ಚಲನಚಿತ್ರ ಗೀತೆ ಹಾಡಿ ರಂಜಿಸಿದ ಗೃಹ ಸಚಿವ ಜಿ ಪರಮೇಶ್ವರ್; ತಮಟೆ ಸದ್ದಿಗೆ ಭರ್ಜರಿ ಟಪಾಂಗುಚಿ - ವಿಡಿಯೋ - DR G PARAMESHWAR
Published : Oct 13, 2024, 6:53 PM IST
ತುಮಕೂರು : ತುಮಕೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಚಲನಚಿತ್ರದ ಹಾಡನ್ನು ಹಾಡಿ ಜನರನ್ನು ರಂಜಿಸಿದರು. ಕನ್ನಡ ಚಲನಚಿತ್ರ ಗಾಯನವಾದ 'ಕಾಣದಂತೆ ಮಾಯವಾದನು ನಮ್ಮ ಶಿವ' ಎಂಬ ಹಾಡನ್ನು ಹಾಡಿದರು.
ತುಮಕೂರಿನ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡು ಹಾಡಿದ ವೇಳೆ ಗಾಯಕ ವಿಜಯಪ್ರಕಾಶ್ ಹಾಡಿದ ಹಾಡಿಗೆ ಧ್ವನಿಗೂಡಿಸಿದರು. ಮೊದಲ ಬಾರಿ ಜಿಲ್ಲಾಡಳಿತದಿಂದ ತುಮಕೂರು ದಸರಾ ಆಯೋಜನೆ ಮಾಡಲಾಗಿದ್ದು, ಅಭಿಮಾನಿಗಳ ಒತ್ತಾಯಕ್ಕೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹಾಡು ಹಾಡಿದರು.
ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಪರಮೇಶ್ವರ್ : ತುಮಕೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿಯೂ ಹೆಜ್ಜೆ ಹಾಕಿದ ಸಚಿವ ಪರಮೇಶ್ವರ್, ದಂಪತಿ ಸಮೇತ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ದಸರಾ ಮೆರವಣಿಗೆಗೆ ಚಾಲನೆ ನೀಡಿದ್ದರು. ಜಂಬೂಸವಾರಿ ದಸರಾ ಮೆರವಣಿಗೆಯಲ್ಲಿ ತಮಟೆ ಸದ್ದಿಗೆ ತಾಯಿ ಚಾಮುಂಡೇಶ್ವರಿ ಅಂಬಾರಿ ಮುಂದೆ ಭರ್ಜರಿ ಹೆಜ್ಜೆ ಹಾಕಿದರು.
ಇದನ್ನೂ ಓದಿ : ಸಚಿವ ಮಹದೇವಪ್ಪ ಮನೆ ಡಿನ್ನರ್ ಮೀಟಿಂಗ್ಗೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ: ಡಾ. ಜಿ.ಪರಮೇಶ್ವರ್