10 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ಪೃಥ್ವಿಗೆ ಆತ್ಮೀಯ ಬೀಳ್ಕೊಡುಗೆ
Published : Nov 9, 2024, 11:42 AM IST
ಚಿಕ್ಕಮಗಳೂರು: 10 ವರ್ಷ 07 ತಿಂಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಶ್ವಾನ 'ಪೃಥ್ವಿ' ತನ್ನ ಸೇವೆಯಿಂದ ನಿವೃತ್ತಿ ಹೊಂದಿದೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಪೃಥ್ವಿಗೆ ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕ ವಿಕ್ರಂ ಅಮಟೆ ನಿವೃತ್ತಿ ಸನ್ಮಾನವನ್ನು ನೆರವೇರಿಸಿದರು.
02 ಜನವರಿ 2014ರಂದು ಜನಿಸಿದ್ದ ಪೃಥ್ವಿ, 04 ಮಾರ್ಚ್ 2014ರಲ್ಲಿ ಪೊಲೀಸ್ ಇಲಾಖೆಯ ಶ್ವಾನದಳದಲ್ಲಿ "ಸ್ಫೋಟಕ ಪತ್ತೆ" ತಂಡದಲ್ಲಿ ಸೇರ್ಪಡೆಯಾಗಿತ್ತು. ಅಂದಿನಿಂದ ಇಂದಿನವರೆಗೂ ರಾಜ್ಯದ ವಿವಿಧ ಬಂದೋಬಸ್ತ್ಗಳಲ್ಲಿ ಭಾಗವಹಿಸಿ ಕರ್ತವ್ಯ ನಿರ್ವಹಿಸಿದೆ. ವಿ.ಐ.ಪಿ. ಮತ್ತು ವಿ.ವಿ.ಐ.ಪಿ. ಭದ್ರತೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದೆ ಎಸ್ಪಿ ಮಾಹಿತಿ ನೀಡಿದರು.
ಜಿಲ್ಲೆಯು ನಕ್ಸಲ್ ಪೀಡಿತ ಪ್ರದೇಶಗಳಲ್ಲೂ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದೆ. ಅಷ್ಟೇ ಅಲ್ಲದೇ ಪೊಲೀಸ್ ಡ್ಯೂಟಿ ಮೀಟ್‌ನಲ್ಲಿ ಕಂಚಿನ ಪದಕ, ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಕ್ಯಾಂಪ್‌ಗಳಲ್ಲಿ ಹಾಗೂ ವಿವಿಧ ಡಾಗ್ ಷೋಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದು ಜಿಲ್ಲೆಗೆ ಕೀರ್ತಿಯನ್ನು ತಂದುಕೊಟ್ಟಿದೆ. ಸುದೀರ್ಘ ಸೇವೆ ನೀಡಿದ ಶ್ವಾನ ನಿವೃತ್ತಿ ಹೊಂದಿದ್ದು ಅದನ್ನು ಆತ್ಮೀಯವಾಗಿ ಬೀಳ್ಕೊಡಲಾಗಿದೆ.
ಇದನ್ನೂ ಓದಿ: ಉಗ್ರರ ಗುಂಡಿಗೆ ಬಲಿಯಾದ ಶ್ವಾನ, ಫ್ಯಾಂಟಮ್ ತ್ಯಾಗಕ್ಕೆ ಕಣ್ಣೀರಿನ ವಿದಾಯ ಹೇಳಿದ ಸೇನೆ