Whatsapp Added New Features:ವಾಟ್ಸ್ಆ್ಯಪ್ ಬಳಕೆದಾರರಿಗೆ ಶುಭ ಸುದ್ದಿ. ಜನಪ್ರಿಯ ಇನ್ಸ್ಟೆಂಟ್ ಮೆಸೇಜಿಂಗ್ ಆಪ್ ವಾಟ್ಸ್ಆ್ಯಪ್ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಈಗ ಬಳಕೆದಾರರಿಗೆ ವಿಡಿಯೋಗಳು ಮತ್ತು ಫೋಟೋಗಳನ್ನು ನೇರವಾಗಿ ಚಾಟ್‌ನಲ್ಲಿ ಎಡಿಟ್ ಮಾಡಲು 30 ರೀತಿಯ ವಿಜುವಲ್ ಎಫೆಕ್ಟ್‌ಗಳನ್ನು ನೀಡುತ್ತದೆ.
ಆ್ಯಪ್ನಿಂದ ಮತ್ತೊಬ್ಬರಿಗೆ ಸ್ಟಿಕ್ಕರ್ ಪ್ಯಾಕ್‌ಗಳನ್ನು ನೇರವಾಗಿ ಹಂಚಿಕೊಳ್ಳಲು ಮತ್ತು ಸೆಲ್ಫಿಗಳಿಂದ ಸ್ಟಿಕ್ಕರ್‌ಗಳನ್ನು ಕ್ರಿಯೆಟ್ ಮಾಡಲು ಹೊಸದಾಗಿ ಫೀಚರ್ಸ್ವೊಂದನ್ನು ಸಹ ಪರಿಚಯಿಸಿದೆ. ಈ ಆ್ಯಪ್ ರಿಯಾಕ್ಷನ್ ಫೀಚರ್ ಅನ್ನು ಸಹ ಸುಧಾರಿಸಿದೆ. ವಾಟ್ಸ್ಆ್ಯಪ್ನಲ್ಲಿ ಹೊಸ ವೈಶಿಷ್ಟ್ಯಗಳು ಈ ಕೆಳಗಿನಂತಿವೆ.
ಕ್ಯಾಮೆರಾ ಎಫೆಕ್ಟ್ಸ್: ವಾಟ್ಸ್ಆ್ಯಪ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಡಿಯೋ ಕರೆಗಳಿಗಾಗಿ ಹೊಸ ಫಿಲ್ಟರ್‌ಗಳು, ಬ್ಯಾಕ್ಗ್ರೌಂಡ್ಸ್ ಮತ್ತು ಎಫೆಕ್ಟ್‌ಗಳನ್ನು ಪರಿಚಯಿಸಿತು. ಈ ಫೀಚರ್ಸ್ ವಿಡಿಯೋ ಕರೆಗಳಿಗೆ ಮಾತ್ರ ಇತ್ತು. ಈಗ ವಾಟ್ಸ್ಆ್ಯಪ್ ಕ್ಯಾಮೆರಾ ಬಳಸಿ ತೆಗೆದ ವಿಡಿಯೋಗಳು ಮತ್ತು ಫೋಟೋಗಳಿಗೂ ಈ ಫೀಚರ್ಸ್ ಲಭ್ಯವಿದೆ. ಬಳಕೆದಾರರು ವಾಟ್ಸ್ಆ್ಯಪ್ನಲ್ಲಿ ತೆಗೆದ ಫೋಟೋಗಳು ಮತ್ತು ರೆಕಾರ್ಡ್ ಮಾಡಿದ ವಿಡಿಯೋಗಳಿಗೆ 30 ಫಿಲ್ಟರ್‌ಗಳು, ಬ್ಯಾಕ್ಗೌಂಡ್ಸ್ ಮತ್ತು ಎಫೆಕ್ಟ್‌ಗಳನ್ನು ಡೈರೆಕ್ಟ್ ಆಗಿಯೇ ಬಳಸಬಹುದು.
ಸೆಲ್ಫಿ ಸ್ಟಿಕ್ಕರ್‌ಗಳು:ಯಾವುದೇ ಸೆಲ್ಫಿಯನ್ನು ಕಸ್ಟಮ್ ಸ್ಟಿಕ್ಕರ್ ಆಗಿ ಪರಿವರ್ತಿಸುವ ಸೌಲಭ್ಯವನ್ನು ವಾಟ್ಸ್ಆ್ಯಪ್ ಈಗ ನೀಡುತ್ತದೆ. ಮೊದಲು ನೀವು ಅಪ್ಲಿಕೇಶನ್‌ನಲ್ಲಿರುವ ಕ್ಯಾಮೆರಾ ಬಳಸಬೇಕಾಗುತ್ತದೆ. ಬಳಕೆದಾರರು ಸ್ಟಿಕ್ಕರ್ಸ್ ಟ್ಯಾಬ್‌ಗೆ ಹೋಗಿ ಕ್ರಿಯೇಟ್ ಸ್ಟಿಕ್ಕರ್ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ನಂತರ ವಾಟ್ಸ್ಆ್ಯಪ್ ಕ್ಯಾಮೆರಾ ಓಪನ್ ಆಗುತ್ತದೆ. ಆಗ ಬಳಕೆದಾರರು ಸೆಲ್ಫಿ ತೆಗೆದುಕೊಂಡು ಅದನ್ನು ಸ್ಟಿಕ್ಕರ್ ಆಗಿ ಪರಿವರ್ತಿಸಲು ಅನುಮತಿಸುತ್ತದೆ. ಈ ವೈಶಿಷ್ಟ್ಯವು ಈಗಾಗಲೇ ಆಂಡ್ರಾಯ್ಡ್‌ನಲ್ಲಿ ಲಭ್ಯವಿದೆ. ಇದು ಶೀಘ್ರದಲ್ಲೇ iOS ನಲ್ಲೂ ಲಭ್ಯವಾಗಲಿದೆ.