ಕರ್ನಾಟಕ

karnataka

ಒಡಲು ತುಂಬಿದ ಕಾವೇರಿಗೆ ಸಿಎಂ ಬಾಗಿನ ಅರ್ಪಣೆ - LIVE - KRS Dam

By ETV Bharat Karnataka Team

Published : Jul 29, 2024, 12:15 PM IST

Updated : Jul 29, 2024, 2:16 PM IST

ಒಡಲು ತುಂಬಿದ ಕಾವೇರಿಗೆ ಸಿಎಂ ಬಾಗಿನ ಅರ್ಪಣೆ (ETV Bharat)
ಮಂಡ್ಯ: ಸಿಎಂ ಸಿದ್ದರಾಮಯ್ಯ ಇಂದು ಬಾಗಿನ ಅರ್ಪಿಸುತ್ತಿದ್ದು, ಕೆಆರ್​ಎಸ್​ನಲ್ಲಿ ಸಂಭ್ರಮ ಮನೆಮಾಡಿದೆ. ಒಡಲು ತುಂಬಿರುವ ಕೆಆರ್​ಎಸ್​ ಅಣೆಕಟ್ಟೆಯನ್ನು ಹೂವುಗಳಿಂದ ಸಿಂಗರಿಸಲಾಗಿದೆ. ಅಣೆಕಟ್ಟೆಯ ಮೇಲ್ಭಾಗದ ರಸ್ತೆ, ಕಾವೇರಿ ಪ್ರತಿಮೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಸಿಎಂ ಆಗಮನದ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ. ಕಾರ್ಯಕ್ರಮದ ನೇರಪ್ರಸಾರ ಇಲ್ಲಿದೆ. ಕಳೆದ ವರ್ಷ ಬರಗಾಲ ಉಂಟಾಗಿದ್ದರಿಂದ ಅಣೆಕಟ್ಟು ಭರ್ತಿಯಾಗಿರಲಿಲ್ಲ. ಈ ವರ್ಷ ಭಾರೀ ಮಳೆಯಾದ ಪರಿಣಾಮ ಕೆಆರ್​ಎಸ್​ ಮತ್ತು ಕಬಿನಿ ಭರ್ತಿಯಾಗಿವೆ. ಎರಡು ವರ್ಷಗಳ ಬಳಿಕ ಕೆಆರ್‌ಎಸ್​ ತುಂಬಿದ್ದರಿಂದ ಇಂದು ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಸರ್ಕಾರ ಕೈಗೊಂಡಿದೆ. ಜಲಾಶಯಗಳು ಭರ್ತಿಯಾದ ಸಂಭ್ರಮಕ್ಕೆ ಬಾಗಿನ ಅರ್ಪಿಸುವುದು ವಾಡಿಕೆ.  124.80 ಅಡಿ ಸಾಮರ್ಥ್ಯದ ಕೆಆರ್​​ಎಸ್ ಜಲಾಶಯ ಎರಡು ವರ್ಷದ ನಂತರ​ ಸಂಪೂರ್ಣವಾಗಿ ತುಂಬಿದೆ. ಜಲಾಶಯದಿಂದ 50 ಸಾವಿರದಿಂದ 80 ಸಾವಿರ ಕ್ಯೂಸೆಕ್​ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದ್ದು, ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಇರುವ ಜನರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ತಮ್ಮ ಆಸ್ತಿಪಾಸ್ತಿಗಳ ರಕ್ಷಣೆಗೆ ಎಚ್ಚರಿಕೆ ವಹಿಸಬೇಕು ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated : Jul 29, 2024, 2:16 PM IST

ABOUT THE AUTHOR

...view details