ಕರ್ನಾಟಕ

karnataka

ETV Bharat / videos

ಕಾರ್​ಗೆ ಬೈಕ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು: ಸಿಸಿಟಿವಿ ದೃಶ್ಯ - Biker Died - BIKER DIED

By ETV Bharat Karnataka Team

Published : Aug 19, 2024, 7:35 PM IST

ಮೈಸೂರು: ಕಾರ್​ಗೆ ಬೈಕ್‌ ಡಿಕ್ಕಿ ಹೊಡೆದು ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಕುಳಿತಿದ್ದ ಮಹಿಳೆ ಗಾಯಗೊಂಡಿರುವ ಘಟನೆ ನಗರದ ದೇವರಾಜ ಅರಸು ರಸ್ತೆಯಲ್ಲಿ ಭಾನುವಾರ ಬೆಳಗ್ಗಿನ ಜಾವ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೆಚ್.ಡಿ.ಕೋಟೆ ತಾಲ್ಲೂಕಿನ ಬೆಟ್ಟದ ಬೀಡು ಗ್ರಾಮದ ಉಲ್ಲಾಸ್‌ ಸಾಗರ್‌ (22) ಮೃತಪಟ್ಟಿದ್ದಾರೆ. 36 ವರ್ಷದ ಮಹಿಳೆ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ದೇವರಾಜ್‌ ಸಂಚಾರಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ರಸ್ತೆಗೆ ಹಂಪ್‌ ಅಳವಡಿಸುವಂತೆ ಪ್ರತಿಭಟನೆ: ಅಪಘಾತವಾದ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಈ ರಸ್ತೆಗೆ ಮೂರು ಕಡೆಗಳಿಂದ ವಾಹನಗಳು ಆಗಮಿಸುವುದರಿಂದ ಹೆಚ್ಚಿನ ಸಂಚಾರ ದಟ್ಟಣೆ ಇರುತ್ತದೆ. ಆದ್ದರಿಂದ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಗೂ ವೈಜ್ಞಾನಿಕವಾಗಿ ಹಂಪ್‌ ಆಳವಡಿಸಬೇಕು ಎಂದು ಆಗ್ರಹಿಸಿ ದೇವರಾಜ ಅರಸು ರಸ್ತೆಯ ನಾಗರೀಕರು ಮತ್ತು ವರ್ತಕರು ಪ್ರತಿಭಟನೆ ನಡೆಸಿ ಸಂಚಾರಿ ಪೊಲೀಸರಿಗೆ ಮನವಿ ಸಲ್ಲಿಸಿದ್ದರು. 

ಇದನ್ನೂ ಓದಿ: ಖಾಸಗಿ ಬಸ್-ಪಿಕಪ್ ನಡುವೆ ಭೀಕರ ಅಪಘಾತ: 10 ಮಂದಿ ದುರ್ಮರಣ - Horrific Accident

ABOUT THE AUTHOR

...view details