WhatsApp Custom Lists Feature:ಚಾಟ್‌ಗಳನ್ನು ಇನ್ನಷ್ಟು ಸುಲಭ ಮತ್ತು ವ್ಯವಸ್ಥಿತವಾಗಿ ಮಾಡಲು ವಾಟ್ಸ್ಆ್ಯಪ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. "Lists" ಎಂದು ಹೆಸರಿಸಲಾಗಿದೆ. ಈ ವೈಶಿಷ್ಟ್ಯದ ಉದ್ದೇಶವು ಬಳಕೆದಾರರು ತಮ್ಮ ಚಾಟ್‌ಗಳನ್ನು ವಿವಿಧ ವರ್ಗಗಳಾಗಿ ವಿಂಗಡಿಸಲು ಅನುವು ಮಾಡಿಕೊಡುತ್ತದೆ. ಇದು ಚಾಟ್‌ಗಳನ್ನು ಮಾಡಲು ಮತ್ತು ಹುಡುಕಲು ಸುಲಭವಾಗುತ್ತದೆ. ಅದರ ಹಿಂದಿನ ಚಾಟ್ ಫಿಲ್ಟರ್‌ಗಳ ಯಶಸ್ಸಿನ ನಂತರ ವಾಟ್ಸ್ಆ್ಯಪ್ ಈಗ ತನ್ನ ಬಳಕೆದಾರರಿಗೆ ಇನ್ನಷ್ಟು ನಿಯಂತ್ರಣವನ್ನು ನೀಡಲು ಅದರ ವೈಶಿಷ್ಟ್ಯಗಳನ್ನು ಸುಧಾರಿಸುತ್ತಿದೆ. ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯೋಣ ಬನ್ನಿ..
ಲಿಸ್ಟ್ ರಚಿಸುವುದು ಹೇಗೆ?:ಲಿಸ್ಟ್ಸ್ ವೈಶಿಷ್ಟ್ಯವು ಬಳಕೆದಾರರಿಗೆ ಕುಟುಂಬ, ಕೆಲಸ ಅಥವಾ ಸ್ನೇಹಿತರು ನಂತಹ ಕಸ್ಟಮ್ ವರ್ಗಗಳನ್ನು ರಚಿಸಲು ಅನುಮತಿಸುತ್ತದೆ. ಪ್ರತಿ ಚಾಟ್ ಸುಲಭವಾಗಿ ಬೇರೆ ವರ್ಗಕ್ಕೆ ಪ್ರತ್ಯೇಕಿಸುತ್ತದೆ. ಇದರೊಂದಿಗೆ, ನೀವು ಮತ್ತೆ ಮತ್ತೆ ಸ್ಕ್ರೋಲ್ ಮಾಡದೆಯೇ ನಿಮ್ಮ ಪ್ರಮುಖ ಚಾಟ್ ತ್ವರಿತವಾಗಿ ಹುಡುಕಬಹುದು. ಈ ಹೊಸ ವೈಶಿಷ್ಟ್ಯವು ಬಳಕೆದಾರರ ಅನುಭವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ.
ಈ ಲಿಸ್ಟ್ಸ್ ಮಾಡುವುದು ತುಂಬಾ ಸುಲಭ. ಚಾಟ್ ಟ್ಯಾಬ್‌ನಲ್ಲಿರುವ “+” ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ನೀವು ಹೊಸ ಲಿಸ್ಟ್ಸ್ ಕ್ರಿಯೆಟ್ ಮಾಡಬಹುದು. ಹೆಸರುಗಳನ್ನು ಸಹ ನೀವು ಬದಲಿಸಬಹುದು. ಅಷ್ಟೇ ಅಲ್ಲ ಆ ಗ್ರೂಪ್ಗೆ ನೀವು ಹೊಸ ನಂಬರ್ಗಳನ್ನು ಸಹ ಸೇರಿಸಬಹುದು. ಲಿಸ್ಟ್ಸ್ ವೈಶಿಷ್ಟ್ಯವು ಗುಂಪು ಮತ್ತು ಒಬ್ಬರಿಗೊಬ್ಬರು ಚಾಟ್‌ಗಳಿಗೆ ಲಭ್ಯವಿದೆ. ಇದು ಬಳಕೆದಾರರಿಗೆ ತಮ್ಮ ಸಂಭಾಷಣೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.