Five New Two Wheelers:ಈ ತಿಂಗಳಲ್ಲಿ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಹಲವು ಪ್ರಮುಖ ಕಂಪನಿಗಳು ತಮ್ಮ ಹೊಚ್ಚ ಹೊಸ ವಾಹನಗಳನ್ನು ಬಿಡುಗಡೆಗೊಳಿಸಲು ಅಣಿಯಾಗುತ್ತಿವೆ. ಸ್ಟೈಲಿಶ್ ರೆಟ್ರೊ-ಇನ್ಸ್ಪೈರೆಡ್ ಬೈಕ್‌ಗಳಿಂದ ಹಿಡಿದು ಪರಿಸರಸ್ನೇಹಿ ಮತ್ತು ಅಡ್ವೆಂಚರ್ ಬೈಕ್ಗಳನ್ನು ಖರೀದಿಸಲು ಕಾಯುತ್ತಿರುವ ಸವಾರರು ಈ ಸುದ್ದಿ ಓದಲೇಬೇಕು. ಈ ತಿಂಗಳು ದೇಶದ ಮಾರುಕಟ್ಟೆ ಪಾದಾರ್ಪಣೆ ಮಾಡಲಿರುವ ಐದು ಹೊಸ ದ್ವಿಚಕ್ರ ವಾಹನಗಳು ಇವು.
The Revamped Jawa 42:ಜಾವಾ ಮೋಟಾರ್‌ಸೈಕಲ್ಸ್ Revamped Jawa 42 ಅನ್ನು ಸೆಪ್ಟೆಂಬರ್ 3 ಅಂದ್ರೆ ಇಂದು ಅನಾವರಣಗೊಳಿಸಲು ಸಿದ್ಧವಾಗಿದೆ. ಹೊಸ ಮಾದರಿಯು ಪರಿಷ್ಕರಿಸಿದ ಬಾಡಿ ಶೈಲಿಯನ್ನು ಒಳಗೊಂಡಂತೆ ಗಮನಾರ್ಹ ಅಪ್ಡೇಟ್ಗಳ ಭರವಸೆ ನೀಡುತ್ತದೆ. ಇದು ರೂ. 2 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.
Hero Destini 125 Gets an Update: Hero MotoCorp ತನ್ನ ಅಪ್ಡೇಟ್ ಮಾದರಿಯ ಡೆಸ್ಟಿನಿ 125 ಸ್ಕೂಟರ್ ಅನ್ನು ಸೆಪ್ಟೆಂಬರ್ 7ರಂದು ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಹೊಸ ಮಾದರಿಯು ತಾಜಾ ವಿನ್ಯಾಸ, ಹೊಸ ಬಣ್ಣಗಳು, ವರ್ಧಿತ ವೈಶಿಷ್ಟ್ಯಗಳು ಮತ್ತು ಸುಧಾರಿತ ಫ್ಯೂಯಲ್ ಎಕಾನಮಿಯನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ತನ್ನ 124.6cc ಎಂಜಿನ್ ಮತ್ತು CVT ಆಟೋಮೆಟಿಕ್ ಟ್ರಾನ್ಸ್ಮಿಷನ್ ಒಳಗೊಂಡಿರುವ ಸಾಧ್ಯತೆ ಇದೆ.
Bajaj’s First Ethanol Bike: ಬಜಾಜ್ ಆಟೋ ತನ್ನ ಮೊದಲ ಎಥೆನಾಲ್‌ಚಾಲಿತ ಬೈಕ್‌ನೊಂದಿಗೆ ಪರಿಸರಸ್ನೇಹಿ ಜಾಗಕ್ಕೆ ಕಾಲಿಡುತ್ತಿದೆ. ವಿವರಗಳು ವಿರಳವಾಗಿದ್ದರೂ, ಗಮನಾರ್ಹವಾದ ಎಂಜಿನ್ ಮಾರ್ಪಡುಗಳನ್ನು ನಿರೀಕ್ಷಿಸಲಾಗಿದೆ. ಹೆಚ್ಚಿನ ಮಾಹಿತಿ ಬಿಡುಗಡೆಯ ನಂತರ ತಿಳಿದುಬರಲಿದೆ.