Solar Eclipse:ವರ್ಷದ ಕೊನೆಯ ಮತ್ತು ಎರಡನೇ ಸೂರ್ಯಗ್ರಹಣ ಅಕ್ಟೋಬರ್ 2ರಂದು ಸಂಭವಿಸಲಿದೆ. ಇದು ಸಂಪೂರ್ಣ ಸೂರ್ಯ ಗ್ರಹಣವಾಗಿರದೆ ವಾರ್ಷಿಕ ಸೂರ್ಯಗ್ರಹಣವಾಗಿರುತ್ತದೆ. ಇದನ್ನು 'ರಿಂಗ್ ಆಫ್ ಫೈರ್' ಎನ್ನುವರು. ಈ ಸಮಯದಲ್ಲಿ ಆಕಾಶದಲ್ಲಿ ಬೆಂಕಿಯ ಉಂಗುರ ಗೋಚರಿಸುತ್ತದೆ. ಯಾವಾಗಲೂ ಅಮವಾಸ್ಯೆಯಂದೇ ಗ್ರಹಣ ಉಂಟಾಗುತ್ತದೆ.
ಈ ಸಲ ಚಂದ್ರಗ್ರಹಣದಿಂದ ಪಿತೃ ಪಕ್ಷ ಆರಂಭವಾಗಿದ್ದರೆ, ಸೂರ್ಯಗ್ರಹಣದೊಂದಿಗೆ ಪಿತೃ ಪಕ್ಷ ಪಾಕ್ಷಿಕ ಅಂತ್ಯವಾಗುತ್ತದೆ. ವರ್ಷದ ಕೊನೆಯ ಸೂರ್ಯಗ್ರಹಣಕ್ಕೆ ಸಂಬಂಧಿಸಿದಂತೆ ರಿಂಗ್ ಆಫ್ ಫೈರ್‌ನ ದೃಶ್ಯವು ಭಾರತದಲ್ಲಿ ಗೋಚರಿಸುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿದೆ. ವಿಶೇಷವೆಂದರೆ, ಭಾರತದಲ್ಲಿ ಚಂದ್ರಗ್ರಹಣ ಹೇಗೆ ಗೋಚರಿಸಲಿಲ್ಲವೋ ಅದೇ ರೀತಿ ಸೂರ್ಯಗ್ರಹಣವೂ ಗೋಚರಿಸದು. ಆದ್ದರಿಂದ ಅದರ ಸೂತಕ ಅವಧಿಯೂ ಮಾನ್ಯವಾಗುವುದಿಲ್ಲ.
ಸೂರ್ಯ ಗ್ರಹಣ ಜಗತ್ತಿನ ವಿವಿಧ ದೇಶಗಳಲ್ಲಿ ಗೋಚರಿಸಲಿದೆ. ದಕ್ಷಿಣ ಅಮೆರಿಕ, ಉತ್ತರ ಅಮೆರಿಕದ ದಕ್ಷಿಣ ಭಾಗಗಳು, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಸಾಗರ, ಚಿಲಿ, ಅರ್ಜೆಂಟೀನಾ, ಬ್ರೆಜಿಲ್, ಮೆಕ್ಸಿಕೊ, ಪೆರು, ನ್ಯೂಜಿಲೆಂಡ್ ಹಾಗು ಫಿಜಿ ಮೊದಲಾದ ದೇಶಗಳಲ್ಲಿ ಗ್ರಹಣ ಕೆಲಕಾಲ ಗೋಚರಿಸಲಿದೆ. ದಕ್ಷಿಣ ಚಿಲಿ ಮತ್ತು ದಕ್ಷಿಣ ಅರ್ಜೆಂಟೀನಾದಲ್ಲಿ ಮಾತ್ರ ಪೂರ್ಣವಾಗಿ ಗೋಚರಿಸುತ್ತದೆ. ಸೂರ್ಯಗ್ರಹಣದ ಒಟ್ಟು ಅವಧಿ 6 ಗಂಟೆ 4 ನಿಮಿಷ ಆಗಿರುತ್ತದೆ.