ಕರ್ನಾಟಕ

karnataka

ETV Bharat / videos

ಡಾ ಬಿ ಆರ್ ಅಂಬೇಡ್ಕರ್ 133ನೇ ಜಯಂತ್ಯುತ್ಸವ: ಸಚಿವ ಭಗವಂತ, ಈಶ್ವರ್​ ಖಂಡ್ರೆ ಡ್ಯಾನ್ಸ್​ಗೆ ಜನ ಫಿದಾ​ - Dr BR Ambedkar birth anniversary - DR BR AMBEDKAR BIRTH ANNIVERSARY

By ETV Bharat Karnataka Team

Published : Apr 14, 2024, 6:03 PM IST

ಬೀದರ್: ಡಾ ಬಿ. ಆರ್​​. ಅಂಬೇಡ್ಕರ್​ ಅವರ ಜಯಂತಿ ಪ್ರಯಕ್ತ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಸಖತ್​ ಸ್ಟೆಪ್ ಹಾಕುವ ಮೂಲಕ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಅವರು ಗಮನ ಸೆಳೆದರು.

ಡಾ ಬಿ ಆರ್ ಅಂಬೇಡ್ಕರ್ 133ನೇ ಜಯಂತ್ಯುತ್ಸವವನ್ನು ಜಿಲ್ಲಾಡಳಿತದಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಆಚರಿಸಲಾಯಿತು. ಈ ವೇಳೆ ಜಿಲ್ಲಾಡಳಿತದ ಪರ ಜಿಲ್ಲಾಧಿಕಾರಿ ಗೋವಿಂದ ರಡ್ಡಿ ಅವರು ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಲೋಕಸಭೆ ಚುನಾವಣೆ ಭರಾಟೆಯಲ್ಲಿ ರಾಜಕೀಯ ಭೇದ ಮರೆತ ಕಾಂಗ್ರೆಸ್​, ಬಿಜೆಪಿ ಮುಖಂಡರು ಅಂಬೇಡ್ಕರ್ ಜಯಂತಿ ಮೆರವಣಿಗೆಯಲ್ಲಿ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಎಲ್ಲರ ಮನ ಸೆಳೆದರು. ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಅವರು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.  

ಈ ಸಂದರ್ಭದಲ್ಲಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಡಾ ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮ ದೇಶದಲ್ಲಿ ಜನ್ಮ ತಾಳಿದ್ದು ನಮ್ಮ ಸೌಭಾಗ್ಯ ಎಂದರು. ಇದೇ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಭಗವಂತ ಖುಬಾ ‌ಮಾತನಾಡಿ, ಸೂರ್ಯ ಚಂದ್ರ ಇರುವವರೆಗೆ ಸಂವಿಧಾನದ ಬದಲಾವಣೆ ಮಾಡಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನದಲ್ಲಿ ಪ್ರತಿಯೊಬ್ಬರ ಸುರಕ್ಷತೆ ಇದೆ. ಎಲ್ಲರೂ ಸರಿಸಮಾನರು, ದೇಶದ ವಿಚಾರ ಬಂದಾಗ ಸಂವಿಧಾನವೇ ನಮ್ಮ ಶ್ರೇಷ್ಠ ಗ್ರಂಥ ಎಂದು ತಿಳಿಸಿದರು. 

ಬಿಜೆಪಿ ಹಾಗೂ ಕಾಂಗ್ರೆಸ್​ ಮುಖಂಡರು ಅಲಂಕರಿಸಿದ ಸಾರೋಟನಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ನೆರವೇರಿಸುವ ಮೂಲಕ ನಮನ ಸಲ್ಲಿಸಿದರು.

ಇದನ್ನೂಓದಿ:ಅಂಬೇಡ್ಕರ್ ಜನ್ಮದಿನ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಸಂಕಲ್ಪ ಪತ್ರ ಸಮರ್ಥಿಸಿಕೊಂಡ ರಾಜ್ಯ ನಾಯಕರು - BJP MANIFESTO

ABOUT THE AUTHOR

...view details