್ಗೆ ನಾಡೋಜ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ಚಾಲನೆ ನೀಡಿದ್ದಾರೆ
ಇದನ್ನೂ ನೋಡಿ: 'ಯುದ್ಧಗಳು ನಿಲ್ಲಲಿ, ಸರ್ಕಾರ ಉರುಳಿಸುವ ದುರಾಲೋಚನೆ ಬಾರದಿರಲಿ': ಹಂಪ ನಾಗರಾಜಯ್ಯ ಪ್ರಾರ್ಥನೆ - Hampa Nagarajaiah Inagurates Dasara