Budget 2025 :ಇಂದು ಗೃಹಿಣಿಯರಿಂದ ಹಿಡಿದು ಸ್ಟಾರ್ಟ್‌ಅಪ್‌ಗಳವರೆಗೆ ಎಲ್ಲರ ಕಣ್ಣುಗಳು ಬಜೆಟ್‌ನತ್ತ ನೆಟ್ಟಿದ್ದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸಿದರು. ಈ ಬಾರಿಯೂ ಅವರ ಬಜೆಟ್ ಪೆಟ್ಟಿಗೆ ಅನೇಕ ದೊಡ್ಡ ಲೆಕ್ಕಾಚಾರಗಳಿಂದಲೇ ತುಂಬಿತ್ತು. ಈ ಬಾರಿ ಬಜೆಟ್‌ನಲ್ಲಿ ಎಐ ಲೋಕಕ್ಕೆ ಭರಪೂರ ಅನುದಾನ ಮೀಸಲಿಟ್ಟಿದ್ದಾರೆ.
500 ಕೋಟಿ ಘೋಷಣೆ :ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಸಾಮಾನ್ಯ ಬಜೆಟ್ 2025 ರಲ್ಲಿ ಹಲವು ಕ್ಷೇತ್ರಗಳಿಗೆ ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಲ್ಲಿ ಶ್ರೇಷ್ಠತೆಗಾಗಿ 500 ಕೋಟಿ ರೂ. ಘೋಷಣೆ ಮಾಡಿದ್ದಾರೆ.
ಎಐ ಶಿಕ್ಷಣದ ಬಗ್ಗೆ ವಿಶೇಷ ಗಮನ ಹರಿಸಲು ಹಣಕಾಸು ಸಚಿವರು ಈ ವರ್ಷದ ಬಜೆಟ್‌ನಲ್ಲಿ ಹೊಸ ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಎಐ ಸೆಂಟರ್ ಆಫ್ ಎಕ್ಸಲೆನ್ಸ್ನ ಪ್ರಸ್ತಾವನೆಯನ್ನು ಮಂಡಿಸಿ ಅದಕ್ಕೆ 500 ಕೋಟಿ ರೂ. ಮಂಜೂರು ಮಾಡಿದ್ದಾರೆ. 2024 ರಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಹಣಕಾಸು ಸಚಿವರು AI ಶಿಕ್ಷಣವನ್ನು ಉತ್ತೇಜಿಸಲು 255 ಕೋಟಿ ರೂಪಾಯಿಗಳ ಬಜೆಟ್ ಅನ್ನು ಮಂಡಿಸಿದ್ದರು, ಅದನ್ನು ಈಗ ಸುಮಾರು ಎರಡು ಪಟ್ಟು ಅಂದರೆ 500 ಕೋಟಿಗೆ ಹೆಚ್ಚಿಸಿರುವುದು ಗಮನಾರ್ಹ..
“ಮೇಕ್ ಫಾರ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್” ಉತ್ಪಾದನೆಗೆ ನಮ್ಮ ಯುವಕರಿಗೆ ಅಗತ್ಯವಾದ ಕೌಶಲ್ಯಗಳನ್ನು ಒದಗಿಸಲು ಜಾಗತಿಕ ಪರಿಣತಿ ಮತ್ತು ಪಾಲುದಾರಿಕೆಯೊಂದಿಗೆ 5 ರಾಷ್ಟ್ರೀಯ ಕೌಶಲ್ಯ ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಭಾಷಣದಲ್ಲಿ ಹೇಳಿದರು.
ಸರ್ಕಾರದ ಉದ್ದೇಶವೇನು?ಸಂಸತ್ ಭವನದಲ್ಲಿ ಬಜೆಟ್ ಮಂಡನೆ ವೇಳೆ ಮಾತನಾಡಿದ ಕೇಂದ್ರ ಸಚಿವರು, ದೇಶದ ರೈತರು, ಬಡವರು, ಮಹಿಳೆಯರು ಮತ್ತು ಯುವಕರ ಬದುಕನ್ನು ಹಸನುಗೊಳಿಸುವುದು ಈ ವರ್ಷದ ಬಜೆಟ್‌ನಲ್ಲಿ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು.