ಅಮೃತಸರದ ದುರ್ಗಿಯಾನ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ.. ಭಾರಿ ಭದ್ರತೆ - ದುರ್ಗಿಯಾನge ಬಾಂಬ್ ಬೆದರಿಕೆ
Published : Jan 25, 2024, 10:25 PM IST
ಅಮೃತಸರ: ಅಮೃತಸರದ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದಾದ ದುರ್ಗಿಯಾನ ದೇವಸ್ಥಾನಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ ಕರೆ ಬಂದಿದೆ. ಇಂದು ಬೆಳಗ್ಗೆ ಶ್ರೀ ದುರ್ಗಿಯಾನ ದೇವಸ್ಥಾನದ ಕಚೇರಿಗೆ ಅಪರಿಚಿತ ಖಲಿಸ್ತಾನಿ ಬೆಂಬಲಿಗರು ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಮಾಜಿ ಸಚಿವ ಲಕ್ಷ್ಮೀಕಾಂತ್ ಚಾವ್ಲಾ, ದುರ್ಗಿಯಾನ ದೇವಸ್ಥಾನ ಸಮಿತಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿ ಅರುಣ್ ಖನ್ನಾ ಅವರನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ದುರ್ಗಿಯಾನ ಸಮಿತಿಯ ಪದಾಧಿಕಾರಿ ರಾಮ್ ಪಾಠಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇಂದು ಬೆಳಗ್ಗೆ ದುರ್ಗಿಯಾನ ಸಮಿತಿಯ ಫೋನ್‌ಗೆ ಎರಡು ಕರೆಗಳು ಬಂದಿದ್ದು, ದುರ್ಗಿಯಾನಾ ಸಮಿತಿಯ ಮಾಜಿ ಅಧ್ಯಕ್ಷ ಲಕ್ಷ್ಮೀಕಾಂತ ಚಾವ್ಲಾ ಮತ್ತು ಕಾರ್ಯದರ್ಶಿ ಅರುಣ್ ಖನ್ನಾ ಅವರಿಗೆ ಗುಂಡು ಹಾರಿಸುವುದಾಗಿ ಮತ್ತು ಬಾಂಬ್ ಸ್ಫೋಟಿಸಲಾಗುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಹೇಳಿದರು.
ಪೊಲೀಸರಿಂದ ಬಿಗಿ ಭದ್ರತೆ: ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ದುರ್ಗಿಯಾನ ದೇವಸ್ಥಾನ ಸಮಿತಿಯ ಭದ್ರತೆಗೆ ಮುಂದಾಗಿದೆ. ಅಲ್ಲದೇ ದುರ್ಗಿಯಾನ ದೇವಸ್ಥಾನಕ್ಕೆ ಬರುವ ಯಾತ್ರಾರ್ಥಿಗಳನ್ನು ಪೊಲೀಸ್ ಆಡಳಿತವು ಸಂಪೂರ್ಣವಾಗಿ ಪರಿಶೀಲಿಸುತ್ತಿದೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಂಟೈನರ್ - ಆಟೋ ರಿಕ್ಷಾ ಮುಖಾಮುಖಿ ಡಿಕ್ಕಿ; ಗಂಗಾ ಸ್ನಾನಕ್ಕೆ ಹೊರಟಿದ್ದ 12 ಮಂದಿ ಸಾವು