ಕರ್ನಾಟಕ

karnataka

ETV Bharat / videos

ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ವ್ಯಕ್ತಿ ಹೊರಗೆ ಎಳೆಯಲು ಯತ್ನ: ನಿದ್ರೆಯಿಂದ ತಟ್ಟನೆ ಎಚ್ಚರಗೊಂಡ ವ್ಯಕ್ತಿ ಕಂಡು ಪೊಲೀಸರು ಶಾಕ್! - man drowned in water - MAN DROWNED IN WATER

By ETV Bharat Karnataka Team

Published : Jun 12, 2024, 9:32 AM IST

ಹನಮಕೊಂಡ (ತೆಲಂಗಾಣ): ಹನಮಕೊಂಡದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹನುಮಕೊಂಡ ಪಟ್ಟಣದ ಎರಡನೇ ವಿಭಾಗದ ರೆಡ್ಡಿಪುರಂ ಕೋವೆಲಕುಂಟಾದಲ್ಲಿ ಸೋಮವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವ್ಯಕ್ತಿಯೊಬ್ಬರು ನೀರಿನಲ್ಲಿ (ಕೊಳದಲ್ಲಿ) ಮಲಗಿದ್ದರು.

ಇದನ್ನು ಗಮನಿಸಿದ ಸ್ಥಳೀಯರು ಶವ ಎಂದು ಭಾವಿಸಿ ಸ್ಥಳೀಯ ಕೆಯು ಪೊಲೀಸರು ಹಾಗೂ 108 ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ 108 ಸಿಬ್ಬಂದಿ ಹಾಗೂ ಪೊಲೀಸರು ಸ್ಥಳೀಯರ ನೆರವಿನಿಂದ ಮೃತದೇಹ ಎಂದು ಭಾವಿಸಿ ಕೈ ಹಿಡಿದು ಹೊರಗೆ ತೆಗೆಯಲು ಪ್ರಯತ್ನ ಮಾಡಿದ್ದಾರೆ. ಈ ವೇಳೆ ದೇಹವನ್ನು ನೀರಿನಿಂದ ಹೊರಗೆ ಎಳೆಯುವಾಗ, ಆ ವ್ಯಕ್ತಿ ನಿದ್ರೆಯಿಂದ ಇದ್ದಕ್ಕಿದ್ದಂತೆ ಎಚ್ಚರಗೊಂಡಿದ್ದಾನೆ. ಇದರಿಂದ ಆತನನ್ನು ಎಳೆದೊಯ್ಯುತ್ತಿದ್ದ ಪೊಲೀಸರು ಬೆಚ್ಚಿಬಿದಿದ್ದಾರೆ.  

ಪೊಲೀಸರು ಆ ವ್ಯಕ್ತಿಯ ವಿವರಗಳನ್ನು ಕೇಳಿದಾಗ, ತಾನು ನೆಲ್ಲೂರು ಜಿಲ್ಲೆಯವನಾಗಿದ್ದು, ಈಗ ಕಾಜಿಪೇಟೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದೇನೆ ಎಂದು ಆತ ತಿಳಿಸಿದ್ದಾನೆ. ಬಳಿಕ ಪೊಲೀಸರು ವ್ಯಕ್ತಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ.  ನೀರಿನಲ್ಲಿ ಏಕೆ ಮಲಗಿದ್ದೀಯಾ ಎಂದು ಪೊಲೀಸರು ಕೇಳಿದಾಗ, ಅತಿ ಹೆಚ್ಚು ಬಿಸಿಲಿನ ಶಾಖದ ಕಾರಣದಿಂದ ನೀರಿನಲ್ಲಿ ಮಲಗಿದ್ದೇನೆ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಪೊಲೀಸರು ಶಾಕ್​ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಅಡುಗೆ ಕೋಣೆಯಲ್ಲಿ ಬುಸುಗುಡುತ್ತಿದ್ದ ಸರ್ಪ: ಕೇರೆ ಹಾವೆಂದುಕೊಂಡವರಿಗೆ ಹೆಡೆ ಎತ್ತಿ ಎಚ್ಚರಿಸಿದ ಕಾಳಿಂಗ! - King Cobra in Kitchen

ABOUT THE AUTHOR

...view details