ಕರ್ನಾಟಕ

karnataka

ETV Bharat / videos

ಧಾರವಾಡ: ಮರಳಿನಲ್ಲಿ ಅರಳಿದ ರಾಮಮಂದಿರ, ಕಲಾವಿದನ ಕೈಚಳಕ ನೋಡಿ - Artist Manjunath Hiremath

By ETV Bharat Karnataka Team

Published : Jan 22, 2024, 1:02 PM IST

ಧಾರವಾಡ: ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಇಡೀ ದೇಶದ ತುಂಬೆಲ್ಲಾ ಸಂಭ್ರಮ, ಸಡಗರ ಮನೆ ಮಾಡಿದೆ. ಹೀಗಿರುವಾಗ ಧಾರವಾಡದಲ್ಲಿ ಕಲಾವಿದರೊಬ್ಬರು ಮರಳಿನಲ್ಲಿ ಶ್ರೀರಾಮ ಮಂದಿರ ಅರಳಿಸಿದ್ದಾರೆ.

ದೊಡ್ಡ ನಾಯಕನಕೊಪ್ಪದಲ್ಲಿ ಜನಜಾಗೃತಿ ಸಂಘದ ವತಿಯಿಂದ ನಾಲ್ಕು ಟ್ರ್ಯಾಕ್ಟರ್ ಮರಳಿನಲ್ಲಿ ಎಂಟು ಅಡಿ ಎತ್ತರ ಹಾಗೂ ಹನ್ನೆರಡು ಅಡಿ ಅಗಲದಲ್ಲಿ ರಾಮ ಮಂದಿರದ ಪ್ರತಿಕೃತಿ ಮೂಡಿಬಂದಿದೆ. ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ​ ಅವರು ಸುಂದರ ಪ್ರತಿಕೃತಿ ಸೃಷ್ಟಿಸಿ ಗಮನ ಸೆಳೆದಿದ್ದಾರೆ. 

ದೊಡ್ಡನಾಯಕನಕೊಪ್ಪ ಬೇಂದ್ರೆ ನಗರ ಕ್ರಾಸ್ ಮೈದಾನದಲ್ಲಿ ಪ್ರತಿಕೃತಿ ನಿರ್ಮಿಸುವ ಕೆಲಸದಲ್ಲಿ ತೊಡಗಿದ್ದ ಹಿರೇಮಠ ಅವರಿಗೆ ತಮ್ಮ ಇಬ್ಬರು ಪುತ್ರರು ಸಹಕಾರ ನೀಡಿದ್ದಾರೆ. ಇದೇ ಮರಳಿನ ಮಂದಿರದಲ್ಲಿ ಸಂಜೆ ದೀಪೋತ್ಸವ ಆಯೋಜಿಸಲಾಗಿದೆ. 

ಇನ್ನು, ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ಕೈಂಕರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ನಡೆಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ದೇಶ, ವಿದೇಶಗಳ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದಾರೆ. ಅಯೋಧ್ಯೆ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದಾರೆ.

ಇದನ್ನೂ ನೋಡಿ: ಬೆಳಗಾವಿ ಕಲಾವಿದನಿಂದ ರಂಗೋಲಿಯಲ್ಲಿ ಅರಳಿದ ಬಾಲರಾಮ: ವಿಡಿಯೋ

ABOUT THE AUTHOR

...view details