ಅಸ್ಸಾಂನ ಗೋದಾಮಿನಲ್ಲಿ ಅಗ್ನಿ ಅವಘಡ: ತಪ್ಪಿದ ಪ್ರಾಣಾಪಾಯ! - ಅಸ್ಸಾಂ ಗೋದಾಮಿನಲ್ಲಿ ಬೆಂಕಿ
Published : Feb 15, 2024, 10:16 AM IST
ಮೊರಿಗಾಂವ್ (ಅಸ್ಸಾಂ): ಅಸ್ಸಾಂ ರಾಜ್ಯದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಮೋರಿಗಾಂವ್ ಜಿಲ್ಲೆಯಲ್ಲಿರುವ ಜೂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ಗೋದಾಮಿನಲ್ಲಿ ಬುಧವಾರ ರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ದುರಂತದಲ್ಲಿ, ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಬೆನ್ನಲ್ಲೇ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದರು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಅಗ್ನಿ ಅವಘಡ ಸಂಭವಿಸಿದ ಸ್ಥಳ ತಲುಪಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಅಗ್ನಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಇತ್ತೀಚಿನ ಪ್ರಕರಣ - ಸಹೋದರಿಯರು ಅಗ್ನಿಗಾಹುತಿ: ಜಮ್ಮು - ಕಾಶ್ಮೀರ ರಾಜ್ಯದ ರಾಂಬನ್ ಜಿಲ್ಲೆಯಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿತ್ತು. ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ, ಸಹೋದರಿಯರು ಹೊರಗಡೆ ಬರಲು ಸಾಧ್ಯವಾಗದೇ ಮೂವರೂ ಸಜೀವ ದಹನಗೊಂಡ ಘಟನೆ ಉಖ್ರಾಲ್ ತಾಲೂಕಿನ ಧನ್ಮಸ್ತಾ - ತಾಜ್ನಿಹಾಲ್ ಗ್ರಾಮದಲ್ಲಿ ನಡೆದಿತ್ತು. ಬಿಸ್ಮಾ (18), ಸೈಕಾ (14), ಸಾನಿಯಾ (11) ಘಟನೆಯಲ್ಲಿ ಮೃತಪಟ್ಟಿದ್ದರು.
ಇದನ್ನೂ ಓದಿ: ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ: ಮಹಡಿಯಲ್ಲಿ ಮಲಗಿದ್ದ ಮೂವರು ಸಹೋದರಿಯರು ಬೆಂಕಿಗಾಹುತಿ