ಬೀಜಿಂಗ್(ಚೀನಾ):ರಾತ್ರಿ ವೇಳೆ ಮಲಗುವ ಮುನ್ನ ಮಹಿಳೆಯೊಬ್ಬರು ತನ್ನ ಐಫೋನ್ ಚಾರ್ಜ್‌ಗಿಟ್ಟಿದ್ದರು. ಬೆಳಗ್ಗೆ ಫೋನ್ ಸ್ಫೋಟಗೊಂಡಿದ್ದು, ಆಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಮಂಗಳವಾರ ಬೆಳಗ್ಗೆ ಚೀನಾದ ಶಾಂಕ್ಸಿಯಲ್ಲಿ ನಡೆದಿದೆ. ಈ ಸುದ್ದಿ ಚೀನಾದಾದ್ಯಂತ ಸಂಚಲನ ಮೂಡಿಸಿದ ಬಳಿಕ ಆ್ಯಪಲ್ ಕಂಪನಿ ಆತಂಕ ವ್ಯಕ್ತಪಡಿಸಿದೆ. ಐಫೋನ್ ಸ್ಫೋಟದ ಬಗ್ಗೆ ತಿಳಿಯಲು ಆ ಸಾಧನವನ್ನು ಹತ್ತಿರದ ಆ್ಯಪಲ್ ಕಸ್ಟಮರ್ ಕೇರ್ಗೆ ತೆಗೆದುಕೊಂಡು ಹೋಗಲಾಗಿದೆ.
ಅಪಘಾತ ಸಂಭವಿಸಿದ್ದು ಹೇಗೆ?:
- ವರದಿಗಳ ಪ್ರಕಾರ, ಮಹಿಳೆ ಮಲಗುವ ಮುನ್ನ ಐಫೋನ್ ಚಾರ್ಜ್ಗೆ ಇಟ್ಟಿದ್ದರು. ರಾತ್ರಿ ಮಲಗಿದ್ದಾಗ ಆಕಸ್ಮಿಕವಾಗಿ ಐಫೋನ್ 14 ಪ್ರೊ ಮ್ಯಾಕ್ಸ್ ಮೇಲೆ ಕೈ ಹಾಕಿದ್ದಾರೆ.
- ಆಗ ಐಫೋನ್ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ. ನಂತರ ಎಚ್ಚೆತ್ತುಕೊಂಡು ಹೊಗೆ ಮತ್ತು ಬೆಂಕಿ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಫೋನ್ ಸಂಪೂರ್ಣವಾಗಿ ಸುಟ್ಟುಹೋಗಿತ್ತು.
- ಈ ಘಟನೆಯ ನಂತರ ಸಾಕಷ್ಟು ಹಾನಿಯಾಗಿದೆ. ಅಪಾರ್ಟ್‌ಮೆಂಟ್‌ನ ಗೋಡೆಗಳು ಹೊಗೆಯಿಂದ ಸಂಪೂರ್ಣ ಕಪ್ಪಾಗಿದ್ದು, ಹಾಸಿಗೆ ಕೂಡ ಸುಟ್ಟು ಕರಕಲಾಗಿದೆ.
- ಈ iPhone 14 Pro Max ಅನ್ನು 2022ರಲ್ಲಿ ಖರೀದಿಸಲಾಗಿದೆ ಮತ್ತು ಅದರ ವಾರಂಟಿ ಅವಧಿ ಮುಗಿದಿದೆ.
- ಪ್ರಾಥಮಿಕ ವರದಿಗಳ ಪ್ರಕಾರ, ಬ್ಯಾಟರಿಯಲ್ಲಿನ ದೋಷದಿಂದ ಇಂತಹ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
- ಮಹಿಳೆ ವಾಸಿಸುತ್ತಿದ್ದ ಬಾಡಿಗೆ ಮನೆಗೆ ಹಾನಿಯಾದ ಕಾರಣ ಮಾಲೀಕರು ಅದರ ಹಾನಿಯನ್ನು ನೀಡುವಂತೆ ಕೇಳಿದ್ದಾರೆ.