ಮಥುರಾದ ಬಂಕೆ ಬಿಹಾರಿ ದೇವಸ್ಥಾನಕ್ಕೆ ನಟ ಅಶುತೋಷ್ ರಾಣಾ ಭೇಟಿ - ಧಾರ್ಮಿಕ ನಗರಿ
Published : Feb 3, 2024, 9:46 AM IST
ಲಖನೌ(ಉತ್ತರ ಪ್ರದೇಶ): ಖ್ಯಾತ ಬಾಲಿವುಡ್ ಚಲನಚಿತ್ರ ನಟ ಅಶುತೋಷ್ ರಾಣಾ ಅವರು ಶುಕ್ರವಾರ ತಮ್ಮ ಸ್ನೇಹಿತರ ಜೊತೆಗೆ ಪ್ರಸಿದ್ಧ ಧಾರ್ಮಿಕ ನಗರಿ ಮಥುರಾದ ವೃಂದಾವನಕ್ಕೆ ಭೇಟಿ ನೀಡಿದ್ದರು. ಬಂಕೆ ಬಿಹಾರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ಕೆಲವು ಹೊತ್ತು ಗರ್ಭಗುಡಿಯಲ್ಲಿ ಕುಳಿತು ಪ್ರಾರ್ಥನೆ ಕೂಡ ಸಲ್ಲಿಸಿದರು. ಕೆಲ ಘಳಿಗೆ ವೇದ ಮಂತ್ರಗಳ ಪಠಣದ ಜೊತೆಗೆ ಧ್ಯಾನ ಕೂಡ ನಡೆಸಿದರು. ಬಳಿಕ ದೇವಸ್ಥಾನದಿಂದ ಹೊರಗೆ ಬರುತ್ತಿದ್ದಂತೆ ತಮ್ಮ ನೆಚ್ಚಿನ ನಟನನ್ನು ಕಂಡ ಅಭಿಮಾನಿಗಳು, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಸೆಲ್ಫಿ ಪಡೆಯಲು ಪೈಪೋಟಿಗೆ ಇಳಿದ ಅಭಿಮಾನಿಗಳ ವರ್ತನೆ ಕಂಡ ಭದ್ರತಾ ಸಿಬ್ಬಂದಿ ಅವರನ್ನು ತಡೆಯುವ ಹರಸಾಹಸ ಮಾಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮನು ಎಲ್ಲ ಕಡೆಯೂ ನೆಲೆಸಿದ್ದಾನೆ. ಇಡೀ ವಿಶ್ವಕ್ಕೆ ನಾಯಕ. ಅವನನ್ನು ನೋಡಿ ತುಂಬಾ ಸಂತೋಷವಾಯಿತು. ಠಾಕೂರ್ ಜೀ ಅವರ ಕೃಪೆಯಿಂದ ಎಲ್ಲರೂ ಉತ್ತಮ ಜೀವನ ನಡೆಸುವಂತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು. ಇದಕ್ಕೂ ಮುನ್ನ ದೇವಸ್ಥಾನದ ಆಡಳಿತ ಮಂಡಳಿಯುವ ಅವರಿಗೆ ಪ್ರಸಾದ, ವಂಶಿ, ಪಟುಕಾ ನೀಡಿ ಗೌರವಿಸಿದರು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ; ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಿದ ಹಿಂದೂ ಅರ್ಚಕರ ಕುಟುಂಬ..