Data Centers Statistic: ಈ ಯುಗದಲ್ಲಿ ಬೆಳೆಯುತ್ತಿರುವ ಕ್ಲೌಡ್ ಮತ್ತು AI ಅಳವಡಿಕೆಯು ಹೆಚ್ಚಿನ ಡೇಟಾ ಕೇಂದ್ರಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಪ್ರಸ್ತುತ ಜಾಗತಿಕವಾಗಿ ಅಮೆರಿಕ 5,388 ಡೇಟಾ ಸೆಂಟರ್‌ಗಳೊಂದಿಗೆ ಮುನ್ನಡೆಸುತ್ತಿದೆ. ಇದು ಚೀನಾ ಮತ್ತು ಹೆಚ್ಚಿನ ಯುರೋಪಿಯನ್ ರಾಷ್ಟ್ರಗಳಿಗಿಂತ 10 ಪಟ್ಟು ಹೆಚ್ಚು. ಆದರೆ ಭಾರತವು ಈ ಡೇಟಾ ಸೆಂಟರ್‌ನಲ್ಲಿ ತನ್ನ ಛಾಪು ಮೂಡಿಸಲು ಸಜ್ಜಾಗುತ್ತಿದೆ.
Stocklytics.com ಪ್ರಸ್ತುತಪಡಿಸಿದ ಮಾಹಿತಿ ಪ್ರಕಾರ, ಅಮೆರಿಕ ಮುಂದಿನ 10 ದೊಡ್ಡ ಡೇಟಾ ಸೆಂಟರ್ ಮಾರುಕಟ್ಟೆಗಳಿಗಿಂತ 70 ಪ್ರತಿಶತ ಹೆಚ್ಚಾಗಿದೆ. ಎರಡನೇ ಸ್ಥಾನದಲ್ಲಿರುವ ಜರ್ಮನಿ 520 ಡೇಟಾ ಸೆಂಟರ್‌ಗಳನ್ನು ಹೊಂದಿದೆ ಮತ್ತು ಯುಕೆ 512 ಸೌಲಭ್ಯಗಳನ್ನು ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದೆ. 449 ಪಟ್ಟಿ ಮಾಡಲಾದ ಡೇಟಾ ಕೇಂದ್ರಗಳೊಂದಿಗೆ ಜಾಗತಿಕ ಡೇಟಾ ಸೆಂಟರ್ ಲ್ಯಾಂಡ್‌ಸ್ಕೇಪ್‌ನಲ್ಲಿ ಚೀನಾ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಕೆನಡಾ, ಫ್ರಾನ್ಸ್ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ 336, 315 ಮತ್ತು 307 ಡೇಟಾ ಕೇಂದ್ರಗಳೊಂದಿಗೆ ನಂತರದ ಸ್ಥಾನದಲ್ಲಿವೆ.
Cloud Scene ಡೇಟಾ ಪ್ರಕಾರ, ಜಪಾನ್ 219 ಕಾರ್ಯಾಚರಣಾ ಡೇಟಾ ಕೇಂದ್ರಗಳೊಂದಿಗೆ ಟಾಪ್ 10 ಪಟ್ಟಿಯಲ್ಲಿ ಕೊನೆಯ ದೇಶವಾಗಿದೆ. ಗಮನಾರ್ಹವಾದ ಕಂಪ್ಯೂಟಿಂಗ್ ಶಕ್ತಿ ಮತ್ತು ಸಂಗ್ರಹಣೆಯ ಅಗತ್ಯವಿರುವ AI ತಂತ್ರಜ್ಞಾನಗಳ ಬೆಳವಣಿಗೆಯು ಡೇಟಾ ಸೆಂಟರ್‌ನಲ್ಲಿ ಛಾಪು ಮೂಡಿಸಲು ಉತ್ತೇಜನ ನೀಡಿದೆ. ಮಾರುಕಟ್ಟೆಯು 2017 ರಿಂದ 52 ಪ್ರತಿಶತದಷ್ಟು ಬೆಳೆದು $416 ಶತಕೋಟಿ ಮೌಲ್ಯವನ್ನು ತಲುಪಿದೆ.