ಕರ್ನಾಟಕ

karnataka

ಟೋಲ್ ಸಿಬ್ಬಂದಿಗೆ ಡಿಕ್ಕಿ ಹೊಡೆದು ಪರಾರಿಯಾದ ಕಾರು: ಭಯಾನಕ ದೃಶ್ಯ - Car Crushed Toll Worker

By ETV Bharat Karnataka Team

Published : Jun 7, 2024, 4:21 PM IST

ಟೋಲ್ ಸಿಬ್ಬಂದಿಗೆ ಡಿಕ್ಕಿ ಹೊಡೆದ ಕಾರು (ETV Bharat)

ಹಾಪುರ(ಉತ್ತರ ಪ್ರದೇಶ): ವೇಗವಾಗಿ ಬಂದ ಕಾರು ಟೋಲ್ ಸಿಬ್ಬಂದಿಗೆ ಬಲವಾಗಿ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾದ ಘಟನೆ ಹಾಪುರ ಜಿಲ್ಲೆಯ ಪಿಲ್ಖುವಾ ಕೊಟ್ವಾಲಿ ಪ್ರದೇಶದ ಚಿಜರಾಸಿ ಟೋಲ್ ಪ್ಲಾಜಾದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಗಂಭೀರವಾಗಿ ಗಾಯಗೊಂಡ ಟೋಲ್​ ನೌಕರ ಹೇಮರಾಜ್ ಸಿಂಗ್‌ ಎಂಬಾತನನ್ನು ಇತರೆ ಟೋಲ್ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಟೋಲ್ ಪ್ಲಾಜಾದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೇಮರಾಜ್ ಸಿಂಗ್‌ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಗಾಜಿಯಾಬಾದ್​ನಿಂದ ಬರುತ್ತಿದ್ದ ಬಿಳಿ ಬಣ್ಣದ ಕಾರು ಚಾಲಕ, ಟೋಲ್ ದುಡ್ಡು ಉಳಿಸಲು ವೇಗ ಹೆಚ್ಚಿಸಿದ್ದಾನೆ. ಹೇಮರಾಜ್ ಕಾರು ನಿಲ್ಲಿಸಲು ಮುಂದಾದಾಗ, ಚಾಲಕ ಕಾರನ್ನು ಟೋಲ್​ ನೌಕರನ ಮೇಲೆಯೇ ಹರಿಸಿದ್ದಾನೆ ಎಂದು ಟೋಲ್ ಪ್ಲಾಜಾ ಮ್ಯಾನೇಜರ್ ಅಜಿತ್ ಚೌಧರಿ ತಿಳಿಸಿದ್ದಾರೆ.

ಪಿಲ್ಖುವಾ ಪೊಲೀಸ್ ಠಾಣೆಯ ಉಸ್ತುವಾರಿ ಅಖಿಲೇಶ್ ತ್ರಿಪಾಠಿ ಮಾತನಾಡಿ, "ಚಿಜರಾಸಿ ಟೋಲ್ ಪ್ಲಾಜಾದಲ್ಲಿ ತಡರಾತ್ರಿ ಕಾರು ಟೋಲ್ ಕಾರ್ಮಿಕನಿಗೆ ಡಿಕ್ಕಿ ಹೊಡೆದಿದೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಈ ಬಗ್ಗೆ ಯಾವುದೇ ದೂರು ನೀಡಿಲ್ಲ. ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದರು.

ಇದನ್ನೂ ಓದಿ: ಬಂಡೀಪುರದಲ್ಲಿ ಪ್ರವಾಸಿಗರೆದುರೇ ಮರಿಗೆ ಜನ್ಮ ನೀಡಿದ ಕಾಡಾನೆ - ವಿಡಿಯೋ - Elephant Baby

ABOUT THE AUTHOR

...view details