ಮಳೆ ನಿಂತರೂ ನಿಲ್ಲದ ನೆರೆ: ಅಘನಾಶಿನಿ ನದಿ ಹರಿವು, ಪ್ರವಾಹ ಪ್ರದೇಶದ ಡ್ರೋನ್ ದೃಶ್ಯ - Uttara Kannada Flood - UTTARA KANNADA FLOOD
Published : Jul 17, 2024, 10:28 AM IST
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಕೊಂಚ ಕಡಿಮೆಯಾದರೂ ನೆರೆ ಹಾಗೂ ಗುಡ್ಡಕುಸಿತ ಮುಂದುವರಿದಿದೆ.
ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರದಲ್ಲಿ ಮಳೆಯಿಂದಾಗಿ ಅತೀ ಹೆಚ್ಚು ಹಾನಿಯಾಗಿದೆ. ಅಂಕೋಲಾದಲ್ಲಿ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದೆ. ಕುಮಟಾದಲ್ಲಿ ಅಘನಾಶಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಅಂಕೋಲಾ-ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತದಿಂದ ನಾಲ್ಕು ಜನರ ಮೃತದೇಹ ಪತ್ತೆಯಾಗಿದೆ. ಇನ್ನೂ 6 ಮಂದಿ ಮಣ್ಣಿನಡಿ ಇಲ್ಲವೇ ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾದವರಿಗೆ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಮುಂದುವರಿಸಿವೆ.
ಕುಮಟಾದಲ್ಲಿ ಅಘನಾಶಿನಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿದೆ. ನದಿಯ ಉದ್ದಗಲಕ್ಕೂ ಕೃಷಿ ಜಮೀನುಗಳು ಜಲಾವೃತವಾಗಿವೆ. ಈ ಕುರಿತು ಛಾಯಾಚಿತ್ರಗ್ರಾಹಕ ಗೋಪಿ ಜಾಲಿ ಎಂಬವರು ತಮ್ಮ ಡ್ರೋಣ್ ಕ್ಯಾಮೆರಾ ಮೂಲಕ ಅಘನಾಶಿನಿ ನದಿ ಹರಿವು ಹಾಗೂ ಪ್ರವಾಹ ಪ್ರದೇಶದ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ನದಿ ಭರ್ತಿ: ಉಕ್ಕಡಗಾತ್ರಿ ಸ್ನಾನಘಟ್ಟ, ಸೇತುವೆಗಳು ಜಲಾವೃತ - Davanagere Rains